alex Certify ಈ ರಾಶಿಯವರ ವೈವಾಹಿಕ ಜೀವನದಲ್ಲಿದೆ ನೆಮ್ಮದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರ ವೈವಾಹಿಕ ಜೀವನದಲ್ಲಿದೆ ನೆಮ್ಮದಿ

ಮೇಷ : ಇಂದು ನೀವು ಅಂದುಕೊಂಡ ಕಾರ್ಯಗಳೆಲ್ಲವೂ ನೆರವೇರಲಿದೆ. ಇದರಿಂದ ನೀವು ತುಂಬಾನೇ ಸಂತಸದಿಂದ ಇರಲಿದ್ದೀರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ಕೀರ್ತಿದಾಯಕ ಫಲವಿದೆ.

ವೃಷಭ : ಕಚೇರಿ ಕೆಲಸದಲ್ಲಿ ಇರುವ ತೊಂದರೆಗಳು ಶಮನವಾಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲೇಬೇಕಿದೆ. ವೃಥಾ ತಿರುಗಾಟ ನಿಮ್ಮ ಕಿರಿಕಿರಿಗೆ ಕಾರಣ ಎನಿಸಬಹುದು. ಹಳೆಯ ಸಾಲಗಳು ತೀರಲಿವೆ.

ಮಿಥುನ : ಕಚೇರಿ ಕೆಲಸದ ನಿಮಿತ್ತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸದಾವಕಾಶ ಕೂಡಿ ಬರಲಿದೆ. ಕಲಾವಿದರಿಗೆ ಇಂದು ಶುಭಲಾಭವಿದೆ. ಸಾಲಗಾರರ ಕಾಟ ನಿಮಗೆ ತಪ್ಪಿದ್ದಲ್ಲ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ.

ಕಟಕ : ವ್ಯಾಪಾರಿಗಳಿಗೆ ಇಂದು ಲಾಭವಿದೆ. ವಿದೇಶಿ ಗ್ರಾಹಕರು ನಿಮ್ಮ ಉದ್ಯಮದ ಮೇಲೆ ಹೂಡಿಕೆ ಮಾಡಲಿದ್ದಾರೆ. ಪ್ರಭಾವಿ ವ್ಯಕ್ತಿಗಳ ಜೊತೆ ಓಡಾಟ ಮಾಡಲಿದ್ದೀರಿ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಲಿದೆ. ಇದರಿಂದ ಆರ್ಥಿಕ ಹೊರೆಯೂ ಹೆಚ್ಚಾಗಲಿದೆ.

ಸಿಂಹ : ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ತಲುಪಲಿದ್ದಾರೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟು ವೈದ್ಯರ ಸಂಪರ್ಕದಲ್ಲಿರಿ. ಆಸ್ತಿ ವಿಚಾರದಲ್ಲಿ ನಿಮಗೆ ಜಯವಿದೆ. ತಾಯಿಯಿಂದ ಕೊಂಚ ಕಿರಿಕಿರಿ ಇರಲಿದೆ.

ಕನ್ಯಾ : ಮಹಿಳೆಯರಿಗೆ ಇಂದು ಅನಿರೀಕ್ಷಿತ ಧನಲಾಭವಿದೆ. ಮಕ್ಕಳು ನಿಮಗೆ ಆಭರಣವನ್ನು ಉಡುಗೊರೆ ರೂಪದಲ್ಲಿ ನೀಡಲಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಜ್ಞಾನಾರ್ಜನೆ ಹೊಂದಲಿದ್ದಾರೆ. ಕೂಡಿಟ್ಟ ಹಣವನ್ನು ಖರ್ಚು ಮಾಡಲೇಬೇಕಾದ ಸಂದರ್ಭ ಎದುರಾಗಲಿದೆ.

ತುಲಾ : ನೀವು ಒಳ್ಳೆಯವರಾಗಬೇಕೆಂದು ಬೇರೆಯವರ ಮೇಲೆ ದೋಷ ಹೊರಿಸುವುದು ನಿಜಕ್ಕೂ ಒಳ್ಳೆಯ ಲಕ್ಷಣವಲ್ಲ. ಈ ಬುದ್ಧಿಯನ್ನು ನೀವು ತಿದ್ದುಕೊಳ್ಳಲೇಬೇಕು. ವೃದ್ಧಾಪ್ಯದಲ್ಲಿರುವ ಪೋಷಕರ ಸೇವೆ ಮಾಡುವುದರಿಂದ ನಿಮಗೆ ಪುಣ್ಯ ಲಭಿಸಲಿದೆ.

ವೃಶ್ಚಿಕ : ಮಹಿಳೆ ಇಷ್ಟಾರ್ಥ ಈಡೇರಲಿದೆ. ಸರ್ಕಾರಿ ಕೆಲಸಗಳು ಯಾವುದೇ ಅಡೆತಡೆಗಳು ಇಲ್ಲದೆಯೇ ನಡೆಯಲಿದೆ. ಇದರಿಂದ ದೊಡ್ಡದೊಂದು ಭಾರವು ನಿಮ್ಮ ಹೆಗಲಿನಿಂದ ಇಳಿಯಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ.

ಧನು : ಸಾಕಷ್ಟು ದಿನಗಳಿಂದ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದ ನೀವು ಇಂದು ಕುಟುಂಬದ ಜೊತೆ ಸಮಯ ಕಳೆಯಲಿದ್ದೀರಿ. ಕೌಟುಂಬಿಕ ಜೀವನದಲ್ಲಿ ಅನಗತ್ಯ ವಾದ ಬೇಡ. ವ್ಯವಹಾರದಲ್ಲಿ ಚತುರರಾದಷ್ಟೂ ನಿಮಗೆ ಲಾಭವಿದೆ.

ಮಕರ : ನಿಮ್ಮ ಅತಿಯಾದ ಅನುಮಾನದ ಬುದ್ಧಿಯು ದಾಂಪತ್ಯದಲ್ಲಿ ಸರಿಪಡಿಸಲಾಗದ ಬಿರುಕನ್ನು ಮೂಡಿಸಲಿದೆ. ಹಳೆಯ ಬಾಕಿಗಳು ತೀರಲಿದೆ. ರಾಜಕೀಯ ವ್ಯಕ್ತಿಗಳೊಂದಿಗೆ ಬಾಂಧವ್ಯ ಹೆಚ್ಚಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಗೌರವವು ಹೆಚ್ಚಲಿದೆ.

ಕುಂಭ : ಸಹೋದರರ ಆರ್ಥಿಕ ಸಂಕಷ್ಟಕ್ಕೆ ನೀವು ಹೆಗಲಾಗಲಿದ್ದೀರಿ. ಇದು ನಿಮ್ಮ ಪೋಷಕರ ಆತಂಕವನ್ನು ದೂರ ಮಾಡಲಿದೆ. ಕಚೇರಿಯಲ್ಲಿದ್ದ ಎಲ್ಲಾ ಕಿರಿಕಿರಿಯು ದೂರಗಾಲಿದೆ.

ಮೀನ : ಮನೆಯಲ್ಲಿ ಇರುವ ಧಾರ್ಮಿಕ ಕಾರ್ಯಗಳಿಗೆ ವಿಘ್ನ ಎದುರಾಗಲಿದೆ. ಅನಾರೋಗ್ಯದಿಂದ ಕಿರಿಕಿರಿ ಉಂಟಾಗಲಿದೆ. ವಿವಿಧ ಮೂಲಗಳಿಂದ ಧನಾಗಮನವಿದೆ. ಮನೆಯಲ್ಲಿ ಖರ್ಚು ಹೆಚ್ಚಲಿದೆ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...