alex Certify ಈ ರಾಶಿಯ ವಿದ್ಯಾರ್ಥಿಗಳು ಮಕ್ಕಳು ಓದಿನಲ್ಲಿ ಕಾಣಲಿದ್ದಾರೆ ಪ್ರಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ವಿದ್ಯಾರ್ಥಿಗಳು ಮಕ್ಕಳು ಓದಿನಲ್ಲಿ ಕಾಣಲಿದ್ದಾರೆ ಪ್ರಗತಿ

ಮೇಷ : ಇಂದು ನೀವು ಅಗ್ನಿಯಿಂದ ದೂರವಿರಲಿದ್ದೀರಿ. ಹಣವನ್ನು ಸಂಪಾದನೆ ಮಾಡಲು ಹೊಸ ಮಾರ್ಗವನ್ನು ಹುಡುಕಲಿದ್ದೀರಿ. ಉದ್ಯಮದಲ್ಲಿ ಅನಿರೀಕ್ಷಿತ ಲಾಭ ಕಂಡು ಬರಲಿದೆ. ಸ್ತ್ರೀಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ವೃಷಭ : ಅನಾರೋಗ್ಯದಲ್ಲಿ ಬಳಲುತ್ತಿದ್ದವರು ಇಂದು ಚೇತರಿಕೆ ಕಾಣಲಿದ್ದಾರೆ. ಸಹೋದರಿಯು ನಿಮಗೆ ಇಂದು ಉಡುಗೊರೆ ನೀಡಲಿದ್ದಾರೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಒಲವು ತೋರಲಿದ್ದೀರಿ. ಅನಗತ್ಯ ಖರ್ಚು ವೆಚ್ಚಗಳ ಮೇಲೆ ಹಿಡಿತ ಇರಲಿ.

ಮಿಥುನ : ಸಂಗಾತಿಯ ಖುಷಿಗಾಗಿ ನೀವಿಂದು ಪ್ರವಾಸಿ ತಾಣಕ್ಕೆ ತೆರಳುವ ಬಗ್ಗೆ ಪ್ಲಾನ್​ ಮಾಡಲಿದ್ದೀರಿ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಸಾರ್ವಜನಿಕ ಜೀವನಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ಮಕ್ಕಳಿಗೆ ಉಜ್ವಲ ಭವಿಷ್ಯವಿದೆ.

ಕಟಕ : ನಿಮ್ಮ ಕುಟುಂಬದಲ್ಲಿ ಮಂಗಳಕರ ಕಾರ್ಯ ಸಂಭವಿಸಲಿದೆ. ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆರ್ಥಿಕ ಸಂಕಷ್ಟಗಳಿಂದ ಕೊಂಚ ನಿರಾಳತೆ ಪಡೆಯಲಿದ್ದೀರಿ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೂ ಸಹ ಮನೆ ಮದ್ದಿನಿಂದ ಪರಿಹಾರವಿದೆ.

ಸಿಂಹ : ಹೊಸ ಮನೆ ನಿರ್ಮಾಣ ಕಾರ್ಯ ಮಾಡುವ ಬಗ್ಗೆ ಪೋಷಕರ ಜೊತೆ ಚರ್ಚೆ ನಡೆಸಲಿದ್ದೀರಿ. ಕಿರಿಯ ಪುತ್ರಿಗೆ ವೈವಾಹಿಕ ಸಂಬಂಧ ಕೂಡಿ ಬರಲಿದೆ. ಮಕ್ಕಳ ಆರೋಗ್ಯದಲ್ಲಿ ಏರಿಳಿತ ಉಂಟಾಗಬಹುದು. ಸಂಗಾತಿಯೊಡನೆ ಪ್ರೀತಿಯಿಂದ ಇರಲಿದ್ದೀರಿ.

ಕನ್ಯಾ : ಮನೆ ನವೀಕರಣ ಕಾರ್ಯ ಕೈಗೊಳ್ಳಲಿದ್ದೀರಿ. ಸಾಲದ ಸುಳಿಯಿಂದ ಹೊರಬರಲಿದ್ದೀರಿ. ಈ ದಿನ ಮಾತ್ರವಲ್ಲ ಈ ತಿಂಗಳೇ ನಿಮ್ಮ ಪಾಲಿಗೆ ಅನುಕೂಲಕಾರಿಯಾಗಿ ಇರಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ.

ತುಲಾ : ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಸಂಗಾತಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವು ದೊಡ್ಡ ಮನಸ್ತಾಪವನ್ನೇ ಉಂಟು ಮಾಡಲಿದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡಲಿದ್ದೀರಿ.

ವೃಶ್ಚಿಕ : ಆಸ್ತಿ ವಿಚಾರದಲ್ಲಿ ಕುಟುಂಬದ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. ಅತ್ತೆ – ಸೊಸೆ ನಡುವಿನ ಕಲಹವು ಮನೆಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಲಿದೆ. ಮಕ್ಕಳು ಓದಿನಲ್ಲಿ ಪ್ರಗತಿ ಕಾಣಲಿದ್ದಾರೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.

ಧನು : ಆದಾಯಕ್ಕಿಂತ ಹೆಚ್ಚಿನ ಖರ್ಚಿನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಲಿದ್ದೀರಿ. ಸಾಲಗಾರರು ಮನೆ ಬಾಗಿಲಿಗೆ ಬರಲಿದ್ದಾರೆ. ಶಿವನನ್ನು ಆರಾಧಿಸಿ. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿದೆ.

ಮಕರ : ಕಚೇರಿಯಲ್ಲಿ ಮೇಲಾಧಿಕಾರಿಗಳ ಕೈಯಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದ್ದೀರಿ. ಕಚೇರಿಯಲ್ಲಿ ನಿಮ್ಮ ಸ್ಥಾನಮಾನ ಏರಿಕೆಯಾಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತೋರಲಿದ್ದಾರೆ.

ಕುಂಭ : ಪೂರ್ವಜರ ಆಸ್ತಿಯಿಂದ ನಿಮಗೆ ಲಾಭ ದೊರಕಿದೆ. ನಿಮ್ಮ ಜೀವನ ಸಂಗಾತಿಯಿಂದ ಧನಲಾಭ ಹೊಂದಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಸ್ಥಿರತೆಯನ್ನು ಕಾಣಲಿದ್ದೀರಿ.

ಮೀನ : ಜಾಗದ ವಿಚಾರಕ್ಕೆ ನೆರೆಮನೆಯವರ ಜೊತೆ ದೊಡ್ಡ ಗಲಾಟೆಯೇ ನಡೆಯಬಹುದು. ಯಾವುದೇ ಸಂದರ್ಭದಲ್ಲಿಯೂ ಮಾತಿನ ಮೇಲೆ ಹಿಡಿತವಿರಲಿ. ಇಂದು ನೀವು ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಲಿದ್ದೀರಿ. ಕುಲದೇವರನ್ನು ಪ್ರಾರ್ಥಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...