alex Certify ಈ ರಾಶಿಯವರಿಗಿದೆ ಇಂದು ವಿದೇಶೀ ವಹಿವಾಟಿನಲ್ಲಿ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ವಿದೇಶೀ ವಹಿವಾಟಿನಲ್ಲಿ ಲಾಭ

ಮೇಷ ರಾಶಿ

ವ್ಯಾಪಾರ ಕ್ಷೇತ್ರದಲ್ಲಿ ಅವಶ್ಯಕ ವಿಷಯಗಳ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಸರ್ಕಾರಿ ಯೋಜನೆಯ ಲಾಭ ದೊರೆಯುವ ಸಂಭವವಿದೆ. ಕಚೇರಿಗೆ ಸಂಬಂಧಪಟ್ಟ ಕೆಲಸದ ಮೇಲೆ ಪ್ರವಾಸ ಮಾಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ಆನಂದದ ವಾತಾವರಣವಿರಲಿದೆ.

ವೃಷಭ ರಾಶಿ

ಇವತ್ತಿನ ದಿನ ಮಿಶ್ರಫಲವಿದೆ. ಪ್ಯಾಪಾರಿಗಳು ಹಣ ಹೂಡಿಕೆ ಮಾಡಿ ಹೊಸ ಕಾರ್ಯ ಆರಂಭ ಮಾಡಬಹುದು. ಭವಿಷ್ಯಕ್ಕಾಗಿ ಯೋಜನೆಯನ್ನೂ ರೂಪಿಸುತ್ತೀರಿ. ವಿದೇಶ ಪ್ರಯಾಣದ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ.

ಮಿಥುನ ರಾಶಿ

ಕೋಪದಿಂದ ನಿಮಗೆ ಹಾನಿಯಾಗುವ ಸಾಧ್ಯತೆ ಇದೆ. ಖಾಯಿಲೆ ಪೀಡಿತ ವ್ಯಕ್ತಿಯ ಕುರಿತು ಗಮನ ಅಗತ್ಯ. ಕಡಿಮೆ ಮಾತನಾಡಿ, ಇದರಿಂದ ವಾದ-ವಿವಾದದ ಸಂದರ್ಭಗಳು ಎದುರಾಗುವುದಿಲ್ಲ. ಖರ್ಚು ಕೂಡ ಅಧಿಕವಾಗುವ ಸಾಧ್ಯತೆ ಇದೆ.

ಕರ್ಕ ರಾಶಿ

ಇವತ್ತು ಸಂವೇದನಾಶೀಲರಾಗಿರುತ್ತೀರಿ. ಮನಸ್ಸಿನಲ್ಲಿ ಪ್ರೇಮದ ಭಾವನೆ ತುಂಬಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರಲಿದೆ. ವ್ಯಾಪಾರದಲ್ಲಿ ವಿದೇಶೀ ವಹಿವಾಟಿನಲ್ಲಿ ಲಾಭವಾಗಲಿದೆ. ಪಾಲುದಾರಿಕೆ ಕೂಡ ಲಾಭದಾಯಕವೆನಿಸಲಿದೆ.

ಸಿಂಹ ರಾಶಿ

ದಿನದ ಕಾರ್ಯ ವಿಳಂಬವಾಗಿ ಪೂರ್ಣಗೊಳ್ಳಲಿದೆ. ಕೆಲಸದಲ್ಲಿ ಪರಿಶ್ರಮ ವಹಿಸಿ. ಉದ್ಯೋಗ ಮಾಡುವವರು ಜಾಗರೂಕರಾಗಿರಿ. ಜೊತೆಗಾರರ ಸಹಯೋಗ ಹೆಚ್ಚಾಗಿ ದೋರೆಯುವುದಿಲ್ಲ. ತಾಯಿಯ ಕಡೆಯಿಂದ ಆತಂಕದ ಸುದ್ದಿ ಬರಬಹುದು.

ಕನ್ಯಾ ರಾಶಿ

ಇವತ್ತು ಹೆಚ್ಚು ಲೈಂಗಿಕ ಆಕರ್ಷಣೆಗೆ ಒಳಗಾಗುತ್ತೀರಿ. ಹೊಟ್ಟೆಯಲ್ಲಿ ಕ್ಷೋಭೆ, ನೋವು ಕಾಣಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಕೊಡಿ. ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ. ಪ್ರೀತಿಪಾತ್ರರನ್ನು ಭೇಟಿಯಾಗುವ ಅವಕಾಶವಿದೆ.

