alex Certify ಈ ರಾಶಿಯವರಿಗೆ ಇಂದು ಸಿಗಲಿದೆ ಉದ್ಯೋಗದಲ್ಲಿ ಭಡ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಸಿಗಲಿದೆ ಉದ್ಯೋಗದಲ್ಲಿ ಭಡ್ತಿ

ಮೇಷ- ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡುವಿರಿ. ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯದಲ್ಲಿ ಜಯವಿದೆ. ವೈವಾಹಿಕ ಜೀವನದಲ್ಲಿ ನೆಮ್ಮದಿಯಿದೆ.

ವೃಷಭ- ಕಚೇರಿಯಲ್ಲಿ ಹೊಸ ಜವಾಬ್ದಾರಿಯೊಂದು‌ ನಿಮ್ಮ ಹೆಗಲೇರಲಿದೆ. ಇದರಿಂದ ಒತ್ತಡಕ್ಕೆ ಒಳಗಾಗುವಿರಿ. ಹೊಸ ಮೂಲದಿಂದ ಹಣದ ಹರಿವಿದೆ.

ಮಿಥುನ- ನಿಮ್ಮ ಕೋಪವನ್ನು‌ ನಿಯಂತ್ರಣ ಮಾಡಿಕೊಂಡಷ್ಟು ಒಳ್ಳೆಯದು. ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಸಾಲಗಳು ತೀರಲಿದೆ.

ಕಟಕ- ವೈವಾಹಿಕ ಜೀವನದಲ್ಲಿನ ಕಿರಿ ಕಿರಿ ದೂರವಾಗಲಿದೆ. ಸಂಗಾತಿಯ ವಿಶ್ವಾಸವನ್ನು‌ ಗೆಲ್ಲಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗವಿದೆ.

ಸಿಂಹ- ಹಣ ಗಳಿಸಲು‌ ಹೊಸ ಮಾರ್ಗವನ್ನು ಹುಡುಕಲಿದ್ದೀರಿ. ವೈದ್ಯಕೀಯ ಕ್ಷೇತ್ರದಲ್ಲಿ ಲಾಭವಿದೆ.

ಕನ್ಯಾ- ತಾಯಿ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ನಿಮ್ಮ ಇಡೀ ದಿನದ ನೆಮ್ಮದಿ ಹಾಳಾಗಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿಯಿದೆ.

ತುಲಾ- ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಬೇರೊಂದು ಸರ್ಕಾರಿ ಉದ್ಯೋಗ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಸಂಗಾತಿಯಿಂದ ಉತ್ತಮ ಉಡುಗೊರೆಯೊಂದು ಪಡೆಯಲಿದ್ದೀರಿ.

ವೃಶ್ಚಿಕ- ಕೌಟುಂಬಿಕ ಅಗತ್ಯತೆಯನ್ನು ಪೂರೈಸಲು ಹೆಣಗಾಡುವಿರಿ. ಮನೆಗೆ ಪೀಠೋಪಕರಣ ಖರೀದಿ ಮಾಡಲಿದ್ದೀರಿ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ.

ಧನು- ಸ್ನೇಹಿತರ ಜೊತೆ ಮನಸ್ತಾಪ ಮೂಡಲಿದೆ. ದೂರದ ಊರಿಗೆ ಪ್ರಯಾಣ ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಜಾಗೃತೆಯಿರಲಿ.

ಮಕರ- ಉದ್ಯೋಗದಲ್ಲಿ ಭಡ್ತಿ ಸಿಗಲಿದೆ. ತರಕಾರಿ ಹಣ್ಣಿನ ವ್ಯಾಪಾರಿಗಳಿಗೆ ಲಾಭವಿದೆ. ವಿದ್ಯಾರ್ಥಿಗಳಿಗೆ ಈ ದಿನ ಶುಭಕರವಲ್ಲ.

ಕುಂಭ- ಆಸ್ತಿ ವಿಚಾರದಲ್ಲಿ ದಾಯಾದಿ ಕಲಹ ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ಕಿರಿಕಿರಿ ಅನುಭವಿಸಲಿದ್ದೀರಿ. ಮಹಿಳೆಯರಿಗೆ ಆರೋಗ್ಯದ ಬಗ್ಗೆ ಜಾಗೃತೆಯಿರಲಿ.

ಮೀನ- ಸಂಗಾತಿಯೊಡನೆ ಚಿಕ್ಕ ಚಿಕ್ಕ ವಿಷಯಕ್ಕೂ ಗಲಾಟೆ ಮಾಡಲಿದ್ದೀರಿ. ಕೋಪದ ಕೈಗೆ ಬುದ್ದಿ ಕೊಡಬೇಡಿ. ಉಳಿತಾಯ ಮಾಡಲು ಪ್ರಯತ್ನಿಸಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...