alex Certify ಈ ಹಣ್ಣುಗಳೊಂದಿಗೆ ಸ್ನೇಹ ಬೆಳೆಸಿ, ಆರಾಮಾಗಿ ತೂಕ ಇಳಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಣ್ಣುಗಳೊಂದಿಗೆ ಸ್ನೇಹ ಬೆಳೆಸಿ, ಆರಾಮಾಗಿ ತೂಕ ಇಳಿಸಿ

ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಕೆಲವು ಹಣ್ಣುಗಳಂತೂ ನಿಮ್ಮ ತೂಕವನ್ನೂ ಕಡಿಮೆ ಮಾಡಲು ಸಹಕರಿಸುತ್ತವೆ. ಹಾಗಾಗಿ ಅಂತಹ ಹಣ್ಣುಗಳ ಜೊತೆ ಸ್ನೇಹ ಬೆಳೆಸಿ.

ದ್ರಾಕ್ಷಿ : ಇವತ್ತಿನಿಂದ್ಲೇ ದ್ರಾಕ್ಷಿ ಹಣ್ಣು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸೇಬು : ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ ಅನ್ನೋ ಮಾತೇ ಇದೆ. ಈ ಮಾತು ಸತ್ಯವಾದದ್ದು. ಸೇಬು ಹಣ್ಣು ಕಡಿಮೆ ಕ್ಯಾಲೋರಿ ಹೊಂದಿರುತ್ತದೆ. ಹಾಗಾಗಿ ತೂಕ ಹೆಚ್ಚಾಗಬಹುದೆಂಬ ಭಯ ಬಿಟ್ಟು ಸೇಬು ತಿನ್ನಿ. ಇದನ್ನು ತಿನ್ನುವುದರಿಂದ ನಿಮ್ಮ ಕೊಲೆಸ್ಟ್ರಾಲ್‌ ಲೆವಲ್‌ ಕೂಡ ನಿಯಂತ್ರಣದಲ್ಲಿರುತ್ತದೆ.

ಬೆರ್ರಿ ಹಣ್ಣುಗಳು : ಬೆರ್ರಿ ಹಣ್ಣುಗಳನ್ನು ತಿನ್ನುವ ಮೂಲಕವೂ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ನಿತ್ಯದ ಆಹಾರದಲ್ಲಿ ಅರ್ಧ ಕಪ್ ಬೆರ್ರಿಗಳನ್ನು ಸೇವಿಸಿದರೆ, ಅದು ನಿಮಗೆ 42 ಕ್ಯಾಲೋರಿಗಳನ್ನು ಒದಗಿಸುತ್ತದೆ. ದೇಹಕ್ಕೆ ಬೇಕಾದ ಸುಮಾರು 12 ಪ್ರತಿಶತದಷ್ಟು ವಿಟಮಿನ್-ಸಿ ಮತ್ತು ಮ್ಯಾಂಗನೀಸ್ ಅಂಶವನ್ನು ಕೂಡ ಒದಗಿಸುತ್ತದೆ.

ಕಿವಿ ಹಣ್ಣು : ಸಪೋಟಾ ಹಣ್ಣಿನಂತೆ ಕಾಣುವ ಕಿವಿ ಹಣ್ಣು ಅತ್ಯಂತ ಪೌಷ್ಠಿಕವಾಗಿದೆ. ಈ ಹಣ್ಣನ್ನು ಪ್ರತಿದಿನ ಸೇವಿಸುವುದು ಒಳ್ಳೆಯದು. ನಿಯಮಿತವಾಗಿ ಇದನ್ನು ತಿನ್ನುವುದರಿಂದ ತೂಕ ಕಡಿಮೆ ಮಾಡಿಕೊಳ್ಳುವುದು ಸುಲಭವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...