ತುಲಾ ರಾಶಿ

ಇವತ್ತು ಸ್ವಲ್ಪ ಸಮಾಧಾನದಿಂದ ಎಚ್ಚರಿಕೆಯಿಂದಿರಿ. ಕಲ್ಪನೆ ಮತ್ತು ಚಿಂತನೆ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲಿದೆ. ತಾಯಿ ಮತ್ತು ಸ್ತ್ರೀವರ್ಗಕ್ಕೆ ಸಂಬಂಧಿಸಿದ ಚಿಂತೆ ಕಾಡಲಿದೆ. ಇವತ್ತು ಪ್ರಯಾಣ ಮಾಡಬೇಡಿ.

ವೃಶ್ಚಿಕ ರಾಶಿ

ಇವತ್ತಿನ ದಿನ ನಿಮಗೆ ಲಾಭದಾಯಕವಾಗಲಿದೆ. ಆರ್ಥಿಕ ಲಾಭದ ಜೊತೆಗೆ ಅದೃಷ್ಟವೂ ನಿಮ್ಮದಾಗಲಿದೆ. ಸ್ನೇಹಜೀವಿಗಳೊಂದಿಗಿನ ಸಂಬಂಧ ಇನ್ನಷ್ಟು ಉತ್ತಮವಾಗಲಿದೆ. ಹೊಸ ಕಾರ್ಯವನ್ನು ಆರಂಭಿಸಲು ಸಮಯ ಸೂಕ್ತವಾಗಿದೆ.

ಧನು ರಾಶಿ

ಕುಟುಂಬದವರೊಂದಿಗೆ ಉಂಟಾಗಬಹುದಾದ ಅಪಾರ್ಥಗಳಿಂದ ದೂರವಿರಿ. ವ್ಯರ್ಥ ಖರ್ಚು ಹೆಚ್ಚಾಗಲಿದೆ. ಮಾನಸಿಕ ಗೊಂದಲದಿಂದಾಗಿ ಮಹತ್ವಪೂರ್ಣ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಿರೀಕ್ಷಿಸಿದ ಸಫಲತೆ ಕೂಡ ಸಿಗುವುದಿಲ್ಲ.

ಮಕರ ರಾಶಿ

ಇವತ್ತು ಈಶ್ವರನನ್ನು ಆರಾಧಿಸಿ, ಪೂಜೆಯಲ್ಲಿ ತೊಡಗಿಕೊಳ್ಳಿ. ಕುಟುಂಬದಲ್ಲಿ ಮಂಗಳಮಯ ವಾತಾವರಣವಿರಲಿದೆ. ಸ್ನೇಹಿತರು ಮತ್ತು ಸಂಬಂಧಿಕರ ಭೇಟಿಯಿಂದ ಮನಸ್ಸು ಉಲ್ಲಸಿತವಾಗಿರಲಿದೆ. ಅಂದುಕೊಂಡ ಕಾರ್ಯ ಸುಲಭವಾಗಿ ಪೂರ್ಣಗೊಳ್ಳುತ್ತದೆ.

ಕುಂಭ ರಾಶಿ

ಹಣದ ವಿಚಾರದಲ್ಲಿ ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ. ಏಕಾಗ್ರತೆಯ ಕೊರತೆ ಮಾನಸಿಕ ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳು ಕಾಡುತ್ತವೆ. ಹಣವನ್ನು ಸರಿಯಾದ ಜಾಗದಲ್ಲಿ ಇಟ್ಟುಕೊಳ್ಳಿ.

ಮೀನ ರಾಶಿ

ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಹಿರಿಯರು ಮತ್ತು ಸ್ನೇಹಿತರ ಬೆಂಬಲ ದೊರೆಯುತ್ತದೆ. ಹೊಸ ಸ್ನೇಹಿತರು ದೊರೆಯುವ ಸಾಧ್ಯತೆ ಇದೆ. ನೌಕರಿ ಮತ್ತು ವ್ಯವಸಾಯದಲ್ಲಿ ಯಶಸ್ಸು ಸಿಗಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...