alex Certify ಉಕ್ರೇನ್ ನಿರಾಶ್ರಿತರಿಗೆ ಭಾರತೀಯ ಬಾಲಕನಿಂದ ಸಹಾಯಹಸ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್ ನಿರಾಶ್ರಿತರಿಗೆ ಭಾರತೀಯ ಬಾಲಕನಿಂದ ಸಹಾಯಹಸ್ತ

ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿದಾಗಿನಿಂದ, ಉಕ್ರೇನ್‌ಗೆ ದೇಣಿಗೆ ಸಂಗ್ರಹಿಸಲು ಜಗತ್ತಿನ ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಒಗ್ಗೂಡುವುದರೊಂದಿಗೆ ಈ ದೇಶದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ಯುದ್ಧದ ಪರಿಣಾಮವಾಗಿ, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದು, ಇತರ ದೇಶಗಳಲ್ಲಿ ಆಶ್ರಯ ಪಡೆಯಬೇಕಾಯಿತು.

ಯುದ್ಧದಿಂದ ಧ್ವಂಸಗೊಂಡ ರಾಷ್ಟ್ರದ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ, 15 ವರ್ಷದ ಭಾರತೀಯ ಬಾಲಕ ಆಪ್ ನಿರ್ಮಿಸಿದ್ದಾನೆ. ಇದು ನೆರೆಯ ದೇಶಗಳಲ್ಲಿ ಉಕ್ರೇನಿಯನ್ ನಿರಾಶ್ರಿತರನ್ನು ಸಂಪರ್ಕಿಸಲು ಸಹಾಯ ಮಾಡುವ ಅಪ್ಲಿಕೇಶನ್ ಆಗಿದೆ.

ಗಮನಾರ್ಹವಾಗಿ, ತೇಜಸ್ ರವಿಶಂಕರ್ ಎಂದು ಗುರುತಿಸಲಾದ ಬಾಲಕ, ಸಿಕ್ವೊಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ರವಿಶಂಕರ್ ಅವರ ಪುತ್ರನಾಗಿದ್ದಾನೆ. ಸಾಫ್ಟ್‌ವೇರ್ ಡೆವಲಪರ್ ಆಗಿರುವ ತೇಜಸ್ ಕೇವಲ ಎರಡು ವಾರಗಳಲ್ಲಿ ಈ ಆ್ಯಪ್ ನಿರ್ಮಿಸಿದ್ದಾರೆ. ಇದಕ್ಕೆ ಆಶ್ರಯ (ರೆಫ್ಯೂಜ್ ಆಪ್) ಎಂದು ಹೆಸರಿಟ್ಟಿದ್ದಾರೆ.

ತೇಜಸ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗೆ ಲಿಂಕ್ ಅನ್ನು ಟ್ವೀಟ್ ಮಾಡಿದ್ದಾರೆ. ಉಕ್ರೇನ್‌ನಲ್ಲಿರುವ ತಮ್ಮ ಮನೆಗಳಿಂದ ಸ್ಥಳಾಂತರಗೊಂಡವರಿಗೆ ಸಹಾಯ ಮಾಡುವ ಉದ್ದೇಶವನ್ನು ಈ ಆಪ್ ಹೊಂದಿದೆ ಎಂದು ತಿಳಿಸಿದ್ದಾರೆ. ಸಹಾಯವನ್ನು ನೀಡುವ ವ್ಯಕ್ತಿಗಳು ಸಹಾಯದ ಅಗತ್ಯವಿರುವವರೊಂದಿಗೆ ಸಂಪರ್ಕ ಸಾಧಿಸಲು ಆಶ್ರಯ ಅಪ್ಲಿಕೇಶನ್ ಉಪಯುಕ್ತವಾಗಿದೆ. ಇದನ್ನು ದಯವಿಟ್ಟು ರೀಟ್ವೀಟ್ ಮಾಡಿ ಎಂದು ವಿನಂತಿಸಿದ್ದಾರೆ.

ಆಶ್ರಯ ಅಪ್ಲಿಕೇಶನ್‌ನ ವೈಶಿಷ್ಟ್ಯಗಳು:

ನಿರಾಶ್ರಿತರಿಗೆ ಹತ್ತಿರದ ಸಹಾಯ ಸ್ಥಳವನ್ನು ಹುಡುಕಲು ಅಪ್ಲಿಕೇಶನ್ ಇಡೀ ಪ್ರಪಂಚದ ನಕ್ಷೆಯನ್ನು ಹೊಂದಿದೆ.

ರಾಷ್ಟ್ರೀಯ ಐಡಿ ಆಧಾರಿತ ಪರಿಶೀಲನಾ ಸೌಲಭ್ಯಗಳು, ಆಹಾರ, ಉಳಿದುಕೊಳ್ಳಲು ಸುರಕ್ಷಿತ ಸ್ಥಳಗಳು ಮತ್ತು ಪ್ರಪಂಚದಾದ್ಯಂತ ಔಷಧಿಗಳಂತಹ ಅವಶ್ಯಕತೆಗಳನ್ನು ಪೂರೈಸಲು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಅಗತ್ಯವಿರುವ ಯಾರಾದರೂ ಕೇವಲ ಎರಡು ಕ್ಲಿಕ್‌ಗಳಲ್ಲಿ ಅಗತ್ಯವಿರುವ ಸಹಾಯವನ್ನು ಪಡೆಯಬಹುದು. ಹಾಗೂ ಈ ಅಪ್ಲಿಕೇಶನ್ 12 ಭಾಷೆಗಳಲ್ಲಿ ಅನುವಾದಿಸುತ್ತದೆ.

ತೇಜಸ್ ತಂದೆ ಜಿ.ವಿ.ರವಿಶಂಕರ್ ಅವರು ತಮ್ಮ ಪುತ್ರನ ಸಾಧನೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಮಗನ ಯಶಸ್ಸನ್ನು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...