
ಈಗಾಗಲೇ ಉಕ್ರೇನ್ನಲ್ಲಿ ಸಾಕಷ್ಟು ಸಾವು ನೋವುಗಳು ಉಂಟಾಗಿವೆ. ಅದೇ ರೀತಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಉಕ್ರೇನ್ನ ವ್ಯಕ್ತಿಯೊಬ್ಬ ತನ್ನ ಪುಟ್ಟ ಮಗಳನ್ನು ನಾಗರಿಕರ ಸುರಕ್ಷಿತ ವಲಯಕ್ಕೆ ಕಳುಹಿಸುವ ಮುನ್ನ ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ರಷ್ಯಾ ಪಡೆಗಳ ವಿರುದ್ಧ ಹೋರಾಡುವ ವ್ಯಕ್ತಿಯು ಕಣ್ಣೀರು ಹಾಕುತ್ತಾನೆ. ತಂದೆಯನ್ನು ಕಂಡು ಮಗಳು ಕೂಡ ಕಣ್ಣೀರಾಕುತ್ತಿರುವ ದೃಶ್ಯ ಮನಕಲಕುವಂತಿದೆ.
ನ್ಯೂ ನ್ಯೂಸ್ ಇಯು ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು, ತನ್ನ ಕುಟುಂಬವನ್ನು ಸುರಕ್ಷಿತ ವಲಯಕ್ಕೆ ಕಳುಹಿಸಿದ ತಂದೆಯು ತನ್ನ ಪುಟ್ಟ ಹುಡುಗಿಗೆ ವಿದಾಯ ಹೇಳುತ್ತಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ.