alex Certify ‘ಉಕ್ರೇನ್​​ನಿಂದ ವಾಪಸ್ಸಾದವನು ನನ್ನ ಪುತ್ರನಲ್ಲ, ಮೋದಿ ಪುತ್ರ’: ಭಾವುಕ ತಂದೆಯ ನುಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಉಕ್ರೇನ್​​ನಿಂದ ವಾಪಸ್ಸಾದವನು ನನ್ನ ಪುತ್ರನಲ್ಲ, ಮೋದಿ ಪುತ್ರ’: ಭಾವುಕ ತಂದೆಯ ನುಡಿ

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರದ ದಿಟ್ಟ ನಡೆಗೆ ಸಾಕಷ್ಟು ಪ್ರಶಂಸೆಗಳು ಕೇಳಿ ಬರುತ್ತಿವೆ. ಅದೇ ರೀತಿ ಕಾಶ್ಮೀರದ ಸಂಜಯ್​ ಪಂಡಿತ್​ ಎಂಬವರು ಉಕ್ರೇನ್​ನಲ್ಲಿ ಸಿಲುಕಿದ್ದ ತಮ್ಮ ಮಗನನ್ನು ಮಡಿಲಿಗೆ ಸೇರಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಉಕ್ರೇನ್​ನಿಂದ ಮರಳಿ ಬಂದಿರುವುದು ಮೋದಿಯ ಮಗನೇ ಹೊರತು ನನ್ನ ಮಗನಲ್ಲ ಎಂದು ನಾನು ಹೇಳಬಯಸುತ್ತೇನೆ. ಯುದ್ಧಪೀಡಿತ ಉಕ್ರೇನ್​ನಿಂದ ಮಗ ಮರಳುತ್ತಾನೆ ಎಂಬ ಭರವಸೆ ನಮಗಿರಲಿಲ್ಲ ಎಂದು ಹೇಳುತ್ತಾ ಸಂಜಯ್​ ಪಂಡಿತ್​ ಭಾವುಕರಾದರು.

ಸುಮಿಯಲ್ಲಿನ ಪರಿಸ್ಥಿತಿಯನ್ನು ನೋಡುತ್ತಿದ್ದರೆ ನಮಗೆ ಯಾವುದೇ ಭರವಸೆ ಇರಲಿಲ್ಲ. ಆದರೆ ಅಂತಹ ಸ್ಥಳದಿಂದ ನನ್ನ ಮಗನನ್ನು ಸುರಕ್ಷಿತವಾಗಿ ತಲುಪಿಸಿದ ಕೇಂದ್ರ ಸರ್ಕಾರಕ್ಕೆ ನಾನು ಕೃತಜ್ಞ ಎಂದು ಸಂಜಯ್​ ಪಂಡಿತ್​ ಹೇಳಿದರು.

ವಿದ್ಯಾರ್ಥಿಗಳು ದೆಹಲಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಐದಾರು ಗಂಟೆಗಳಿಂದ ಮಕ್ಕಳ ಆಗಮನಕ್ಕಾಗಿ ಅಲ್ಲೇ ಕಾಯುತ್ತಿದ್ದ ಪೋಷಕರು ಮಕ್ಕಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುವ ದೃಶ್ಯಗಳು ಮನ ಕಲಕುವಂತಿವೆ.

— ANI (@ANI) March 11, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...