alex Certify ಉಕ್ರೇನ್ ನಿರಾಶ್ರಿತರ ಪಾಲಿಗೆ ಆಶ್ರಯ ತಾಣವಾಗಿ ಬದಲಾಗಿದೆ ಭಾರತೀಯ ಮೂಲದ ಈ ‌ʼರೆಸ್ಟೋರೆಂಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್ ನಿರಾಶ್ರಿತರ ಪಾಲಿಗೆ ಆಶ್ರಯ ತಾಣವಾಗಿ ಬದಲಾಗಿದೆ ಭಾರತೀಯ ಮೂಲದ ಈ ‌ʼರೆಸ್ಟೋರೆಂಟ್ʼ

ಉಕ್ರೇನ್​ನ ಮೇಲೆ ರಷ್ಯಾದ ಆಕ್ರಮಣದ ನಡುವೆಯೇ ಕೈವ್​ನಲ್ಲಿರುವ ಭಾರತೀಯ ರೆಸ್ಟೋರೆಂಟ್​​ ಒಂದು ಭಾರತೀಯ ವಿದ್ಯಾರ್ಥಿಗಳು ಹಾಗೂ ಉಕ್ರೇನಿಯನ್​​ ಪ್ರಜೆಗಳ ಪಾಲಿಗೆ ಆಶ್ರಯ ತಾಣವಾಗಿ ಬದಲಾಗಿದೆ. ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಸಂತ್ರಸ್ತರಿಗೆ ಇಲ್ಲಿ ಆಶ್ರಯ ನೀಡುವ ಜೊತೆಯಲ್ಲಿ ಉಚಿತ ಆಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಉಕ್ರೇನ್​ನಲ್ಲಿ ರಷ್ಯಾದ ದಾಳಿಯು ಆರಂಭವಾದಾಗಿನಿಂದ ಸಾಥಿಯಾ ರೆಸ್ಟೋರೆಂಟ್​ ಏನಿಲ್ಲವೆಂದರೂ ಈವರೆಗೆ 70 ಮಂದಿ ನಿರಾಶ್ರಿತರಿಗೆ ಆಶ್ರಯವನ್ನು ಕಲ್ಪಿಸಿದೆ. ಇದು ನೆಲಮಾಳಿಗೆಯಲ್ಲಿರುವ ರೆಸ್ಟೋರೆಂಟ್​ ಆಗಿರುವುದರಿಂದ ಒಂದು ರೀತಿಯಲ್ಲಿ ಬಾಂಬ್​ ಬಂಕರ್​ ಆಗಿ ಮಾರ್ಪಟ್ಟಿದೆ ಎಂದು ಮಾಲೀಕ ಮನೀಶ್​ ಡೇವ್​ ಹೇಳಿದರು. ಜನರು ತಮ್ಮ ಲಗೇಜ್​ಗಳ ಸಮೇತ ಈ ಸಾಥಿಯಾ ರೆಸ್ಟೋರೆಂಟ್​ ಕಡೆಗೆ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ.

ಉಕ್ರೇನ್​​ನ ಅನೇಕ ಪ್ರಜೆಗಳು ನನ್ನ ರೆಸ್ಟೋರೆಂಟ್​​ ಗೆ ಬಂದಿದ್ದಾರೆ. ಇಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ನಾನು ನಂಬಿದ್ದೇನೆ. ರೆಸ್ಟೋರೆಂಟ್​ ನೆಲಮಾಳಿಗೆಯಲ್ಲಿರುವುದರಿಂದ ಬಾಂಬ್​ ಶೆಲ್ಟರ್​ನಂಥಾಗಿದೆ. ನಾವು ಎಲ್ಲರಿಗೂ ಆಹಾರದ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ ಎಂದು ರೆಸ್ಟೋರೆಂಟ್​ ಮಾಲೀಕ ಮನೀಶ್​ ಡೇವ್​ ಹೇಳಿದರು.

— GOOD (@good) February 27, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...