alex Certify ಈ ರಾಶಿಯ ಸ್ತ್ರೀಯರಿಗೆ ಈ ದಿನ ಅತ್ಯಂತ ಲಾಭಕರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಸ್ತ್ರೀಯರಿಗೆ ಈ ದಿನ ಅತ್ಯಂತ ಲಾಭಕರ….!

ಮೇಷ : ಕ್ಷುಲ್ಲಕ ಕಾರಣಕ್ಕೆ ದಂಪತಿಯ ನಡುವೆ ವಾಗ್ವಾದ ಉಂಟಾಗಲಿದೆ. ಇದು ನಿಮ್ಮ ಇಡೀ ದಿನದ ನೆಮ್ಮದಿಯನ್ನು ಹಾಳು ಮಾಡಲಿದೆ. ಮಕ್ಕಳು ನಿಮ್ಮ ತಾಳ್ಮೆ ಪರೀಕ್ಷೆ ಮಾಡಲಿದ್ದಾರೆ. ಯಾವುದೇ ಕೆಲಸ ಮಾಡುವ ಮುನ್ನ ಆತಂಕ ಬೇಡ.

ವೃಷಭ : ಕಚೇರಿಯಲ್ಲಿ ಇಂದು ಭಯದ ವಾತಾವರಣ ಇರಲಿದೆ. ಮೇಲಾಧಿಕಾರಿಗಳು ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯದಲ್ಲಿ ಜಯ ಸಿಗಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಇರಲಿದೆ.

ಇವು ವಿಶ್ವದ ಚಿತ್ರ ವಿಚಿತ್ರ ಶೌಚಾಲಯಗಳು

ಮಿಥುನ : ಮನೆಯ ಮಗಳಿಗೆ ಇಂದು ವೈವಾಹಿಕ ಸಂಬಂಧ ಕೂಡಿ ಬರಲಿದೆ. ವ್ಯಾಪಾರ – ವ್ಯವಹಾರದಲ್ಲಿ ಹಿನ್ನಡೆ ಉಂಟಾಗಲಿದೆ. ಆಂಜನೇಯನನ್ನು ಪ್ರಾರ್ಥನೆ ಮಾಡಿ. ಹಣ್ಣು – ಹಂಪಲುಗಳನ್ನು ಅನಾಥರಿಗೆ ದಾನ ಮಾಡಿ. ಸಂಗಾತಿಯ ಆರೋಗ್ಯ ಕೆಡಲಿದೆ.

ಕಟಕ : ಹಣಕಾಸು ವಿಚಾರದಲ್ಲಿ ಸ್ನೇಹಿತರ ನಡುವೆ ಕಲಹ ಉಂಟಾಗಲಿದೆ. ಮಕ್ಕಳ ನಡುವೆ ಪಕ್ಷಪಾತ ಮಾಡಿ ಮಕ್ಕಳ ಎದುರು ನಿಮ್ಮ ಗೌರವ ಕಳೆದುಕೊಳ್ಳಲಿದ್ದೀರಿ. ಹೆಣ್ಣು ಮಕ್ಕಳಿಗೆ ಈ ದಿನ ಯೋಗ್ಯವಾಗಿಲ್ಲ. ಆದಷ್ಟು ಎಚ್ಚರಿಕೆಯಿಂದಿರಿ.

ಸಿಂಹ : ಆಸ್ತಿ ವಿಚಾರದಲ್ಲಿ ದಾಯಾದಿ ಕಲಹ ಏರ್ಪಡಲಿದೆ. ಸೊಸೆಯು ರಂಪಾಟವನ್ನೇ ಮಾಡುವ ಸಾಧ್ಯತೆ ಇದೆ. ಸಂಗಾತಿಯು ಚಿಕ್ಕ ಚಿಕ್ಕ ವಿಷಯಕ್ಕೆ ನಿಮ್ಮ ಮೇಲೆ ಮುನಿಸಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು.

