alex Certify ಈ ರಾಶಿಯ ಸಣ್ಣ ವ್ಯಾಪಾರಿಗಳಿಗೆ ಇದೆ ಇಂದು ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಸಣ್ಣ ವ್ಯಾಪಾರಿಗಳಿಗೆ ಇದೆ ಇಂದು ಲಾಭ

ಮೇಷ : ಹಣ ವ್ಯಯವಾಗಲಿದೆ. ಮನೆಯವರ ಮೇಲೆ ನೀವು ತೋರುವ ಕಾಳಜಿ ಎಲ್ಲರಿಗೂ ಇಷ್ಟವಾಗಲಿದೆ. ಪ್ರಯಾಣದ ಕಾರ್ಯಗಳನ್ನ ಮುಂದೂಡಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ವೃಷಭ : ಹಲವು ದಿನಗಳಿಂದ ನೆನೆಗುದಿಗೆ ಬಿದ್ದ ಕೆಲಸವೊಂದು ಇಂದು ಪೂರ್ಣಗೊಳ್ಳಲಿದೆ. ಸಾಂಸಾರಿಕ ಜೀವನ ಸುಖಮಯವಾಗಲಿದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಇರೋದಿಲ್ಲ. ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ.

ಮಿಥುನ : ಯಾರೋ ಹೇಳಿದರು ಎಂದ ಮಾತ್ರಕ್ಕೆ ಅದೇ ನಿಜವೆಂದು ನಂಬಬೇಡಿ. ಆಸ್ತಿ ವಿಚಾರದಲ್ಲಿ ಸಹೋದರರ ಜೊತೆ ವೈಮನಸ್ಯ ಮೂಡಲೂಬಹುದು. ನಾಲಗೆ ನಿಯಂತ್ರಣದಲ್ಲಿ ಇರಲಿ. ಸಂಗಾತಿ ನೀಡುವ ಸಲಹೆಗಳನ್ನ ಆಲಿಸಿ.

ಕಟಕ : ಇಂದು ನೀವು ಚಿನ್ನಾಭರಣ ಖರೀದಿ ಮಾಡುವ ಸಾಧ್ಯತೆ ಇದೆ. ಮನಸ್ಸಿನಲ್ಲಿರುವ ತುಮುಲಗಳನ್ನ ಆತ್ಮೀಯರ ಜೊತೆ ಹಂಚಿಕೊಳ್ಳಿ. ಮನಸ್ಸು ಹಗುರಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಕುಟುಂಬಸ್ಥರು ನೀಡುವ ಸಲಹೆಗಳನ್ನ ಕೇಳಿ.

ಸಿಂಹ : ಇಂದು ನಿಮ್ಮ ಬಳಿ ಏನೇನು ಇದೆಯೋ ಅವೆಲ್ಲ ನಿಮ್ಮ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಅನ್ನೋದನ್ನ ಮರೆಯದಿರಿ. ತೈಲ ವ್ಯಾಪಾರಿಗಳು, ಜವಳಿ ಉದ್ಯಮದವರು ಉತ್ತಮ ಲಾಭವನ್ನ ಹೊಂದಲಿದ್ದೀರಿ. ಕುಟುಂಬಸ್ಥರ ಜೊತೆ ಗುಣಮಟ್ಟದ ಸಮಯವನ್ನ ಕಳೆಯುತ್ತೀರಿ.

ಕನ್ಯಾ : ಕುಟುಂಬದಲ್ಲಿ ಸುಖ – ಶಾಂತಿ ನೆಲೆಸಲಿದೆ. ವ್ಯವಹಾರ ಕೊಂಚ ಮಂದಗತಿಯಲ್ಲಿ ಸಾಗಬಹುದು. ಹಾಗಂತ ಒತ್ತಡಕ್ಕೆ ಒಳಗಾಗಬೇಡಿ. ಮುಂದಿನ ದಿನಗಳಲ್ಲಿ ಶುಭ ಕಾದಿದೆ. ಹಣದ ಹರಿವು ಸಾಮಾನ್ಯ ಸ್ಥಿತಿಯಲ್ಲಿ ಇರಲಿದೆ. ಪೋಷಕರ ಆರೋಗ್ಯ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಬೇಡ.

