alex Certify ಈ ರೀತಿ ಮೇಕಪ್ ಮಾಡಿದರೆ ಹೆಚ್ಚು ವಯಸ್ಸಿನವರಂತೆ ಕಾಣುತ್ತೀರಾ ಎಚ್ಚರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರೀತಿ ಮೇಕಪ್ ಮಾಡಿದರೆ ಹೆಚ್ಚು ವಯಸ್ಸಿನವರಂತೆ ಕಾಣುತ್ತೀರಾ ಎಚ್ಚರ…..!

ಮೇಕಪ್ ಮಾಡುವಾಗ ಕೆಲವರು ತಮ್ಮ ಉಡುಪಿನೊಂದಿಗೆ ಹೊಂದುವಂತಹ ಮೇಕಪ್ ನ್ನು ಬಳಸುತ್ತಾರೆ. ಆದರೆ ಕೆಲವೊಂದು ಮೇಕಪ್ ಗಳನ್ನು ಬಳಸುವಾಗ ಎಚ್ಚರದಿಂದಿರಬೇಕು. ಇಲ್ಲವಾದರೆ ನೀವು ಮೇಕಪ್ ಅತಿಯಾಗಿ ಬಳಸಿದರೆ ವಯಸ್ಸಾದವರಂತೆ ಕಾಣುತ್ತೀರಿ.

*ಮುಖಕ್ಕೆ ತುಂಬಾ ಮಸುಕಾದ ಫೌಂಡೇಶನ್ ನ್ನು ಬಳಸುವುದರಿಂದ ನಿಮ್ಮ ಮುಖದಲ್ಲಿರುವ ಗೆರೆಗಳು ಕಾಣಿಸುತ್ತದೆ, ಇದರಿಂದ ನೀವು ವಯಸ್ಸಾದವರಂತೆ ಕಾಣುತ್ತೀರಿ.

*ಐ ಶಾಡೋವನ್ನು ದಪ್ಪವಾಗಿ ಹಚ್ಚುವುದರಿಂದ ನಿಮ್ಮ ಕಣ್ಣುಗಳಿಗೆ ಭಾರವಾಗುತ್ತದೆ, ಇದು ನಿಮ್ಮನ್ನ ವಯಸ್ಸಾದವರ ರೀತಿ ಕಾಣುವಂತೆ ಮಾಡುತ್ತದೆ.

* ನಿಮ್ಮ ಕಣ್ಣುಗಳ ಕೆಳಗೆ ಕ್ಲೆನ್ಸರ್ ಅನ್ನು ಅನ್ವಯಿಸುವಾಗ ಜಾಗರೂಕರಾಗಿರಿ. ಅದು ಡಾರ್ಕ್ ಸರ್ಕಲ್ ನ್ನು ಮರೆಮಾಚಬಹುದು. ಆದರೆ ಕಣ್ಣುಗಳ ಕೆಳಗೆ ಸುಕ್ಕುಗಳು ಹೆಚ್ಚಾಗುವಂತೆ ಮಾಡುತ್ತದೆ.

* ನಿಮ್ಮ ಹುಬ್ಬಗಳಿಗೆ ಪೆನ್ಸಿಲ್ ನ್ನು ಹಚ್ಚುವಾಗ ಮುಖಕ್ಕೆ ಸೆಟ್ ಆಗುವ ರೀತಿ ಹಚ್ಚಿ. ಒಂದು ವೇಳೆ ದಪ್ಪವಾದರೆ ಅದರಿಂದ ನೀವು ವಯಸ್ಸಾದವರಂತೆ ಕಾಣುತ್ತೀರಿ.

*ಮೇಕಪ್ ಮಾಡುವ ಮುನ್ನ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ. ಇಲ್ಲವಾದರೆ ಚರ್ಮ ಡ್ರೈಯಾಗಿ ಸುಕ್ಕುಗಟ್ಟುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...