alex Certify ಉಕ್ರೇನ್ ಅರೆಸೇನಾಪಡೆ ಸೇರಿದ್ದ ಭಾರತೀಯನಿಂದ ತವರಿಗೆ ಮರಳಲು ಇಂಗಿತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್ ಅರೆಸೇನಾಪಡೆ ಸೇರಿದ್ದ ಭಾರತೀಯನಿಂದ ತವರಿಗೆ ಮರಳಲು ಇಂಗಿತ….!

ರಷ್ಯಾದ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೇನಾಪಡೆಗೆ ಸೇರಿದ್ದ ಭಾರತೀಯ ಮೂಲಕ ಸಾಯಿನಿಖೇಶ್ ತವರಿಗೆ ಮರಳುವ ಸಾಧ್ಯತೆಯಿದೆ ಎಂದು ಆತನ ತಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಇಪ್ಪತ್ತೊಂದು ವರ್ಷದ ಸಾಯಿನಿಖೇಶ್ ರಷ್ಯಾ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೇನಾ ಪಡೆಗೆ ಸೇರಿದ್ದರು. ಇದರಿಂದ ಅವರ ಪೋಷಕರು ಚಿಂತಾಕ್ರಾಂತರಾಗಿದ್ದು, ಶೀಘ್ರದಲ್ಲೇ ಮಗ ಮರಳುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಸಾಯಿನಿಖೇಶ್ ಶೀಘ್ರದಲ್ಲೇ ತನ್ನ ತವರು ಕೊಯಮತ್ತೂರಿಗೆ ಮರಳಲು ಸಿದ್ಧರಿದ್ದಾರೆ ಎಂದು ಅವರ ತಂದೆ ರವಿಚಂದ್ರನ್ ಹೇಳಿದ್ದಾರೆ. ಸಾಯಿನಿಖೇಶ್ ಉಕ್ರೇನ್‌ನ ಖಾರ್ಕಿವ್‌ನಲ್ಲಿರುವ ನ್ಯಾಷನಲ್ ಏರೋಸ್ಪೇಸ್ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಏರೋಸ್ಪೇಸ್ ಇಂಜಿನಿಯರಿಂಗ್ ಓದುತ್ತಿದ್ದರು. ಫೆಬ್ರವರಿಯಲ್ಲಿ ಅವರು ಸ್ವಯಂಸೇವಕರನ್ನೊಳಗೊಂಡ ಅರೆಸೈನಿಕ ಘಟಕವಾದ ಜಾರ್ಜಿಯನ್ ನ್ಯಾಷನಲ್ ಲೀಜನ್‌ಗೆ ಸೇರಿದ್ದರು.

ಸಾಯಿನಿಖೇಶ್ ಅವರ ಎತ್ತರದ ಕಾರಣದಿಂದಾಗಿ ಭಾರತೀಯ ಸೇನೆಯಿಂದ ಎರಡು ಬಾರಿ ಅವರನ್ನು ತಿರಸ್ಕರಿಸಲಾಯಿತು. ಕೇಂದ್ರ ಸರ್ಕಾರದ ಅಧಿಕಾರಿಗಳು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ತಮ್ಮ ಮಗನನ್ನು ಪತ್ತೆಹಚ್ಚಿ ಶೀಘ್ರದಲ್ಲೇ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಾಯಿನಿಖೇಶ್ ತಂದೆ ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ಸಾಯಿನಿಖೇಶ್ ಅವರನ್ನು ಸಂಪರ್ಕಿಸಿದ್ದು, ಶೀಘ್ರದಲ್ಲೇ ಭಾರತಕ್ಕೆ ಮರಳಲು ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ. ಆದರೆ, ಅಂದಿನಿಂದ ಆತನೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಅಧಿಕಾರಿಗಳು ತಮ್ಮನ್ನು ಯಾವುದೇ ಸಮಯದಲ್ಲಿ ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ. ತಮ್ಮ ಪುತ್ರನನ್ನು ಉಕ್ರೇನ್‌ನಿಂದ ಶೀಘ್ರದಲ್ಲೇ ಭಾರತಕ್ಕೆ ಕರೆದುಕೊಂಡು ಬರುವ ಭರವಸೆಯಿದೆ ಎಂದು ಸಾಯಿನಿಖೇಶ್ ತಂದೆ ತಿಳಿಸಿದ್ದಾರೆ.

ಆದರೆ, ಭಾರತಕ್ಕೆ ಮರಳುವಂತೆ ಪೋಷಕರು ಕೇಳಿದಾಗ ಸಾಯಿನಿಖೇಶ್ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯುದ್ಧ ಪ್ರದೇಶದಲ್ಲಿ ಜನರನ್ನು ಸಂಪರ್ಕಿಸುವುದು ಕಷ್ಟ ಎಂದು ಅಧಿಕಾರಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...