alex Certify ಈ ರಾಶಿಯವರು ಇಂದು ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರು ಇಂದು ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ

ಮೇಷ : ಇಂದು ನೀವು ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಇವರಿಂದ ನೀವು ಭೂ ವ್ಯಾಜ್ಯ ಸಂಬಂಧ ಪರಿಹಾರವನ್ನು ಪಡೆಯಲಿದ್ದೀರಿ. ಕುಟುಂಬದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಕೋಪವು ಇಂದು ದೊಡ್ಡ ಮಟ್ಟದ ಜಗಳಕ್ಕೆ ಕಾರಣವಾಗಲಿದೆ.

ವೃಷಭ : ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಹಿಂದೆ ಕಷ್ಟದ ಸಂದರ್ಭದಲ್ಲಿ ನಿಮ್ಮಿಂದ ಸಹಾಯ ಪಡೆದವರು ಇಂದು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ವೃತ್ತಿ ಜೀವನದಲ್ಲಿ ನೆಮ್ಮದಿ ಇದೆ.

ಮಿಥುನ : ವ್ಯಾಪಾರ – ವ್ಯವಹಾರದಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದ್ದೀರಿ. ಪೋಷಕರು ನಿಮಗೆ ಎಲ್ಲಾ ರೀತಿಯಿಂದ ಬೆಂಬಲ ನೀಡಲಿದ್ದಾರೆ. ಕಚೇರಿಯಲ್ಲಿ ನೀವಿಂದು ಆಕರ್ಷಣೆಯ ಕೇಂದ್ರಬಿಂದುವಾಗಿರಲಿದ್ದೀರಿ. ಮನೆಯ ಕಿರಿಯ ಸದಸ್ಯರಿಂದ ಶುಭ ಸುದ್ದಿ ಕೇಳುವಿರಿ.

ಕಟಕ : ಸಂಗಾತಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಮುನಿಸು ಮಾಡಿಕೊಳ್ಳಲಿದ್ದೀರಿ. ಆದರೂ ನಾಲಗೆಯ ಮೇಲೆ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣ ಭಾಗ್ಯವಿದೆ. ವೈವಾಹಿಕ ಸಂಬಂಧಕ್ಕೆ ಅರಸುತ್ತಿರುವವರಿಗೆ ಇಂದೂ ನಿರಾಶೆ ಕಾದಿದೆ.

ಸಿಂಹ : ದೂರ ಪ್ರಯಾಣದ ಅವಕಾಶ ಕೂಡಿ ಬಂದರೂ ಸಹ ಹಣಕಾಸಿನ ಸಮಸ್ಯೆಯಿಂದ ಅನಿವಾರ್ಯವಾಗಿ ಅದನ್ನು ರದ್ದು ಮಾಡಬೇಕಾಗಿ ಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ಮಂದಗತಿಯ ಮುನ್ನಡೆ ಇರಲಿದೆ. ಹಿತಶತ್ರುಗಳ ಕಾಟವಿದೆ.

ಕನ್ಯಾ : ವ್ಯವಹಾರದ ನಿಮಿತ್ತ ವಿದೇಶ ಪ್ರಯಾಣ ಕೈಗೊಳ್ಳುವ ಸೂಚನೆಯಿದೆ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಮಕ್ಕಳು ಓದಿನ ಕಡೆಗೆ ಗಮನ ನೀಡಲಿದ್ದಾರೆ.

ತುಲಾ : ಸಂಗಾತಿಯೊಡನೆ ಇಂದು ಪ್ರವಾಸಿ ತಾಣಗಳಿಗೆ ಭೇಟಿ ನೀಡುವಿರಿ. ಇದರಿಂದ ನಿಮ್ಮ ಇಡೀ ದಿನ ಸಂತಸವಾಗಿ ಇರಲಿದೆ. ವ್ಯಾಪಾರ – ವ್ಯವಹಾರದಲ್ಲಿ ನಿಮಗೆ ಇಂದು ಅದ್ಭುತವಾದ ಲಾಭವಿದೆ. ವಿದೇಶಿ ಹೂಡಿಕೆದಾರರು ನಿಮ್ಮ ವ್ಯವಹಾರದತ್ತ ಒಲವು ತೋರಲಿದ್ದಾರೆ.

ವೃಶ್ಚಿಕ : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿಮಗೆ ಇಂದು ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ನಿಮ್ಮ ಕೆಲಸದ ಶೈಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಗಳಿಸಲಿದೆ. ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಸ್ನೇಹಿತರು ನೆರವಾಗಲಿದ್ದಾರೆ.

ಧನು : ನಿಮ್ಮ ದಕ್ಷ ಕೆಲಸಕ್ಕೆ ಕಚೇರಿಯಲ್ಲಿ ತಕ್ಕ ಗೌರವ ಸಿಗಲಿದೆ. ಬಹಳ ಸಮಯದ ಬಳಿಕ ಇಂದು ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ. ದಾಂಪತ್ಯ ಜೀವನದಲ್ಲಿ ಕ್ರಮೇಣ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿದೆ.

ಮಕರ : ಉದ್ಯಮದ ನಿಮಿತ್ತ ದೂರದ ಊರಿನಲ್ಲಿ ನೆಲೆಸಿರುವ ನೀವು ಇಂದು ಸಂಗಾತಿಯೊಡನೆ ಉತ್ತಮ ಸಮಯ ಕಳೆಯಲಿದ್ದೀರಿ. ಕುಟುಂಬದ ಸದಸ್ಯರು ನಿಮ್ಮ ಕನಸ್ಸಿಗೆ ಪ್ರೋತ್ಸಾಹ ನೀಡಲಿದ್ದಾರೆ. ಹಳೆಯ ಸಾಲಗಳು ತೀರಲಿದೆ.

ಕುಂಭ : ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಇದರಿಂದ ನೀವು ನಿರಾಳತೆ ಅನುಭವಿಸುವಿರಿ. ಆರ್ಥಿಕ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಪ್ರೇಮ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ.

ಮೀನ : ವಿದ್ಯಾರ್ಥಿಗಳಿಗೆ ಈ ದಿನವು ಹೆಚ್ಚು ಶುಭಕರವಾಗಿ ಇರಲಿದೆ. ವೃತ್ತಿಪರರಿಗೂ ಈ ದಿನ ಯಾವುದೇ ಸಮಸ್ಯೆ ಇಲ್ಲ. ಪೋಷಕರು ಹೆಮ್ಮೆ ಪಡುವಂತಹ ಕೆಲಸ ಮಾಡಲಿದ್ದೀರಿ. ಹಣದ ಹೂಡಿಕೆ ಯೋಜನೆಗಳನ್ನು ಆರಂಭಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...