alex Certify ಉಕ್ರೇನ್​​ ಗಡಿಯಲ್ಲಿ ರಷ್ಯಾದಿಂದ ಸೇನಾಪಡೆ ನಿಯೋಜನೆ…! ಉಪಗ್ರಹ ಫೋಟೋದಿಂದ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್​​ ಗಡಿಯಲ್ಲಿ ರಷ್ಯಾದಿಂದ ಸೇನಾಪಡೆ ನಿಯೋಜನೆ…! ಉಪಗ್ರಹ ಫೋಟೋದಿಂದ ಬಹಿರಂಗ

ರಷ್ಯಾವು ಉಕ್ರೇನ್​​ ಗಡಿಯ ಸಮೀಪದಲ್ಲಿ ಶಸ್ತ್ರಸಜ್ಜಿತ ಉಪಕರಣಗಳು ಹಾಗೂ ಸೇನಾಪಡೆಗಳನ್ನು ನಿಯೋಜನೆ ಮಾಡುತ್ತಿದೆ ಎಂದು ಅಮೆರಿಕವು ಹೇಳಿದೆ. ಅಮೆರಿಕದ ಖಾಸಗಿ ಕಂಪನಿಯು ಉಪಗ್ರಹ ಚಿತ್ರಗಳನ್ನು ಪ್ರಸ್ತುತಪಡಿಸುವ ಮೂಲಕ ಈ ಮಾಹಿತಿಯನ್ನು ನೀಡಿದೆ.

ಹೊಸ ಚಟುವಟಿಕೆಯು ಹೆಚ್ಚಿದ ಮಿಲಿಟರಿ ಸನ್ನದ್ಧತೆಯನ್ನು ಸೂಚಿಸುತ್ತದೆ ಎಂದು ಅಮೆರಿಕ ಮೂಲದ ಮ್ಯಾಕ್ಸರ್ ಟೆಕ್ನಾಲಜೀಸ್ ನಿರ್ದೇಶಕರು ಹೇಳಿದ್ದಾರೆ. ಅನೇಕ ವಾರಗಳ ಕಾಲ ರಷ್ಯಾದ ಸೇನಾ ಚಟುವಟಿಕೆಯನ್ನು ಟ್ರ್ಯಾಕ್​ ಮಾಡಿರುವ ಖಾಸಗಿ ಕಂಪನಿಯು ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

ಈ ಹೊಸ ಚಟುವಟಿಕೆಯು ರಷ್ಯಾದಲ್ಲಿ ಈ ಹಿಂದೆ ಇದ್ದ ಯುದ್ಧ ಚಟುವಟಿಕೆಗಳಲ್ಲಿ ಆಗಿರುವ ಬದಲಾವಣೆಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ಮ್ಯಾಕ್ಸರ್​ ಹೇಳಿದರು. ಉಪಗ್ರಹಗಳ ಚಿತ್ರಗಳು ನೀಡಿರುವ ಮಾಹಿತಿಯ ಪ್ರಕಾರ ಫೆಬ್ರವರಿ 13ರ ಸುಮಾರಿಗೆ ರಷ್ಯಾದ ಸೊಲಿಟಿಯಲ್ಲಿರುವ ಮಿಲಿಟರಿ ಗ್ಯಾರಿಸನ್​​ ಸುತ್ತಲೂ ಯುದ್ಧ ಗುಂಪುಗಳ ದೊಡ್ಡ ನಿಯೋಜನೆಯನ್ನು ಗಮನಿಸಲಾಗಿದೆ ಎಂದು ಮ್ಯಾಕ್ಸರ್​ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...