alex Certify ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರವೆಸಗಲು ರಷ್ಯಾ ಸೈನಿಕರ ಪತ್ನಿಯರಿಂದಲೇ ಪ್ರೋತ್ಸಾಹ; ಶಾಕಿಂಗ್ ಸಂಗತಿ ಬಹಿರಂಗಪಡಿಸಿದ ಉಕ್ರೇನ್ ಪ್ರಥಮ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರವೆಸಗಲು ರಷ್ಯಾ ಸೈನಿಕರ ಪತ್ನಿಯರಿಂದಲೇ ಪ್ರೋತ್ಸಾಹ; ಶಾಕಿಂಗ್ ಸಂಗತಿ ಬಹಿರಂಗಪಡಿಸಿದ ಉಕ್ರೇನ್ ಪ್ರಥಮ ಮಹಿಳೆ

ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿ ಈಗಾಗಲೇ ಹಲವು ತಿಂಗಳುಗಳು ಕಳೆದಿವೆ. ಜಾಗತಿಕ ಸಮುದಾಯದ ಒತ್ತಡದ ನಡುವೆಯೂ ರಷ್ಯಾ, ಯುದ್ಧ ಕೊನೆಗಾಣಿಸಲು ಯತ್ನಿಸದೆ ಉಕ್ರೇನ್ ಜೊತೆಗೆ ಪಕ್ಕದ ದೇಶಗಳ ಮೇಲೂ ದಾಳಿಗೆ ಮುಂದಾಗಿದೆ.

ಇದರ ಮಧ್ಯೆ ಉಕ್ರೇನ್ ಅಧ್ಯಕ್ಷರ ಪತ್ನಿ ಗುರುತರ ಆರೋಪವೊಂದನ್ನು ಮಾಡಿದ್ದಾರೆ. ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರವೆಸಗಲು ರಷ್ಯಾ ಸೈನಿಕರಿಗೆ ಅವರ ಪತ್ನಿಯರೇ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಬಿಚ್ಚಿಟ್ಟಿದ್ದಾರೆ.

ಯುದ್ಧದಿಂದಾಗುವ ಲೈಂಗಿಕ ಹಿಂಸಾಚಾರ ತಡೆಗಟ್ಟುವ ಕುರಿತಂತೆ ಲಂಡನ್ ನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡುವ ವೇಳೆ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಯುದ್ಧದ ಸಂದರ್ಭದಲ್ಲಿ ತೋರುವ ಇಂತಹ ಮೃಗೀಯ ವರ್ತನೆ ಅತ್ಯಂತ ಹೇಯ ಕೃತ್ಯ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...