ಮೊಬೈಲ್ ಫೋನ್ಗಳಿಗೆ ಎಂತವರ ಚಿತ್ತವನ್ನು ಕೂಡ ತನ್ನತ್ತ ಸೆಳೆಯುವ ಶಕ್ತಿಯಿದೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮೊಬೈಲ್ಗಳ ಮೇಲಿನ ಅತಿಯಾದ ಮೋಹ ಡೆಡ್ಲಿ ಅಪಘಾತಗಳಿಗೆ ಕಾರಣವಾಗಲೂಬಹುದು.
ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಟರ್ಕಿಯ ಮಾಲ್ವೊಂದರಲ್ಲಿ ಮೊಬೈಲ್ ನೋಡುತ್ತಾ ಬರುತ್ತಿದ್ದ ಯುವಕ ತೆರೆದ ರಂಧ್ರವೊಂದರಲ್ಲಿ ಬಿದ್ದಿದ್ದಾನೆ. ಅದೃಷ್ಟವಶಾತ್ ಆತನಿಗೆ ಯಾವುದೇ ಗಾಯಗಳುಂಟಾಗಲಿಲ್ಲ.
ಸಿಸಿ ಕ್ಯಾಮರಾದಲ್ಲಿ ಈ ಘಟನೆಯ ಸಂಪೂರ್ಣ ದೃಶ್ಯಾವಳಿಯು ಸೆರೆಯಾಗಿದೆ. ವಿಡಿಯೋದಲ್ಲಿ ಇಸ್ತಾನ್ಬುಲ್ನ ಶಾಪಿಂಗ್ ಮಾಲ್ವೊಂದರ ಸ್ಟೋರ್ ಒಂದರಲ್ಲಿ ಯುವಕನೊಬ್ಬ ಮೊಬೈಲ್ ನೋಡುತ್ತಾ ನಡೆದುಕೊಂಡು ಬರುತ್ತಿರುತ್ತಾನೆ. ಈತನಿಗೆ ಮೇಲಿನ ಮಹಡಿಯಿಂದ ಕೆಳ ಮಹಡಿಗೆ ಬಾಕ್ಸ್ಗಳನ್ನು ಸಾಗಿಸಲು ರಂಧ್ರವೊಂದನ್ನು ತೆಗೆದಿದ್ದಾರೆ ಎಂಬುದು ಲಕ್ಷ್ಯಕ್ಕಿರಲಿಲ್ಲ.
ಹೀಗಾಗಿ ನಡೆದುಕೊಂಡು ಬರುತ್ತಿದ್ದ ಯುವಕ ಆ ರಂಧ್ರದಿಂದ ಸೀದಾ ಕೆಳಗಿನ ಫ್ಲೋರ್ಗೆ ಹೋಗಿದ್ದಾನೆ. ಅದೃಷ್ಟವಶಾತ್ ಆತ ಬಾಕ್ಸ್ಗಳ ಮೇಲೆಯೇ ಬಿದ್ದಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.