alex Certify ಈ ರಾಶಿಯವರಿಗಿದೆ ಇಂದು ವಸ್ತ್ರಾಭರಣಗಳ ಖರೀದಿ ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ವಸ್ತ್ರಾಭರಣಗಳ ಖರೀದಿ ಯೋಗ

ಮೇಷ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಇವತ್ತು ಎಲ್ಲಾ ಕೆಲಸ ಕಾರ್ಯಗಳಲ್ಲೂ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ.

ವೃಷಭ ರಾಶಿ

ಇವತ್ತು ನಿಮಗೆ ಶುಭದಿನ. ಧನವೃದ್ಧಿ ಹಾಗೂ ಪದೋನ್ನತಿಯ ಯೋಗವಿದೆ. ಉದ್ಯಮದಲ್ಲಿ ಮಾಡಿಕೊಂಡ ಒಪ್ಪಂದಗಳಿಂದ ಲಾಭವಾಗಲಿದೆ. ಮನಸ್ಸು ಕೂಡ ಚಿಂತೆರಹಿತವಾಗಿರಲಿದೆ. ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ.

ಮಿಥುನ ರಾಶಿ

ಮಹತ್ವಪೂರ್ಣ ಕಾರ್ಯವನ್ನು ಇವತ್ತು ಪೂರ್ಣಗೊಳಿಸಿ. ಧನಲಾಭದ ಸಂಭವ ಇದೆ. ಮನಸ್ಸಿನ ಉದಾಸೀನತೆ ನಿಮ್ಮಲ್ಲಿ ನಕಾರಾತ್ಮಕ ಭಾವನೆಯನ್ನು ಉಂಟು ಮಾಡಬಹುದು ಎಚ್ಚರ ವಹಿಸಿ.

ಕರ್ಕ ರಾಶಿ

ಇಂದು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಉತ್ಸಾಹದಿಂದ ಇರುತ್ತೀರಿ. ಕುಟುಂಬದವರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಿ. ಅಪೂರ್ಣವಾಗಿದ್ದ ಕೆಲಸಗಳೆಲ್ಲ ಪೂರ್ಣಗೊಳ್ಳಲಿವೆ. ಮಿತ್ರರೊಂದಿಗೆ ಉಪಹಾರ ಮಾಡಲಿದ್ದೀರಿ.

ಸಿಂಹ ರಾಶಿ

ಮನಸ್ಸು ಮತ್ತು ದೇಹಕ್ಕೆ ಸ್ಪೂರ್ತಿಯ ಕೊರತೆಯಿಲ್ಲ. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮಿತ್ರರಿಂದ ಲಾಭವಿದೆ. ಶುಭ ಕಾರ್ಯ ಆರಂಭಕ್ಕೆ ಸಮಯ ಅನುಕೂಲಕರವಾಗಿದೆ.

ಕನ್ಯಾ ರಾಶಿ

ವಸ್ತ್ರಾಭರಣಗಳ ಖರೀದಿ ನಿಮಗೆ ರೋಮಾಂಚಕ ಹಾಗೂ ಆನಂದದಾಯಕವಾಗಿರುತ್ತದೆ. ಕಲೆಯ ಬಗ್ಗೆ ವಿಶೇಷ ಆಸಕ್ತಿ ಮೂಡಲಿದೆ. ವ್ಯಾಪಾರ ವೃದ್ಧಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ.

ತುಲಾ ರಾಶಿ

ದುರ್ಘಟನೆಯ ಬಗ್ಗೆ ಎಚ್ಚರಿಕೆಯಿಂದಿರಿ. ಖರ್ಚು ಹೆಚ್ಚಾಗಲಿದೆ. ಯಾರೊಂದಿಗಾದ್ರೂ ಉಗ್ರ ಚರ್ಚೆಯಾಗಬಹುದು. ಹಾಗಾಗಿ ಮಾತಿನ ಮೇಲೆ ನಿಯಂತ್ರಣವಿರಲಿ. ಕೋರ್ಟ್-ಕಚೇರಿ ವ್ಯವಹಾರದಲ್ಲಿ ಎಚ್ಚರವಿರಲಿ.

ವೃಶ್ಚಿಕ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ನೌಕರಿ ಮತ್ತು ವ್ಯಾಪಾರದಲ್ಲಿ ಲಾಭವಾಗುತ್ತದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಸುಂದರ ತಾಣಕ್ಕೆ ಪ್ರವಾಸ ತೆರಳುವ ಸಾಧ್ಯತೆ ಇದೆ. ಮಕ್ಕಳು ಮತ್ತು ಸಂಗಾತಿಯಿಂದ ಲಾಭವಾಗಲಿದೆ.

ಧನು ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆ ಉಂಟಾಗಲಿದೆ. ಇದರಿಂದ ವ್ಯಗ್ರತೆ ಹೆಚ್ಚಾಗುತ್ತದೆ. ಹಣ ಮತ್ತು ಕೀರ್ತಿಗೆ ಹಾನಿಯಾಗಬಹುದು.

ಮಕರ ರಾಶಿ

ಇಂದು ಮಿಶ್ರಫಲವಿದೆ. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಇರುವುದಿಲ್ಲ.

ಕುಂಭ ರಾಶಿ

ಆರ್ಥಿಕ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ಮನೆಯಲ್ಲಿ ಆನಂದದ ವಾತಾವರಣ ಇರುತ್ತದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ.

ಮೀನ ರಾಶಿ

ಕೋರ್ಟ್ – ಕಚೇರಿ ವ್ಯವಹಾರದಲ್ಲಿ ಇಂದು ತೊಡಗಿಕೊಳ್ಳಬೇಡಿ. ಇಂದು ಎಲ್ಲಾ ಕಾರ್ಯದಲ್ಲೂ ಏಕಾಗ್ರತೆಯ ಕೊರತೆ ಇರುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...