
ಉಕ್ರೇನ್ನಿಂದ ಮರಳಿ ಬಂದಿರುವುದು ಮೋದಿಯ ಮಗನೇ ಹೊರತು ನನ್ನ ಮಗನಲ್ಲ ಎಂದು ನಾನು ಹೇಳಬಯಸುತ್ತೇನೆ. ಯುದ್ಧಪೀಡಿತ ಉಕ್ರೇನ್ನಿಂದ ಮಗ ಮರಳುತ್ತಾನೆ ಎಂಬ ಭರವಸೆ ನಮಗಿರಲಿಲ್ಲ ಎಂದು ಹೇಳುತ್ತಾ ಸಂಜಯ್ ಪಂಡಿತ್ ಭಾವುಕರಾದರು.
ಸುಮಿಯಲ್ಲಿನ ಪರಿಸ್ಥಿತಿಯನ್ನು ನೋಡುತ್ತಿದ್ದರೆ ನಮಗೆ ಯಾವುದೇ ಭರವಸೆ ಇರಲಿಲ್ಲ. ಆದರೆ ಅಂತಹ ಸ್ಥಳದಿಂದ ನನ್ನ ಮಗನನ್ನು ಸುರಕ್ಷಿತವಾಗಿ ತಲುಪಿಸಿದ ಕೇಂದ್ರ ಸರ್ಕಾರಕ್ಕೆ ನಾನು ಕೃತಜ್ಞ ಎಂದು ಸಂಜಯ್ ಪಂಡಿತ್ ಹೇಳಿದರು.
ವಿದ್ಯಾರ್ಥಿಗಳು ದೆಹಲಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಐದಾರು ಗಂಟೆಗಳಿಂದ ಮಕ್ಕಳ ಆಗಮನಕ್ಕಾಗಿ ಅಲ್ಲೇ ಕಾಯುತ್ತಿದ್ದ ಪೋಷಕರು ಮಕ್ಕಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುವ ದೃಶ್ಯಗಳು ಮನ ಕಲಕುವಂತಿವೆ.