alex Certify ಉದ್ಯೋಗಿಗಳಿಗೆ ಶಾಕ್‌ ಕೊಟ್ಟ ಟೆಕ್‌ ದೈತ್ಯ ʼಮೈಕ್ರೋಸಾಫ್ಟ್‌ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ಶಾಕ್‌ ಕೊಟ್ಟ ಟೆಕ್‌ ದೈತ್ಯ ʼಮೈಕ್ರೋಸಾಫ್ಟ್‌ʼ

ಜಗತ್ತಿನ ದೈತ್ಯ ಟೆಕ್ ಕಂಪನಿಗಳಲ್ಲಿ ಒಂದಾದ ಮೈಕ್ರೋಸಾಫ್ಟ್ ಭಾರೀ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದೆ. ವಿಶ್ವದ ಅನೇಕ ದೊಡ್ಡ ಕಂಪನಿಗಳು ಆರ್ಥಿಕ ಕುಸಿತದ ನೆಪವೊಡ್ಡಿ ಈಗಾಗ್ಲೇ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿವೆ.

ಸತ್ಯ ನಾಡೆಲ್ಲಾ ಮುಂದಾಳತ್ವದ ಮೈಕ್ರೋಸಾಫ್ಟ್ ‘ಪುನರ್ರಚನೆ’ಯ ಭಾಗವಾಗಿ ಉದ್ಯೋಗಿಗಳನ್ನು ವಜಾಗೊಳಿಸಿದ ಮೊದಲ ಟೆಕ್ ದೈತ್ಯ ಎನಿಸಿಕೊಂಡಿದೆ. ಕಂಪನಿ ತನ್ನ ನಡೆ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿದೆ.

ಮೈಕ್ರೋಸಾಫ್ಟ್‌ ಕಚೇರಿಗಳು ಮತ್ತು ಉತ್ಪನ್ನ ವಿಭಾಗಗಳಲ್ಲಿನ 1.81 ಲಕ್ಷ ಉದ್ಯೋಗಿಗಳ ಪೈಕಿ ಕೇವಲ ಶೇ.1ರಷ್ಟು ಉದ್ಯೋಗಿಗಳನ್ನು ಮಾತ್ರ ವಜಾಗೊಳಿಸಲಾಗಿದೆ ಅನ್ನೋದು ಕಂಪನಿಯ ವಾದ. ಅದು ಕೂಡ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಸ್ಥೆ ಉದ್ಯೋಗಿಗಳನ್ನು ತೆಗೆದು ಹಾಕಿದೆಯಂತೆ. ಎಲ್ಲಾ ಕಂಪನಿಗಳಂತೆ ನಾವು ಸಹ ನಿಯಮಿತವಾಗಿ ನಮ್ಮ ವಹಿವಾಟು ಆದ್ಯತೆಗಳನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ರಚನಾತ್ಮಕ ಹೊಂದಾಣಿಕೆಗಳನ್ನು ಮಾಡುತ್ತೇವೆ. ನಾವು ವ್ಯವಹಾರದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ. ಮುಂಬರುವ ವರ್ಷದಲ್ಲಿ ಒಟ್ಟಾರೆ ಉದ್ಯೋಗಿಗಳನ್ನು ಹೆಚ್ಚಿಸುತ್ತೇವೆ ಎಂದು ಕಂಪನಿ ತನ್ನ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದೆ.

ಮೈಕ್ರೋಸಾಫ್ಟ್ ಕಂಪನಿ, ವಿಂಡೋಸ್, ಟೀಮ್‌ಗಳು ಮತ್ತು ಕಚೇರಿಯ ಟೀಮ್‌ಗಳಲ್ಲಿ ನೇಮಕಾತಿಯನ್ನು ಕಡಿಮೆ ಮಾಡಿದೆ. ಹಾಗಂತ ಮೈಕ್ರೋಸಾಫ್ಟ್‌ ನಷ್ಟದಲ್ಲೇನೂ ಇಲ್ಲ. ಮೂರನೇ ತ್ರೈಮಾಸಿಕದಲ್ಲಿ ಭರ್ತಿ ಗಳಿಕೆಯನ್ನೇ ಮಾಡಿದೆ. ಕ್ಲೌಡ್ ಆದಾಯದಲ್ಲಿ ಶೇ.26 ರಷ್ಟು ಬೆಳವಣಿಗೆಯಾಗಿದೆ. ಕಂಪನಿ ಗಳಿಸಿರೋ ಆದಾಯ 49.4 ಶತಕೋಟಿ ಡಾಲರ್‌. ಮೈಕ್ರೋಸಾಫ್ಟ್‌ ಮಾತ್ರವಲ್ಲದೆ ಇನ್ನೂ ಅನೇಕ ದೈತ್ಯ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಿವೆ.

ಟ್ವಿಟರ್ ಕೂಡ ತನ್ನ ನೇಮಕಾತಿ ತಂಡವನ್ನು 30 ಪ್ರತಿಶತದಷ್ಟು ಕಡಿತಗೊಳಿಸಿತ್ತು. ಎಲೋನ್ ಮಸ್ಕ್ ಮುಂದಾಳತ್ವದ ಟೆಸ್ಲಾ ಸಹ ನೂರಾರು ಉದ್ಯೋಗಿಗಳನ್ನು ನಿರಂತರವಾಗಿ ವಜಾಗೊಳಿಸುತ್ತಿದೆ. ಇದಲ್ಲದೆ ಎನ್ವಿಡಿಯಾ, ಸ್ನ್ಯಾಪ್, ಉಬರ್, ಸ್ಪಾಟಿಫೈ, ಇಂಟೆಲ್ ಮತ್ತು ಸೇಲ್ಸ್‌ಫೋರ್ಸ್ ಕೂಡ ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳನ್ನು ಮನೆಗೆ ಕಳಿಸ್ತಾ ಇವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...