alex Certify ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ESIC ನ 3,800 ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ESIC ನ 3,800 ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೌಕರರ ರಾಜ್ಯ ವಿಮಾ ಮಂಡಳಿ (ಇಎಸ್‌ಐಸಿ)ಯಲ್ಲಿ ಒಟ್ಟಾರೆ 3,847 ಹುದ್ದೆಗಳ ನೇಮಕಾತಿಗೆ ಚಾಲನೆ ಸಿಕ್ಕಿದೆ. ಉನ್ನತ ದರ್ಜೆ ಗುಮಾಸ್ತ, ಸ್ಟೆನೊಗ್ರಾಫರ್‌, ಬಹುಕಾರ್ಯ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ಬಿರುಸಿನಿಂದ ಸಾಗುತ್ತಿದೆ. ಈ ಬಗ್ಗೆ ಅಗತ್ಯ ವಿವರಗಳೊಂದಿಗೆ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
https://www.esic.nic.in. ವೆಬ್‌ಸೈಟ್‌ನಲ್ಲಿ ವಿವರಗಳು ಲಭ್ಯವಿದೆ.

2022ರ ಫೆಬ್ರವರಿ 15ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದೇ ತಿಂಗಳ 15 ರಿಂದ ನೋಂದಣಿ ಪ್ರಕ್ರಿಯೆಯು ವೆಬ್‌ಸೈಟ್‌ ಮೂಲಕ ಶುರುವಾಗಲಿದೆ. ಎಲ್ಲ ಮಾಹಿತಿಗಳು ಮತ್ತು ಅರ್ಜಿ ಸಲ್ಲಿಕೆಗೆ ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್‌ ಒಂದನ್ನೇ ಗಮನಿಸಲು ಮಂಡಳಿ ಸೂಚಿಸಿದೆ.

1930 ಹುದ್ದೆಗಳಿಗೆ ಮಲ್ಟಿ ಟಾಸ್ಕಿಂಗ್‌ ನೌಕರರ ನೇಮಕಾತಿ ನಡೆಯುತ್ತಿದೆ. ಸ್ಟೆನೊಗ್ರಾಫರ್‌ಗಳು 160 ಹುದ್ದೆಗಳಿಗೆ ಬೇಕಾಗಿದ್ದಾರೆ. ಇನ್ನು, ಅಪ್ಪರ್‌ ಡಿವಿಶನ್‌ ಕ್ಲರ್ಕ್‌ ಹುದ್ದೆಗಳು 1,700ಕ್ಕೂ ಹೆಚ್ಚು ಖಾಲಿ ಇದೆ ಎಂದು ಮಂಡಳಿ ಹೇಳಿದೆ.

ಕೇಂದ್ರ ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ನೌಕರರ ರಾಜ್ಯ ವಿಮಾ ಮಂಡಳಿ ಕಾರ್ಯನಿರ್ವಹಿಸುತ್ತದೆ. 1952ರ ಫೆ.25ರಂದು ಈ ಸಂಸ್ಥೆ ಆರಂಭಗೊಂಡಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...