alex Certify ಉತ್ತರ ಪ್ರದೇಶದ ಉನ್ನತ ಶಿಕ್ಷಣ ಸೇವಾ ಆಯೋಗದ ವೆಬ್​ಸೈಟ್​ ಹ್ಯಾಕ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದ ಉನ್ನತ ಶಿಕ್ಷಣ ಸೇವಾ ಆಯೋಗದ ವೆಬ್​ಸೈಟ್​ ಹ್ಯಾಕ್​​..!

ಉತ್ತರಪ್ರದೇಶದ ಉನ್ನತ ಶಿಕ್ಷಣ ಸೇವಾ ಆಯೋಗದ ವೆಬ್​ಸೈಟ್​ನ್ನು ಹ್ಯಾಕ್​ ಮಾಡಿದ ಹ್ಯಾಕರ್​ಗಳು ಕೆಲ ಪ್ರಸಿದ್ಧ ಕವಿಗಳ ಹೆಸರಿನಲ್ಲಿದ್ದ ಅಲಹಾಬಾದಿ ಎಂಬ ಪದವನ್ನು ಪ್ರಯಾಗ್​ ರಾಜ್​ ಎಂದು ಬದಲಿಸಿದ್ದಾರೆ ಎನ್ನಲಾಗಿದೆ. ಐತಿಹಾಸಿಕ ನಗರದ ಹೆಸರನ್ನು ಬದಲಾಯಿಸಿದ್ದಕ್ಕೆ ಆಕ್ರೋಶಗೊಂಡು ಈ ರೀತಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರಯಾಗ್​ರಾಜ್​ ಮೂಲದ ಆಯೋಗವು ತನ್ನ ಹಿಂದಿ ವೆಬ್​ಸೈಟ್​ನ್ನು ಹ್ಯಾಕರ್​ಗಳ ಕೈನಿಂದ ಬಚಾವ್​ ಮಾಡುವಲ್ಲಿ ಯಶಸ್ವಿಯಾಗಿದೆ. ಇದೀಗ ಇಂಗ್ಲೀಷ್​ ವೆಬ್​​ಸೈಟ್​​ನ್ನೂ ಮರುಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ಆಯೋಗದ ಅಧ್ಯಕ್ಷ ಈಶ್ವರ್​ ಚರಣ್​ ವಿಶ್ವಕರ್ಮ ಹೇಳಿದ್ದಾರೆ. ಇನ್ನು ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ಕೋರಿ ನಗರದ ಸೈಬರ್​ ಸೆಲ್​ಗೆ ದೂರು ನೀಡಿದ್ದೇವೆ ಎಂದು ಡಾ. ವಿಶ್ವಕರ್ಮ ಹೇಳಿದ್ದಾರೆ.

ಅಲಹಾಬಾದ್​ ಹೆಸರಿನ ಬದಲಾವಣೆಯ ಬಗ್ಗೆ ಕೆಲವು ಕಿಡಿಗೇಡಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನವುದು ಈ ಮೂಲಕ ಸ್ಪಷ್ಟವಾಗಿದೆ ಎಂದು ಡಾ. ವಿಶ್ವಕರ್ಮ ಹೇಳಿದ್ದಾರೆ. ವೆಬ್​ಸೈಟ್​​ ಈ ರೀತಿ ಆಗುವಲ್ಲಿ ಆಯೋಗವು ಯಾವುದೇ ರೀತಿಯಲ್ಲಿ ಪಾತ್ರ ವಹಿಸಿಲ್ಲ ಎಂದೂ ಇದೇ ವೇಳೆ ಹೇಳಿದರು.

ಹೆಸರಾಂತ ಕವಿಗಳಾದ ಅಕ್ಬರ್​ ಅಲಹಾಬಾದಿ, ತೇಜ್​​ ಅಲಹಾಬಾದಿ ಹಾಗೂ ರಶೀದ್​ ಅಲಹಾಬಾದಿ ಸೇರಿದಂತೆ ಅನೇಕರ ಹೆಸರುಗಳಲ್ಲಿ ಪ್ರಯಾಗ್​ ರಾಜ್​ ಎಂದು ಸೇರಿಸಲಾಗಿದೆ. ಈ ಹೆಸರುಗಳನ್ನು ಹಿಂದಿ ವೆಬ್​ಸೈಟ್​ನಲ್ಲಿ ಸರಿಪಡಿಸಿದ್ದೇವೆ. ಇಂಗ್ಲೀಷ್​ ವೆಬ್​ಸೈಟ್​ನಲ್ಲಿ ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ವಿಶ್ವ ಕರ್ಮ ಹೇಳಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...