alex Certify ಈ ರಾಶಿಯವರ ಮನೆಯಲ್ಲಿರಲಿದೆ ʼಹರ್ಷೋಲ್ಲಾಸʼದ ವಾತಾವರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರ ಮನೆಯಲ್ಲಿರಲಿದೆ ʼಹರ್ಷೋಲ್ಲಾಸʼದ ವಾತಾವರಣ

ಮೇಷ ರಾಶಿ

ಕುಟುಂಬ ಮತ್ತು ಮಕ್ಕಳ ವಿಷಯದಲ್ಲಿ ಸಂತೋಷದ ಸಮಾಚಾರ ದೊರೆಯಲಿದೆ. ಸಂಬಂಧಿಕರು ಮತ್ತು ಸ್ನೇಹಿತರು ಜೊತೆಗಿರುತ್ತಾರೆ. ವ್ಯಾಪಾರಕ್ಕೆ ಸಂಬಂಧಪಟ್ಟ ಕೆಲಸಗಳಿಗಾಗಿ ಪ್ರಯಾಣ ಮಾಡಬೇಕಾಗುತ್ತದೆ.

ವೃಷಭ ರಾಶಿ

ವ್ಯಾಪಾರಿಗಳಿಗೆ ಇಂದು ಶುಭ ದಿನ. ಹೊಸ ಯೋಜನೆಗಳನ್ನು ರೂಪಿಸುವ ಸಾಧ್ಯತೆ ಇದೆ. ಇದರ ಹೊರತಾಗಿ ಆರ್ಥಿಕ ಲಾಭ ಕೂಡ ಆಗಲಿದೆ.

ಮಿಥುನ ರಾಶಿ

ಯಾವುದೇ ರೀತಿಯ ಅನಿಷ್ಠದಿಂದ ಬಚಾವ್ ಆಗಲು ಕೋಪವನ್ನು ನಿಯಂತ್ರಿಸಿಕೊಳ್ಳಿ. ಅತಿಯಾದ ಭಾವೋದ್ವೇಗಕ್ಕೆ ಒಳಗಾಗಬೇಡಿ. ಆಪರೇಷನ್ ಮಾಡಿಸಲು ಇವತ್ತಿನ ದಿನ ಅನುಕೂಲಕರವಾಗಿಲ್ಲ.

ಕರ್ಕ ರಾಶಿ

ಇವತ್ತು ಮೋಜು ಮಸ್ತಿಯಲ್ಲಿ ದಿನ ಕಳೆಯಲಿದ್ದೀರಿ. ಮನರಂಜನೆಯ ಕೊರತೆಯಾಗುವುದಿಲ್ಲ. ಮಿತ್ರರು ಮತ್ತು ಕುಟುಂಬದವರೊಂದಿಗೆ ಮನರಂಜನಾ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ.

ಸಿಂಹ ರಾಶಿ

ಮನೆಯಲ್ಲಿ ಹರ್ಷೋಲ್ಲಾಸದ ವಾತಾವರಣವಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸೇರಿ ಆನಂದವಾಗಿ ಸಮಯ ಕಳೆಯಲಿದ್ದೀರಿ. ಸುಖ-ಶಾಂತಿ ಮತ್ತು ನೆಮ್ಮದಿ ನೆಲೆಸಲಿದೆ.

ಕನ್ಯಾ ರಾಶಿ

ಮಕ್ಕಳ ಬಗ್ಗೆ ಆತಂಕ ಕಾಡಲಿದೆ. ಹೊಟ್ಟೆ ನೋವಿನ ಸಮಸ್ಯೆ ಕಾಡುತ್ತದೆ. ವಿದ್ಯಾರ್ಥಿಗಳ ಓದಿಗೆ ವಿಘ್ನ ಎದುರಾಗಲಿದೆ. ಬೌದ್ಧಿಕ ಚರ್ಚೆ ಮತ್ತು ಮಾತುಕತೆಯಲ್ಲಿ ಪಾಲ್ಗೊಳ್ಳಬೇಡಿ.

ತುಲಾ ರಾಶಿ

ಅಧಿಕ ಸಂವೇದನಾಶೀಲರಾಗಿರುತ್ತೀರಿ. ಯೋಚನೆಗಳಿಂದ ಮನಸ್ಸು ಅಸ್ವಸ್ಥಗೊಳ್ಳಲಿದೆ. ತಾಯಿ ಮತ್ತು ಪತ್ನಿಯ ವಿಷಯದಲ್ಲಿ ಚಿಂತೆ ಕಾಡಬಹುದು.

ವೃಶ್ಚಿಕ ರಾಶಿ

ಇವತ್ತು ಖುಷಿಯಾಗಿ ದಿನ ಕಳೆಯಲಿದ್ದೀರಿ. ಹೊಸ ಕಾರ್ಯ ಆರಂಭಿಸಲಿದ್ದೀರಿ. ಮನೆಯಲ್ಲಿ ಒಡಹುಟ್ಟಿದವರೊಂದಿಗೆ ಸಮಯ ಕಳೆಯಲಿದ್ದೀರಿ. ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಧನು ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡುತ್ತದೆ. ಇದರಿಂದ ಜಗಳ ಏರ್ಪಡುವ ಸಾಧ್ಯತೆಯೂ ಇದೆ.

ಮಕರ ರಾಶಿ

ಅಂದುಕೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ನಿಮ್ಮ ವರ್ಚಸ್ಸು ಹೆಚ್ಚಲಿದೆ. ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ.

ಕುಂಭ ರಾಶಿ

ಯಾರಿಗೂ ಜಾಮೀನು ನೀಡಲು ಹೋಗಬೇಡಿ. ಹಣಕಾಸಿನ ಕೊಡು ಕೊಳ್ಳುವಿಕೆ ಬೇಡ. ಖರ್ಚು ಹೆಚ್ಚಾಗಲಿದೆ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಉಂಟಾಗಲಿದೆ.

ಮೀನ ರಾಶಿ

ಸಾಮಾಜಿಕ ಕಾರ್ಯ ಅಥವಾ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಮಿತ್ರರು ಮತ್ತು ಆತ್ಮೀಯರ ಭೇಟಿಯಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ಸುಂದರ ತಾಣಕ್ಕೆ ಪ್ರವಾಸ ತೆರಳಲಿದ್ದೀರಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...