ಹಾಲು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಇದರಲ್ಲಿ ಕ್ಯಾಲ್ಸಿಯಂ ಮತ್ಯು ಪ್ರೋಟೀನ್ ಗಳು ಅಧಿಕವಾಗಿರುವುದರಿಂದ ಇದು ನಮ್ಮ ಮೂಳೆಗಳನ್ನು, ಎಲುಬುಗಳನ್ನು ಬಲಪಡಿಸಲು ಹಾಗೂ ಕೂದಲು, ಚರ್ಮ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಆದರೆ ಈ ಸಮಸ್ಯೆ ಇರುವವರು ಮಾತ್ರ ಹಾಲನ್ನು ಸೇವಿಸಬಾರದು.
ಆಯುರ್ವೇದದ ಪ್ರಕಾರ ಪಿತ್ತಜನಕಾಂಗದಲ್ಲಿ ಕೊಬ್ಬಿನಾಂಶ ಹೆಚ್ಚಾಗಿ ಸಮಸ್ಯೆಯಿಂದ ಬಳಲುತ್ತಿರುವವರು ಹಾಲನ್ನು ಸೇವಿಸಬಾರದು. ಯಾಕೆಂದರೆ ಇದು ಅವರ ದೇಹದಲ್ಲಿ ವಿಷದಂತೆ ವರ್ತಿಸುತ್ತದೆ. ಅವರಿಗೆ ಹಾಲನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ಯಕೃತ್ತ ಊದಿಕೊಂಡು ಅನಾರೋಗ್ಯ ಸಮಸ್ಯೆ ಉಲ್ಭಣಗೊಳ್ಳುತ್ತದೆ.
ಆದರೆ ಇವರು ಮೊಸರು ಮತ್ತು ಮಜ್ಜಿಗೆಗೆ ಜೀರಿಗೆ ಹಾಕಿಕೊಂಡು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಯಾಕೆಂದರೆ ಜೀರಿಗೆ ಯಕೃತ್ತಿನ ಹೀರಿಕೊಳ್ಳುವ ಸಾಮಾರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.