alex Certify ಈ ರಾಶಿಯ ಸ್ತ್ರೀಯರಿಗಿದೆ ಇಂದು ಧನಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಸ್ತ್ರೀಯರಿಗಿದೆ ಇಂದು ಧನಲಾಭ

ಮೇಷ : ಪ್ರಭಾವಿ ವ್ಯಕ್ತಿಯಾಗಿರುವ ನೀವು ನಿಮ್ಮ ಪ್ರಭಾವವನ್ನು ಬಳಸಿ ಇಂದು ಅನೇಕರಿಗೆ ಸಹಾಯ ಮಾಡಲಿದ್ದೀರಿ. ವೃತ್ತಿ ರಂಗದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಶಿಕ್ಷಕರಿಗೆ ಇಂದು ಕೆಲಸದ ಒತ್ತಡ ಹೆಚ್ಚಲಿದೆ. ಕಷ್ಟದಲ್ಲಿರುವ ಸ್ನೇಹಿತರಿಗೆ ಸಹಾಯ ಮಾಡಲಿದ್ದೀರಿ.

ವೃಷಭ : ಇಂದು ನೀವು ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಇಂದು ಸಾರ್ವಜನಿಕ ಸ್ಥಳದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ಳಲಿದ್ದೀರಿ. ಸಂಗಾತಿಯ ಬೆಂಬಲವು ನಿಮಗೆ ಈ ಸಮಯದಲ್ಲಿ ಸಾಕಷ್ಟು ಮನೋಸ್ಥೈರ್ಯ ನೀಡಲಿದೆ.

ಮಿಥುನ: ವ್ಯಾಪಾರ- ವ್ಯವಹಾರಗಳಲ್ಲಿ ನಿಮ್ಮ ಹೊಸ ಪ್ರಯೋಗಗಳಿಗೆ ಪೋಷಕರ ಬೆಂಬಲ ಸಿಗಲಿದೆ. ಕುಟುಂಬದಲ್ಲಿ ನೀವಿಂದು ಆಕರ್ಷಣೆಯ ಕೇಂದ್ರಬಿಂದುವಾಗಲಿದ್ದೀರಿ. ದಾಂಪತ್ಯ ಜೀವನ ಸುಖಮಯವಾಗಿ ಇರಲಿದೆ.

ಕಟಕ : ಮಕ್ಕಳ ಸಾಧನೆಯ ಬಗ್ಗೆ ಕುಟುಂಬಸ್ಥರು ಕೊಂಡಾಡುವ ಹಿನ್ನೆಲೆಯಲ್ಲಿ ಪೋಷಕರಾಗಿ ನೀವಿಂದು ಹೆಮ್ಮೆ ಪಡುವಿರಿ. ಅನೇಕ ದಿನಗಳ ಬಳಿಕ ನಿಮ್ಮ ಸಂಗಾತಿಯ ಜೊತೆ ಅಮೂಲ್ಯ ಕ್ಷಣವನ್ನು ಕಳೆಯಲಿದ್ದೀರಿ. ತಾಯಿಯ ಆರೋಗ್ಯ ಹದಗೆಡುವುದು ನಿಮ್ಮನ್ನು ಆತಂಕಕ್ಕೆ ದೂಡಲಿದೆ.

ಸಿಂಹ : ಮನೆಯ ಕಿರಿಯ ಪುತ್ರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ. ನಿಮ್ಮ ಸಾಧನೆಯನ್ನು ನೋಡಿ ಅನೇಕರು ನಿಮ್ಮ ವಿರುದ್ಧ ವಿಷಕಾರಬಹುದು. ಆದಷ್ಟು ಎಚ್ಚರಿಕೆಯಿಂದಿರಿ. ದುರ್ಗಾ ದೇವಿಯನ್ನು ಆರಾಧಿಸಿ.

