alex Certify ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ​ಗೆ ಭಾರೀ ಮುಖಭಂಗ; ಪಕ್ಷದ ಪೋಸ್ಟರ್​ನಲ್ಲಿದ್ದ ಮಹಿಳೆಯರು ಬಿಜೆಪಿ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ​ಗೆ ಭಾರೀ ಮುಖಭಂಗ; ಪಕ್ಷದ ಪೋಸ್ಟರ್​ನಲ್ಲಿದ್ದ ಮಹಿಳೆಯರು ಬಿಜೆಪಿ ಸೇರ್ಪಡೆ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​​ಗೆ ಮತ್ತೊಂದು ಹಿನ್ನಡೆ ಎಂಬಂತೆ ‘ಲಡಕಿ ಹೂ, ಲಡ್​ ಸಕ್ತಿ ಹೂʼ ಎಂಬ ಕಾಂಗ್ರೆಸ್​ ಅಭಿಯಾನದ ಪೋಸ್ಟರ್​​​ ಗರ್ಲ್​ ವಂದನಾ ಸಿಂಗ್ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ ಹೈಕಮಾಂಡ್​ನ ನಿರ್ಲಕ್ಷ್ಯವನ್ನು ಸಹಿಸಲಾಗದೇ ಈ ನಿರ್ಧಾರ ಕೈಗೊಂಡಿರುವುದಾಗಿ ವಂದನಾ ಸಿಂಗ್​ ಹೇಳಿದ್ದಾರೆ.

ಇತ್ತೀಚಿಗೆ ಕಾಂಗ್ರೆಸ್​ ಸೇರ್ಪಡೆಯಾದವರಿಗೆ ಮಾತ್ರ ಹೈಕಮಾಂಡ್​ ಮಣೆ ಹಾಕುತ್ತಿದೆ. ನಾನು ಕಾಂಗ್ರೆಸ್​ಗಾಗಿ ಆರು ವರ್ಷಗಳ ಕಾಲ ದುಡಿದಿದ್ದೇನೆ. ನಾನು ಮಹಿಳಾ ವಿಂಗ್​​ನ ಉಪಾಧ್ಯಕ್ಷೆಯಾಗಿದ್ದೇನೆ. ಆದರೆ ನಮಗೆ ಇಲ್ಲಿಯವರೆಗೂ ಪ್ರಿಯಾಂಕಾ ಗಾಂಧಿ ಜೊತೆ ಮಾತನಾಡಲು ಅವಕಾಶವೇ ಸಿಕ್ಕಿಲ್ಲ. ನಮಗಾಗಿ ನಾವು ಮಾತನಾಡಲು ಈ ಪಕ್ಷದಲ್ಲಿ ಸಾಧ್ಯವೇ ಇಲ್ಲ ಎಂದು ವಂದನಾ ಹೇಳಿದ್ದಾರೆ.

ಈ ಹಿಂದೆ ಪೋಸ್ಟರ್​ನಲ್ಲಿದ್ದ ಪ್ರಿಯಾಂಕಾ ಮೌರ್ಯ ಕೂಡ ಬಿಜೆಪಿ ಸೇರ್ಪಡೆಯಾಗಿದ್ದರು. ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಪ್ರಿಯಾಂಕಾ ಮೌರ್ಯ ಆರೋಪಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...