ನಾಳಿನ ಡ್ರೆಸ್ ಗೆ ಇಂದು ಹಾಕಿದ ನೇಲ್ ಪಾಲಿಶ್ ಮ್ಯಾಚ್ ಆಗುತ್ತಿಲ್ಲವೇ. ಇದನ್ನು ತೆಗೆಯೋಣ ಎಂದುಕೊಂಡರೆ ಮನೆಯಲ್ಲಿ ತಂದಿಟ್ಟುಕೊಂಡಿರುವ ರಿಮೂವರ್ ಖಾಲಿಯಾಗಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ.
ನೀವು ಈಗಾಗಲೇ ಹಾಕಿಕೊಂಡಿರುವ ನೈಲ್ ಪಾಲಿಶ್ ಮೇಲೆ ಹೊಸ ಬಣ್ಣವನ್ನು ತೆಳುವಾಗಿ ಹಚ್ಚಿ. ತಕ್ಷಣ ಕಾಟನ್ ಬಟ್ಟೆಯಿಂದ ಒತ್ತಿ ಉಜ್ಜಿ. ಹೊಸ ಹಾಗೂ ಹಳೆಯ ಎರಡೂ ಬಣ್ಣಗಳು ನಿಮ್ಮ ಬಟ್ಟೆಯಲ್ಲಿ ಅಂಟಿಕೊಂಡು ನಿಮ್ಮ ಉಗುರುಗಳು ಸ್ವಚ್ಛವಾಗುತ್ತವೆ.
ನೀವು ಬಳಸುವ ಬಾಡಿ ಸ್ಪ್ರೇ ಯನ್ನು ಉಗುರಿನ ಮೇಲೆ ಸಿಂಪಡಿಸಿ. ಹತ್ತಿಯಿಂದ ಉಜ್ಜಿ ತೆಗೆದರೆ ನೇಲ್ ಪಾಲಿಶ್ ಹೋಗುತ್ತದೆ. ಮಾತ್ರವಲ್ಲ ಬೆರಳು ಸ್ವಚ್ಛವಾಗುತ್ತದೆ. ಟೂತ್ ಪೇಸ್ಟ್ ಕೂಡಾ ಇದೇ ಪರಿಣಾಮವನ್ನು ಬೀರುತ್ತದೆ.
ಕೊರೊನಾ ಬಂದ ಬಳಿಕ ಎಲ್ಲರ ಮನೆಯಲ್ಲೂ ಹ್ಯಾಂಡ್ ಸ್ಯಾನಿಟೈಸರ್ ಇದ್ದೇ ಇರುತ್ತದೆ. ಇದನ್ನು ಬೆರಳಿಗೆ ಹಚ್ಚಿ ಉಜ್ಜಿದರೂ ನೈಲ್ ಪಾಲಿಶ್ ಹೋಗುತ್ತದೆ.