
ಭಾರತೀಯ ರಿಸರ್ವ್ ಬ್ಯಾಂಕ್ 950 ಸಹಾಯಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ನೋಂದಣಿ ಪ್ರಕ್ರಿಯೆಯು ಫೆಬ್ರವರಿ 17ರಿಂದ ಆರಂಭಗೊಳ್ಳಲಿದೆ ಎಂದು ಆರ್.ಬಿ.ಐ. ಮಾಹಿತಿ ನೀಡಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮಾರ್ಚ್ 08 ಕೊನೆಯ ದಿನಾಂಕವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆರ್.ಬಿ.ಐ.ನ ಅಧಿಕೃತ ವೆಬ್ಸೈಟ್ rbi.org.in ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಹತಾ ಮಾನದಂಡ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ ಬ್ಯಾಚುಲರ್ ಡಿಗ್ರಿಯನ್ನು 50 ಪ್ರತಿಶತ ಅಂಕಗಳೊಂದಿಗೆ ಪಡೆದಿರಬೇಕು . ( ಎಸ್ಸಿ/ಎಸ್ಟಿ/ ಪಿಡಬ್ಲುಡಿ ಅಭ್ಯರ್ಥಿಗಳು ಉತ್ತೀರ್ಣರಾದರೆ ಸಾಕು)
ವಯಸ್ಸಿನ ಮಾನದಂಡ : ಕನಿಷ್ಟ 20 ಹಾಗೂ 28 ವರ್ಷ ವಯಸ್ಸು
ಅರ್ಜಿ ಶುಲ್ಕ : ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕು.
Gen/EWS/OBC ಅಭ್ಯರ್ಥಿಗಳು 450 ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು. SC/ST/PWD/Ex-S ಅಭ್ಯರ್ಥಿಗಳು 50 ರೂಪಾಯಿಯನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ..? : ಆಸಕ್ತ ಅಭ್ಯರ್ಥಿಗಳು ಆರ್.ಬಿ.ಐ.ನ ಅಧಿಕೃತ ವೆಬ್ಸೈಟ್ rbi.org.in. ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ಲೈನ್ ಅಪ್ಲಿಕೇಶನ್ ಆರಂಭ ದಿನಾಂಕ: 2022ರ ಫೆಬ್ರವರಿ 17
ಆನ್ಲೈನ್ ಅಪ್ಲಿಕೇಶನ್ಗೆ ಕೊನೆಯ ದಿನಾಂಕ : 2022ರ ಮಾರ್ಚ್ 08
ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ : 2022ರ ಮಾರ್ಚ್ 08
ಆರ್.ಬಿ.ಐ. ಸಹಾಯಕ ಆನ್ಲೈನ್ ಎಕ್ಸಾಂ ನಡೆಯುವ ದಿನಾಂಕ : ಮಾರ್ಚ್ 26 ಹಾಗೂ 27