ಕನ್ಯಾ : ಅಂದುಕೊಂಡ ಕಾರ್ಯಗಳಲ್ಲಿ ನಿಮಗಿಂದು ಯಶಸ್ಸು ಪ್ರಾಪ್ತಿಯಾಗಲಿದೆ. ವ್ಯವಹಾರವನ್ನು ಮುಂದುವರಿಸುವ ಸಲುವಾಗಿ ದೂರ ಪ್ರಯಾಣ ಮಾಡಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಸ್ತ್ರೀಯರಿಗೆ ಧನಲಾಭವಿದೆ.

ತುಲಾ : ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ದಿನ ಅತ್ಯಂತ ಪ್ರಯೋಜನಕಾರಿಯಾಗಿದೆ. ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯಿದೆ. ಪರಸ್ತ್ರೀಯರೊಂದಿಗೆ ಅತಿಯಾದ ಸಲುಗೆ ಸಲ್ಲದು.

ವೃಶ್ಚಿಕ : ನಿಮ್ಮ ಕೆಲಸದ ಶೈಲಿ ಹಾಗೂ ದಕ್ಷತೆ ಮೇಲಾಧಿಕಾರಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಲಿದೆ. ನೀವು ಮಾಡುವ ಒಳ್ಳೆಯ ಕೆಲಸಗಳೇ ನಿಮ್ಮ ಕಾಯಲಿದೆ. ಕುಟುಂಬ ಸಮೇತ ಕುಲದೇವರ ದರ್ಶನ ಮಾಡಲಿದ್ದೀರಿ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ.

ಧನು : ಇಂದು ನೀವು ಸಾರ್ವಜನಿಕ ಜೀವನದಲ್ಲಿ ಪ್ರಶಂಸೆಗಿಟ್ಟಿಸಿಕೊಳ್ಳಲಿದ್ದೀರಿ. ನಿಮ್ಮ ಸಂತೋಷಕ್ಕಾಗಿ ನಿಮ್ಮ ತಂದೆ ಇಂದು ಬಹುದೊಡ್ಡ ತ್ಯಾಗ ಮಾಡಲಿದ್ದಾರೆ. ವಿವಾಹ ನಿಮಿತ್ತ ಇಂದು ಮನೆಯಲ್ಲಿ ಚಿನ್ನ ಖರೀದಿ ಮಾಡಲಿದ್ದಾರೆ.

ಮಕರ : ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೊಂದಿಗೆ ಮನಸ್ತಾಪ ಮಾಡಿಕೊಂಡು ನೀವು ಪಶ್ಚಾತಾಪ ಅನುಭವಿಸಲಿದ್ದೀರಿ. ವ್ಯಾಪಾರ – ವ್ಯವಹಾರದಲ್ಲಿ ಇರುವವರಿಗೆ ಈ ದಿನ ಲಾಭದಾಯಕವಾಗಿದೆ. ಆದಷ್ಟು ಅನಗತ್ಯ ಖರ್ಚುಗಳ ಕಡೆಗೆ ಕಡಿವಾಣವನ್ನು ಹಾಕಿ.

ಕುಂಭ : ಬಹಳ ದಿನಗಳ ಬಳಿಕ ಇಂದು ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ. ಸೌಂದರ್ಯ ವರ್ಧಕಗಳ ವ್ಯಾಪಾರಿಗಳಿಗೆ ಇದು ಲಾಭದ ದಿನವಾಗಿದೆ. ವಿದ್ಯಾರ್ಥಿಗಳು ಅಂದುಕೊಂಡಿದ್ದನ್ನು ಸಾಧಿಸಲಿದ್ದಾರೆ. ಕುಟುಂಬದಲ್ಲಿ ನೆಮ್ಮದಿ ಇದೆ.

ಮೀನ : ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ಹಣಕಾಸಿನ ವಿಚಾರದಲ್ಲಿ ಸ್ನೇಹಿತರ ಜೊತೆಯಲ್ಲಿಯೇ ಮನಸ್ತಾಪ ಉಂಟಾಗಬಹುದು. ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ನೀವು ಇಂದು ಮನೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಿದ್ದೀರಿ. ಎಲ್ಲವೂ ಒಳಿತಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...