ಉಕ್ರೇನ್ ನಿರಾಶ್ರಿತರ ಪಾಲಿಗೆ ಆಶ್ರಯ ತಾಣವಾಗಿ ಬದಲಾಗಿದೆ ಭಾರತೀಯ ಮೂಲದ ಈ ʼರೆಸ್ಟೋರೆಂಟ್ʼ 01-03-2022 2:34PM IST / No Comments / Posted In: Latest News, Live News, International ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದ ನಡುವೆಯೇ ಕೈವ್ನಲ್ಲಿರುವ ಭಾರತೀಯ ರೆಸ್ಟೋರೆಂಟ್ ಒಂದು ಭಾರತೀಯ ವಿದ್ಯಾರ್ಥಿಗಳು ಹಾಗೂ ಉಕ್ರೇನಿಯನ್ ಪ್ರಜೆಗಳ ಪಾಲಿಗೆ ಆಶ್ರಯ ತಾಣವಾಗಿ ಬದಲಾಗಿದೆ. ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಸಂತ್ರಸ್ತರಿಗೆ ಇಲ್ಲಿ ಆಶ್ರಯ ನೀಡುವ ಜೊತೆಯಲ್ಲಿ ಉಚಿತ ಆಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಕ್ರೇನ್ನಲ್ಲಿ ರಷ್ಯಾದ ದಾಳಿಯು ಆರಂಭವಾದಾಗಿನಿಂದ ಸಾಥಿಯಾ ರೆಸ್ಟೋರೆಂಟ್ ಏನಿಲ್ಲವೆಂದರೂ ಈವರೆಗೆ 70 ಮಂದಿ ನಿರಾಶ್ರಿತರಿಗೆ ಆಶ್ರಯವನ್ನು ಕಲ್ಪಿಸಿದೆ. ಇದು ನೆಲಮಾಳಿಗೆಯಲ್ಲಿರುವ ರೆಸ್ಟೋರೆಂಟ್ ಆಗಿರುವುದರಿಂದ ಒಂದು ರೀತಿಯಲ್ಲಿ ಬಾಂಬ್ ಬಂಕರ್ ಆಗಿ ಮಾರ್ಪಟ್ಟಿದೆ ಎಂದು ಮಾಲೀಕ ಮನೀಶ್ ಡೇವ್ ಹೇಳಿದರು. ಜನರು ತಮ್ಮ ಲಗೇಜ್ಗಳ ಸಮೇತ ಈ ಸಾಥಿಯಾ ರೆಸ್ಟೋರೆಂಟ್ ಕಡೆಗೆ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ. ಉಕ್ರೇನ್ನ ಅನೇಕ ಪ್ರಜೆಗಳು ನನ್ನ ರೆಸ್ಟೋರೆಂಟ್ ಗೆ ಬಂದಿದ್ದಾರೆ. ಇಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ನಾನು ನಂಬಿದ್ದೇನೆ. ರೆಸ್ಟೋರೆಂಟ್ ನೆಲಮಾಳಿಗೆಯಲ್ಲಿರುವುದರಿಂದ ಬಾಂಬ್ ಶೆಲ್ಟರ್ನಂಥಾಗಿದೆ. ನಾವು ಎಲ್ಲರಿಗೂ ಆಹಾರದ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ ಎಂದು ರೆಸ್ಟೋರೆಂಟ್ ಮಾಲೀಕ ಮನೀಶ್ ಡೇವ್ ಹೇಳಿದರು. A man called Manish Dave has turned his restaurant into a shelter for over 125 vulnerable people in Ukraine. He & his staff cook food & risk their lives in search of ration for them all. The world needs more people like Manish Dave. pic.twitter.com/ZnQlViwDoZ — GOOD (@good) February 27, 2022