alex Certify ಈ ರಾಶಿಯವರಿಗೆ ಕಾದಿದೆ ಇಂದು ಶುಭ ಸಮಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಕಾದಿದೆ ಇಂದು ಶುಭ ಸಮಾಚಾರ

ಮೇಷ ರಾಶಿ

ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತೀರಿ, ಅದರಲ್ಲೇ ಲಾಭವೂ ಆಗಲಿದೆ. ಕೆಲಸದಲ್ಲಿ ಯಶಸ್ಸು ಸಿಗುವುದು ವಿಳಂಬವಾಗಬಹುದು. ಮಧ್ಯಾಹ್ನದ ನಂತರ ಪರಿಸ್ಥಿತಿ ಉತ್ತಮವಾಗಿರುತ್ತದೆ.

ವೃಷಭ ರಾಶಿ

ಮನೆ ಮತ್ತು ಕಚೇರಿಯಲ್ಲಿ ದಿನ ಉತ್ತಮವಾಗಿ ಕಳೆಯಲಿದೆ. ಕೆಲಸದ ಒತ್ತಡದಿಂದಾಗಿ ಆರೋಗ್ಯ ಕೊಂಚ ಏರುಪೇರಾಗಬಹುದು. ಮಿತ್ರರ ಭೇಟಿಯಿಂದ ಆನಂದಿತರಾಗಲಿದ್ದೀರಿ.

ಮಿಥುನ ರಾಶಿ

ಇಂದು ನಿಮಗೆ ಅನುಕೂಲಕರ ದಿನ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಕೃಪಾದೃಷ್ಟಿ ನಿಮ್ಮ ಮೇಲಿರುತ್ತದೆ. ಆಕಸ್ಮಿಕ ಧನಲಾಭವಾಗಬಹುದು. ಬಾಕಿ ವಸೂಲಿ ಮಾಡಲಿದ್ದೀರಿ.

ಕರ್ಕ ರಾಶಿ

ವ್ಯವಹಾರದಲ್ಲಿ ಸಮಸ್ಯೆಯಾಗುವುದಿಲ್ಲ. ತವರಿನಿಂದ ಶುಭ ಸಮಾಚಾರ ಬರುತ್ತದೆ. ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.

ಸಿಂಹ ರಾಶಿ

ಬೆಳಗ್ಗೆ ಮಿತ್ರರೊಂದಿಗೆ ಸುತ್ತಾಟ, ಮೋಜು-ಮಸ್ತಿ, ಮನರಂಜನೆಯಲ್ಲಿ ಕಾಲ ಕಳೆಯಲಿದ್ದೀರಿ. ಪಾಲುದಾರರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಮಧ್ಯಾಹ್ನದ ನಂತರ ಪ್ರತಿಕೂಲತೆಯನ್ನು ಎದುರಿಸಬೇಕಾಗುತ್ತದೆ.

ಕನ್ಯಾ ರಾಶಿ

ಆಲಸ್ಯ ಮತ್ತು ಆಯಾಸದಿಂದ ನಿಮ್ಮ ಕೆಲಸ ಮಂದಗತಿಯಲ್ಲಿ ಸಾಗುತ್ತದೆ. ಉದರ ಬಾಧೆ ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ತೊಂದರೆ ಎದುರಾಗಬಹುದು. ಹಿರಿಯ ಅಧಿಕಾರಿಗಳಿಂದ ದೂರವೇ ಇರಿ.

ತುಲಾ ರಾಶಿ

ಹೊಸ ಕಾರ್ಯ ಆರಂಭಿಸಲು ಇಂದು ಶುಭ ದಿನ. ಪ್ರಿಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಭಾಗ್ಯವೃದ್ಧಿಯಾಗಲಿದೆ. ಸಮಾಜದಲ್ಲಿ ಗೌರವ – ಪ್ರತಿಷ್ಠೆ ದೊರೆಯುತ್ತದೆ.

ವೃಶ್ಚಿಕ ರಾಶಿ

ಕಾರ್ಯ ಅಪೂರ್ಣವಾಗಿರುವುದರಿಂದ ಹತಾಶೆಯ ಅನುಭವವಾಗುತ್ತದೆ. ಯಾವುದೇ ಮಹತ್ವದ ವಿಷಯದಲ್ಲಿ ಇಂದು ನಿರ್ಣಯ ತೆಗೆದುಕೊಳ್ಳಬೇಡಿ. ಕುಟುಂಬದಲ್ಲಿ ಕ್ಲೇಶಮಯ ವಾತಾವರಣವಿರುತ್ತದೆ.

ಧನು ರಾಶಿ

ಇಂದು ನಿಮಗೆ ಶುಭದಿನ. ಕಾರ್ಯಸಿದ್ಧಿ ಮತ್ತು ಧನ ಪ್ರಾಪ್ತಿ ಯೋಗವಿದೆ. ಶಾರೀರಿಕ ಮತ್ತು ಮಾನಸಿಕವಾಗಿ ಉತ್ಸಾಹದಿಂದಿರುತ್ತೀರಿ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.

ಮಕರ ರಾಶಿ

ಇಂದು ಮೋಜು-ಮಸ್ತಿ ಮತ್ತು ಮನರಂಜನೆಯಲ್ಲಿ ಸಮಯ ಕಳೆಯುತ್ತೀರಿ. ಮಿತ್ರರು ಮತ್ತು ಕುಟುಂಬಸ್ಥರೊಂದಿಗೆ ಸುತ್ತಾಡಲು ತೆರಳಲಿದ್ದೀರಿ. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ.

ಕುಂಭ ರಾಶಿ

ಇಂದು ನಿಮಗೆ ಅತ್ಯಂತ ಲಾಭದಾಯಕ ದಿನ. ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿರುತ್ತೀರಾ. ಮಧ್ಯಾಹ್ನದ ನಂತರ ಸುತ್ತಾಡಲು ತೆರಳಲಿದ್ದೀರಿ.

ಮೀನ ರಾಶಿ

ನೌಕರಿ ಮತ್ತು ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಸನ್ನರಾಗುತ್ತಾರೆ. ವ್ಯಾಪಾರ ವೃದ್ಧಿಸಲಿದೆ, ಬಾಕಿ ಹಣ ವಸೂಲಿಯಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...