ನೂರಾರು ಮಂದಿಯ ಪ್ರಾಣ ಉಳಿಯಲು ಕಾರಣವಾಯ್ತು ಚಾಲಕನ ಸಮಯಪ್ರಜ್ಞೆ

ಕನ್ಯಾ : ಕುಟುಂಬದಲ್ಲಿ ಇಂದು ನೆಮ್ಮದಿ ಇರಲಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ಖರ್ಚಿನ ವಿಚಾರದಲ್ಲಿ ಜಾಗ್ರತೆ ಇರಲಿ. ಸ್ತ್ರೀಯರಿಗೆ ಇಂದು ಧನಲಾಭವಿದೆ. ಅತಿಯಾದ ಕೆಲಸದಿಂದ ಆಯಾಸಗೊಳ್ಳಲಿದ್ದೀರಿ.

ತುಲಾ : ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ನಿಮಗೆ ಸಂಗಾತಿಯೇ ಹೆಗಲಾಗಲಿದ್ದಾರೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಜವಳಿ ಉದ್ಯಮಿಗಳಿಗೆ ಇಂದು ಲಾಭವಿದೆ. ಕಲಾವಿದರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ.

ವೃಶ್ಚಿಕ : ನಿಮ್ಮ ಹೊಸ ಉದ್ಯಮಕ್ಕೆ ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಕುಲದೇವತೆಯ ದರ್ಶನ ಮಾಡಲು ಕುಟುಂಬಸ್ಥರ ಜೊತೆ ತೆರಳಲಿದ್ದೀರಿ. ಬಹಳ ದಿನಗಳ ಬಳಿಕ ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡುವಿರಿ. ತಾಯಿಯು ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು.

ಏನಿದು ಫೇಸ್ ಕಿನಿ ಮಾಸ್ಕ್…? ಇಲ್ಲಿದೆ ಮಾಹಿತಿ

ಧನು : ಯಾವುದೇ ಸಂದರ್ಭದಲ್ಲಿಯೂ ಕೋಪದ ಕೈಗೆ ಬುದ್ಧಿ ನೀಡಬೇಡಿ. ಇದರಿಂದ ನಿಮಗೆ ಸಮಸ್ಯೆ ಆಗಲಿದೆ. ಆರ್ಥಿಕ ಸಂಕಷ್ಟಕ್ಕೆ ಸಹೋದರರು ನೆರವಾಗಲಿದ್ದಾರೆ. ತಂದೆಯ ಮನೆಯವರು ನಿಮಗೆ ಆಸ್ತಿ ವಿಚಾರದಲ್ಲಿ ಕಾಟ ನೀಡಲಿದ್ದಾರೆ.

ಮಕರ : ಇಂದು ನಿಮಗೆ ಮನೋವ್ಯಥೆ ಕಾಡುವ ಸಾಧ್ಯತೆ ಇದೆ. ಅತಿಯಾದ ಓಡಾಟದಿಂದ ಆಯಾಸಗೊಳ್ಳಲಿದ್ದೀರಿ. ಆದಷ್ಟು ವಿಶ್ರಾಂತಿ ಪಡೆಯಲು ಯತ್ನಿಸಿ. ಎಲೆಕ್ಟ್ರಾನಿಕ್​ ಉದ್ಯಮಿಗಳಗೆ ಲಾಭ ಕಾದಿದೆ.

ಕುಂಭ : ವ್ಯಾಪಾರ – ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭವನ್ನು ಗಳಿಸಲಿದ್ದೀರಿ. ಸ್ತ್ರೀಯರಿಗೆ ಬಲ ಇರಲಿದೆ. ಅಗ್ನಿಯಿಂದ ಎಚ್ಚರಿಕೆ ವಹಿಸಿ. ಕಚೇರಿ ಕೆಲಸದ ನಿಮಿತ್ತ ವಿದೇಶಿ ಪ್ರಯಾಣ ಮಾಡುವ ಸಂದರ್ಭ ಎದುರಾಗಬಹುದು.

ಮೀನ : ವ್ಯಾಪಾರಿಗಳಿಗೆ ಈ ದಿನ ಶುಭಕರವಾಗಿ ಇರಲಿದೆ. ಪತಿಯ ಮನೆಯ ದೂರನ್ನು ಎಲ್ಲಾ ಕಡೆ ಹೇಳಬೇಡಿ . ಇದರಿಂದ ನಿಮ್ಮ ಹೆಸರೇ ಹಾಳಾಗಲಿದೆ. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿ ಇರಲಿದೆ. ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...