alex Certify ಈ ರಾಶಿಯವರಿಗಿದೆ ಇಂದು ಗೃಹಸ್ಥ ಜೀವನದಲ್ಲಿ ಶಾಂತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಗೃಹಸ್ಥ ಜೀವನದಲ್ಲಿ ಶಾಂತಿ

ಮೇಷ ರಾಶಿ

ಇಂದು ನಿಮಗೆ ಅನುಕೂಲಕರ ದಿನ. ಆರೋಗ್ಯ ಉತ್ತಮವಾಗಿರುತ್ತದೆ. ಅತ್ಯಂತ ಉತ್ಸಾಹದಿಂದಿರುತ್ತೀರಿ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ. ಕುಟುಂಬಸ್ಥರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ.

ವೃಷಭ ರಾಶಿ

ಇಂದು ಅತ್ಯಂತ ಸಮಾಧಾನದಿಂದಿರಿ. ಮನಸ್ಸು ಚಿಂತಾಗ್ರಸ್ಥವಾಗುವ ಸಾಧ್ಯತೆ ಇದೆ. ಆರೋಗ್ಯ ಹದಗೆಡಬಹುದು. ಕಣ್ಣು ನೋವು ಕಾಣಿಸಿಕೊಳ್ಳಬಹುದು. ಶ್ರೀಘ್ರವೇ ಸಮಸ್ಯೆಗಳೆಲ್ಲ ನಿವಾರಣೆಯಾಗಲಿದೆ.

ಮಿಥುನ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಅವಿವಾಹಿತರಿಗೆ ಯೋಗ್ಯ ಸಂಗಾತಿ ದೊರಕಬಹುದು. ಧನ ಪ್ರಾಪ್ತಿಗೆ ಶುಭ ದಿನ. ಮಿತ್ರರಿಂದ ಲಾಭವಾಗಬಹದು.

ಕರ್ಕ ರಾಶಿ

ಇಂದು ನಿಮಗೆ ಆರಾಮದಾಯಕ ದಿನ. ಎಲ್ಲಾ ಕಾರ್ಯಗಳು ಸರಳವಾಗಿ ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಪ್ರಸನ್ನರಾಗಿರುತ್ತಾರೆ.

ಸಿಂಹ ರಾಶಿ

ಇಂದು ನಿಮಗೆ ಮಿಶ್ರಫಲವಿದೆ. ನಿಗದಿತ ಕೆಲಸಗಳೆಡೆಗೆ ಗಮನಹರಿಸಿ. ಇಂದು ಹೆಚ್ಚು ಕೋಪಗೊಳ್ಳುತ್ತೀರಿ. ಇದರಿಂದ ಮನಸ್ಸು ಅಶಾಂತಿಯಿಂದ ತುಂಬಿರುತ್ತದೆ.

ಕನ್ಯಾ ರಾಶಿ

ಇವತ್ತು ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ಆರೋಗ್ಯದ ಬಗ್ಗೆ ಗಮನವಹಿಸಿ. ಹೊರಗಿನ ಊಟ ತಿಂಡಿ ಬೇಡ. ಕೋಪ ಹೆಚ್ಚಾಗಲಿದೆ. ಮಾತಿನ ಮೇಲೆ ನಿಯಂತ್ರಣವಿರಲಿ.

ತುಲಾ ರಾಶಿ

ಇವತ್ತಿನ ದಿನ ಮೋಜು ಮಸ್ತಿಯಲ್ಲಿ ಕಳೆಯಲಿದೆ. ಹೊಸ ವಸ್ತ್ರ ಖರೀದಿ ಮಾಡಲಿದ್ದೀರಿ. ದೇಹ ಮತ್ತು ಮನಸ್ಸಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ.

ವೃಶ್ಚಿಕ ರಾಶಿ

ಗೃಹಸ್ಥ ಜೀವನದಲ್ಲಿ ಶಾಂತಿ ಮತ್ತು ಆನಂದ ತುಂಬಿರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಅನಾರೋಗ್ಯಪೀಡಿತರ ದೇಹಸ್ಥಿತಿ ಸುಧಾರಿಸಲಿದೆ. ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ.

ಧನು ರಾಶಿ

ಯಾತ್ರೆ ಅಥವಾ ಪ್ರವಾಸವನ್ನು ಮುಂದೂಡಿ. ಉದರ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಸಾಹಿತ್ಯ ಮತ್ತು ಕಲೆಯ ಬಗ್ಗೆ ಆಸಕ್ತಿ ಮೂಡಲಿದೆ.

ಮಕರ ರಾಶಿ

ಇವತ್ತು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕೊಂಚ ಚಿಂತಾನಜಕವಾಗಿರುತ್ತದೆ. ಮನೆಯಲ್ಲಿನ ಜಗಳದ ವಾತಾವರಣದಿಂದ ಮನಸ್ಸಿನಲ್ಲಿ ಖಿನ್ನತೆ ಆವರಿಸುತ್ತದೆ. ಅತ್ಯಂತ ಶಾಂತವಾಗಿರಲು ಪ್ರಯತ್ನಿಸಿ.

ಕುಂಭ ರಾಶಿ

ಇಂದು ನಿಮ್ಮ ಮನಸ್ಸು ಅತ್ಯಂತ ಹಗುರವಾಗಲಿದೆ. ಮನಸ್ಸಿನಲ್ಲಿ ಮೂಡಿದ ಚಿಂತೆಯೆಲ್ಲ ಪರಿಹಾರವಾಗುತ್ತದೆ. ಉತ್ಸಾಹ ಕೂಡ ಹೆಚ್ಚುವ ಸಾಧ್ಯತೆ ಇದೆ.

ಮೀನ ರಾಶಿ

ಖರ್ಚು ಮತ್ತು ಕೋಪ ಎರಡನ್ನೂ ನಿಯಂತ್ರಿಸಿಕೊಳ್ಳಿ. ಯಾರೊಂದಿಗೂ ಜಗಳವಾಡಬೇಡಿ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಶಾಂತವಾಗಿದ್ದರೆ ಪರಿಸ್ಥಿತಿ ಸುಧಾರಿಸಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...