ತುಲಾ : ಮನೆಯ ವಾತಾವರಣ ಶಾಂತ ರೀತಿಯಲ್ಲಿ ಇರಲಿದೆ. ನೀವು ಮಾಡುವ ಕಾರ್ಯಗಳಿಗೆ ಕುಟುಂಬಸ್ಥರ ಆಶೀರ್ವಾದ ಸಿಗಲಿದೆ. ಆದರೆ ಹಣದ ವಿಚಾರದಲ್ಲಿ ಕೊಂಚ ನಷ್ಟ ಅನುಭವಿಸಲಿದ್ದೀರಿ. ನಕಾರಾತ್ಮಕ ಯೋಚನೆಗಳನ್ನ ತಲೆಯಿಂದ ತೆಗೆದು ಹಾಕಿ.

ವೃಶ್ಚಿಕ : ವಿದ್ಯಾರ್ಥಿ ಜೀವನದಲ್ಲಿ ಇರುವ ಎಲ್ಲಾ ಅಡಚಣೆಗಳು ದೂರಾಗಲಿದೆ.ಪೋಷಕರ ಆಶೀರ್ವಾದ ನಿಮ್ಮೊಡನೆ ಇರಲಿದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕುಟುಂಬಸ್ಥರ ಜೊತೆ ಚರ್ಚೆ ಮಾಡಿ. ಕುಲದೇವತೆಯನ್ನ ಆರಾಧಿಸಿ.

ಧನು : ಇಂದು ನಿಮ್ಮ ಆದಾಯ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಎಲೆಕ್ಟ್ರಿಕ್​ ಉದ್ಯಮದವರಿಗಂತೂ ಹೆಚ್ಚಿನ ಲಾಭ ಕಾದಿದೆ. ಕುಟುಂಬ ಜೀವನದಲ್ಲಿ ಅಡಚಣೆ ಇಲ್ಲ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪರಿಸ್ಥಿತಿಗಳು ನಿಮ್ಮ ಪರವಾಗಿಯೇ ಇರಲಿದೆ.

ಮಕರ : ಹಳೆಯ ಸಾಲವೊಂದು ತೀರೋದ್ರಿಂದ ಮನಸ್ಸಿಗೆ ನೆಮ್ಮದಿ ಎನಿಸಲಿದೆ. ಆಸ್ತಿ ಮಾರಾಟ ಮಾಡಬೇಕು ಎಂಬ ನಿಮ್ಮ ಆಸೆ ಕೈಗೂಡುವ ಸಾಧ್ಯತೆ ಇದೆ. ಹೊಸ ವಾಹನ ಖರೀದಿ ಮಾಡಲಿದ್ದೀರಿ. ವೈವಾಹಿಕ ಜೀವನ ಸಂತಸದಿಂದ ಸಾಗಲಿದೆ.

ಕುಂಭ : ಉದ್ಯಮದಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡವರು ಇನ್ನು ಸ್ವಲ್ಪ ದಿನ ಕಾಯೋದು ಒಳ್ಳೆಯದು. ಹಣಕಾಸಿನ ನಿರ್ಧಾರಗಳನ್ನ ಕೈಗೊಳ್ಳುವ ವೇಳೆ ತರಾತುರಿ ಮಾಡಬೇಡಿ. ಸಣ್ಣ ವ್ಯಾಪಾರಿಗಳಿಗೆ ಲಾಭವಿದೆ. ಕುಟುಂಬದಲ್ಲಿ ಅನಗತ್ಯ ವಾದ ಎದುರಾಗಬಹುದು.

ಮೀನ : ವೈವಾಹಿಕ ಜೀವನವು ಸುಖಮಯವಾಗಿ ಇರಲಿದೆ. ದಿನಸಿ ವ್ಯಾಪಾರಿಗಳಿಗೆ ಇದು ಅತ್ಯಂತ ಶುಭ ದಿನ. ಮಸಾಲೆಯುಕ್ತ ಆಹಾರ ಸೇವನೆ ಮಾಡದೇ ಇರೋದೆ ಒಳ್ಳೆಯದು. ಕಾರ್ಯ ಕ್ಷೇತ್ರದಲ್ಲಿ ಪರಿಸ್ಥಿತಿ ನಿಮ್ಮ ಪರವಾಗಿ ಇರಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...