alex Certify ಈ ರಾಶಿಯವರಿಗೆ ಇಂದು ಲಭಿಸಲಿದೆ ಸಾರ್ವಜನಿಕ ಜೀವನದಲ್ಲಿ ಉತ್ತಮ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಲಭಿಸಲಿದೆ ಸಾರ್ವಜನಿಕ ಜೀವನದಲ್ಲಿ ಉತ್ತಮ ಗೌರವ

ಮೇಷ : ಆಸ್ತಿ ಖರೀದಿ ಮಾಡಬೇಕೆಂದುಕೊಂಡವರಿಗೆ ಇಂದು ಶುಭ ದಿನ. ರಿಯಲ್​ ಎಸ್ಟೇಟ್​ ಉದ್ಯಮಿಗಳು ಇಂದು ಲಾಭ ಕಾಣಲಿದ್ದಾರೆ. ವಿದ್ಯಾರ್ಥಿಗಳಿಗೆ ಅಂದುಕೊಂಡ ಕೆಲಸದಲ್ಲಿ ವಿಜಯವಿದೆ.

ವೃಷಭ : ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ತೆರಳಲಿದ್ದಾರೆ. ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿಯು ಸ್ಫೋಟವಾಗಬಹುದು. ಇದರಿಂದ ಮನೆಯಲ್ಲಿ ಶಾಂತಿ ಕದಡಲಿದೆ. ಪೋಷಕರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಮಿಥುನ : ಮನೆಯ ಖರ್ಚನ್ನು ಸರಿಹೊಂದಿಸಲು ಅತಿಯಾಗಿ ದುಡಿಯಲಿದ್ದೀರಿ. ಇದರಿಂದ ಅನಾರೋಗ್ಯದ ಸಮಸ್ಯೆ ನಿಮ್ಮನ್ನು ಭಾದಿಸಲಿದೆ. ತಾಯಿಯ ನಡವಳಿಕೆ ನಿಮ್ಮ ಮನಸ್ಸಿಗೆ ನೋವುಂಟು ಮಾಡಲಿದೆ. ಮಕ್ಕಳ ಓದಿನ ಕಡೆಗೆ ಗಮನ ಇರಲಿ.

ಕಟಕ : ರಾಜಕೀಯ ವ್ಯಕ್ತಿಗಳಿಗೆ ಸಾರ್ವಜನಿಕ ಜೀವನದಲ್ಲಿ ಉತ್ತಮ ಗೌರವ ಲಭಿಸಲಿದೆ. ಹಣದ ಗಳಿಕೆಗೆ ನಿಮಗೆ ಹೊಸ ಮಾರ್ಗ ಕಾಣಲಿದೆ. ಸಂಬಂಧಿಗಳು ಆರ್ಥಿಕ ಸಂಕಷ್ಟಕ್ಕೆ ಹೆಗಲಾಗಲಿದ್ದಾರೆ. ಮಕ್ಕಳ ಸಾಧನೆಯಿಂದ ನಿಮ್ಮ ಕೀರ್ತಿ ಹೆಚ್ಚಲಿದೆ.

ಸಿಂಹ : ನಿಮ್ಮ ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ದೊರಕಲಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಕೈಗೊಳ್ಳಲಿದ್ದೀರಿ. ಸಂಬಂಧಿಗಳು ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು. ಸಂಗಾತಿಯು ನಿಮಗೆ ಸಹಕಾರ ನೀಡಲಿದ್ದಾರೆ.

ಕನ್ಯಾ : ಮನೆಯಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಗೆ ನೀವು ಪರಿಹಾರ ಹುಡುಕಲಿದ್ದೀರಿ. ನಿಮ್ಮ ಒಳ್ಳೆಯ ಮಾತು ಸಂಬಂಧಗಳನ್ನು ಸರಿ ಮಾಡಲಿದೆ. ಪ್ರೀತಿ ಪಾತ್ರರ ನಡುವೆ ಮನಸ್ತಾಪ ಉಂಟಾಗಬಹದು. ಆಸ್ತಿ ವಿಚಾರದಲ್ಲಿ ದಾಯಾದಿ ಕಲಹವಿದೆ.

ತುಲಾ : ಬರುವ ಸಂಬಳದಲ್ಲಿ ಹಣ ಉಳಿಯುತ್ತಿಲ್ಲ ಎಂದು ಕೊರಗುತ್ತಿರುವ ನಿಮಗೆ ಹೊಸ ಅವಕಾಶವೊಂದು ಹುಡುಕಿಕೊಂಡು ಬರಲಿದೆ. ಹೀಗಾಗಿ ನೀವು ಇಂದು ಅತ್ಯಂತ ಸಂತೋಷದಲ್ಲಿ ಇರಲಿದ್ದೀರಿ , ಹಣ್ಣಿನ ವ್ಯಾಪಾರಿಗಳು ಹಾಗೂ ತರಕಾರಿ ವ್ಯಾಪಾರಿಗಳಿಗೆ ಲಾಭವಿದೆ.

ವೃಶ್ಚಿಕ : ಸ್ನೇಹಿತರ ನಡುವೆ ಮೂಡಿದ್ದ ಭಿನ್ನಾಭಿಪ್ರಾಯಗಳು ದೂರಾಗಲಿದೆ. ಸಂಗಾತಿಯು ನಿಮಗೆ ದುಬಾರಿ ಮೌಲ್ಯದ ವಸ್ತುವನ್ನು ಉಡುಗೊರೆ ನೀಡಲಿದ್ದಾರೆ. ಮಕ್ಕಳ ಒತ್ತಾಯಕ್ಕೆ ಮಣಿದು ವ್ಯಾಯಾಮ ಖರೀದಿ ಮಾಡಲಿದ್ದೀರಿ.

ಧನು : ವ್ಯಾಪಾರ – ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಗಳಿಸಲಿದ್ದೀರಿ. ಕುಟುಂಬದ ವಿವಾದಗಳು ದೂರಾಗಲಿದೆ. ಮಿತ್ರರು ನಿಮಗೆ ಸಹಾಯ ಮಾಡಲಿದ್ದಾರೆ. ಮನೆಯಲ್ಲಿ ಶುಭಕಾರ್ಯ ನಡೆಯಲಿದೆ.

ಮಕರ : ನಿರಂತರ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಕುಟುಂಬದಲ್ಲಿನ ಕಿರಿಕಿರಿಗೆ ಪರಿಹಾರ ಸಿಗಲಿದೆ. ಪೋಷಕರಿಂದ ಮಾರ್ಗದರ್ಶನ ಪಡೆದು ಉದ್ಯಮದಲ್ಲಿ ಬದಲಾವಣೆ ಮಾಡಲಿದ್ದೀರಿ.

ಕುಂಭ : ಸಹೋದರಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಹೆಗಲು ನೀಡಲಿದ್ದಾರೆ. ವಾಹನ ಸವಾರಿ ಮಾಡುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.

ಮೀನ : ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವೃತ್ತಿ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಪದೇ ಪದೇ ಕೆಟ್ಟ ಕನಸು ಬೀಳುವುದರಿಂದ ಬೇಸತ್ತಿದ್ದೀರಾ. ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿ. ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಪಡೆಯುವಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...