alex Certify ಈ ರಾಶಿಯವರಿಗೆ ಇಂದು ಜೊತೆಗಿರಲಿದೆ ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಜೊತೆಗಿರಲಿದೆ ಅದೃಷ್ಟ

ಮೇಷ ರಾಶಿ 

ಇವತ್ತು ನಿಮಗೆ ಧನಲಾಭ ಯೋಗವಿದೆ. ನಿಮ್ಮ ಸಹೋದ್ಯೋಗಿಗಳೇ ನಿಮ್ಮ ಆತಂಕವನ್ನು ದೂರ ಮಾಡಲಿದ್ದಾರೆ. ಯಾವುದೇ ಕೆಲಸಕ್ಕೂ ಆತುರ ಬೇಡ. ಸದ್ಯ ಇರುವ ಉದ್ಯೋಗವನ್ನು ಬಿಡಬೇಡಿ. ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಬಹುದು. ಚಿಂತಿಸಿ ಮಾತನಾಡಿ.

ವೃಷಭ ರಾಶಿ

ಉದ್ಯಮ ಅಥವಾ ಕೆಲಸದ ಕಡೆಗೆ ಹೆಚ್ಚು ಗಮನವಿರಲಿದೆ. ಖಾಸಗಿ ಜೀವನದಲ್ಲಿ ಬದಲಾವಣೆ ತರುವ ಬಗ್ಗೆ ಯೋಚಿಸುತ್ತೀರಾ. ಕಚೇರಿಯಲ್ಲಿ ಎದುರಾಗಿದ್ದ ಸಮಸ್ಯೆ ನಿವಾರಣೆಯಾಗಲಿದೆ.

ಮಿಥುನ ರಾಶಿ

ಕಚೇರಿಯ ಕೆಲಸದಲ್ಲಿ ಸಫಲತೆ ಸಿಗಲಿದೆ. ಸ್ನೇಹಿತರಿಂದ ಸಂಪೂರ್ಣ ಸಹಕಾರ ದೊರೆಯಲಿದೆ. ಜವಾಬ್ಧಾರಿ ಹೆಚ್ಚಲಿದೆ ಜೊತೆಗೆ ಅದೃಷ್ಟವೂ ನಿಮಗೆ ಸಾಥ್ ಕೊಡಲಿದೆ. ಕಚೇರಿ ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಯಬಹುದು.

ಕರ್ಕ ರಾಶಿ

ಇಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಲಿದ್ದೀರಿ. ಮಿತ್ರರೊಂದಿಗೆ ಸುತ್ತಾಡುವ ಅವಕಾಶ ಸಿಗಲಿದೆ. ಹೆಚ್ಚು ಹಣ ಖರ್ಚಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ.

ಸಿಂಹ ರಾಶಿ

ಶರೀರದಲ್ಲಿ ಸ್ಪೂರ್ತಿಯ ಅಭಾವವಿರುತ್ತದೆ. ನಿಗದಿತ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಮಾನಸಿಕ ಚಿಂತೆಯಿಂದಾಗಿ ವ್ಯಗ್ರತೆಯ ಅನುಭವವಾಗಬಹುದು.

ಕನ್ಯಾ ರಾಶಿ

ಇಂದು ಎಲ್ಲಾ ವಿಷಯದಲ್ಲೂ ಅನುಕೂಲತೆಯ ಅನುಭವವಾಗುತ್ತದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ. ಆರೋಗ್ಯ ಸುಧಾರಿಸಲಿದೆ. ಆರ್ಥಿಕ ಲಾಭ ದೊರೆಯಬಹುದು.

ತುಲಾ ರಾಶಿ

ನಿಮ್ಮ ಮನಸ್ಸು ಶಾಂತವಾಗಿ, ಪ್ರಸನ್ನವಾಗಿರುತ್ತದೆ. ಒಡಹುಟ್ಟಿದವರನ್ನು ಭೇಟಿಯಾಗಲಿದ್ದೀರಿ. ಹೊಸ ಕಾರ್ಯವನ್ನು ಆರಂಭಿಸಲು ದಿನ ಉತ್ತಮವಾಗಿದೆ.

ವೃಶ್ಚಿಕ ರಾಶಿ

ನಿಮಗೆ ಏಕಾಗ್ರತೆಯ ಅನುಭವವಾಗಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಕರ್ಚಾಗುತ್ತದೆ. ಕೋರ್ಟ್ ಕಚೇರಿ-ವ್ಯವಹಾರದಲ್ಲಿ ಎಚ್ಚರಿಕೆ ವಹಿಸುವುದು ಒಳಿತು. ಸಂಬಂಧಿಕರು ಮತ್ತು ಮಿತ್ರರೊಂದಿಗೆ ಸ್ವಾದಿಷ್ಟ ಭೋಜನ ಸವಿಯಲಿದ್ದೀರಿ. ಆರೋಗ್ಯ ಉತ್ತಮವಾಗಿರುತ್ತದೆ.

ಧನು ರಾಶಿ

ಮನಸ್ಸು ಚಿಂತೆಯ ಗೂಡಾಗಲಿದೆ. ಉದರ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ಮಧ್ಯಾಹ್ನದ ನಂತರ ಸ್ವಲ್ಪ ಚೇತರಿಸಿಕೊಳ್ಳಲಿದ್ದೀರಿ. ನಿಮ್ಮ ಕಾರ್ಯಕ್ಕೆ ಶ್ಲಾಘನೆ ಸಿಗಲಿದೆ.

ಮಕರ ರಾಶಿ

ಇಂದು ನಿಮ್ಮ ಮಾತುಗಳಿಂದಲೇ ನಿಮಗೆ ಲಾಭವಾಗಲಿದೆ. ಪ್ರವಾಸ ಕೈಗೊಳ್ಳಲಿದ್ದೀರಿ. ವ್ಯಾಪಾರಿಗಳಿಗೆ ಲಾಭವಿದೆ. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ.

ಕುಂಭ ರಾಶಿ

ಆದಾಯ ವೃದ್ಧಿಸಲಿದೆ. ಸ್ನೇಹಿತರೊಂದಿಗೆ ಸುತ್ತಾಡಲು ತೆರಳಲಿದ್ದೀರಿ. ಮಧ್ಯಾಹ್ನದ ನಂತರ ನಿಮ್ಮ ಸ್ವಭಾವದಲ್ಲಿ ಕೋಪ ಮತ್ತು ವ್ಯಗ್ರತೆ ಹೆಚ್ಚಾಗಿರುತ್ತದೆ.

ಮೀನ ರಾಶಿ

ಇಂದು ಹೊಸ ಕಾರ್ಯ ಆರಂಭಿಸಬಹುದು. ಆರೋಗ್ಯದ ಬಗ್ಗೆ ಗಮನಹರಿಸಿ. ಮಾತಿನ ಮೇಲೆ ಸಂಯಮ ಇರಲಿ. ಯಾವುದೇ ರೀತಿಯ ಉಗ್ರ ಚರ್ಚೆ ಅಥವಾ ವಾದ-ವಿವಾದದಲ್ಲಿ ತೊಡಗಬೇಡಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...