alex Certify ಈ ರಾಶಿಯವರಿಗಿದೆ ಇಂದು ಉತ್ತಮ ಆರೋಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಉತ್ತಮ ಆರೋಗ್ಯ

ಮೇಷ ರಾಶಿ

ಇಂದು ನೀವು ಸಾಂಸಾರಿಕ ವಿಷಯವನ್ನು ಮರೆತು ಆಧ್ಯಾತ್ಮದೆಡೆಗೆ ಗಮನ ಹರಿಸುತ್ತೀರಾ. ಗಹನವಾದ ಚಿಂತನಾ ಶಕ್ತಿ ನಿಮ್ಮ ಚಿಂತೆಯನ್ನು ದೂರ ಮಾಡುತ್ತದೆ. ಮಾತಿನ ಮೇಲೆ ಹಿಡಿತವಿದ್ದರೆ ಯಾವುದೇ ಅನರ್ಥವಾಗುವುದಿಲ್ಲ. ಹೊಸ ಕಾರ್ಯವನ್ನು ಆರಂಭಿಸಬೇಡಿ.

ವೃಷಭ ರಾಶಿ

ತನು-ಮನ ಪ್ರಸನ್ನವಾಗಿರಲಿದೆ. ಸಾರ್ವಜನಿಕ ಜೀವನದಲ್ಲಿ ಯಶಸ್ಸು ಮತ್ತು ಕೀರ್ತಿ ಲಭಿಸುತ್ತದೆ. ಉದ್ಯಮಿಗಳಿಗೂ ವಹಿವಾಟು ವಿಸ್ತರಿಸುವ ಅವಕಾಶವಿದೆ. ಪಾಲುದಾರಿಕೆಯಿಂದ ಲಾಭವಿದೆ. ಆಕಸ್ಮಿಕ ಧನಲಾಭ ಮತ್ತು ವಿದೇಶದಿಂದ ಸಮಾಚಾರ ಬರಲಿದೆ.

ಮಿಥುನ ರಾಶಿ

ಆರೋಗ್ಯ ಉತ್ತಮವಾಗಿರುತ್ತದೆ. ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಮಾತುಕತೆ ಸಂದರ್ಭದಲ್ಲಿ ಕೋಪದ ಮೇಲೆ ಹಿಡಿತವಿರಲಿ. ಮಾತಿನ ಮೇಲೆ ಸಂಯಮವಿರಲಿ. ಪ್ರತಿಸ್ಪರ್ಧಿಗಳೆದುರು ಜಯ ಸಿಗಲಿದೆ. ಹಣಕಾಸಿನ ಯೋಗವಿದೆ.

ಕರ್ಕ ರಾಶಿ

ಆಕಸ್ಮಿಕವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ. ಪ್ರೇಮಿಗಳ ಮಧ್ಯೆ ವಾದ-ವಿವಾದ ನಡೆಯುವ ಸಾಧ್ಯತೆ ಇರುತ್ತದೆ. ಹೊಸ ಕಾರ್ಯದ ಆರಂಭಕ್ಕೆ ಶುಭ ಸಮಯವಲ್ಲ. ಪ್ರವಾಸ ಕೈಗೊಳ್ಳಬೇಡಿ.

ಸಿಂಹ ರಾಶಿ

ಜಮೀನು, ಮನೆ, ವಾಹನ ಖರೀದಿ ಮತ್ತು ಅದಕ್ಕೆ ಸಂಬಂಧಪಟ್ಟ ವಹಿವಾಟು ನಡೆಸಲು ಸೂಕ್ತ ಸಮಯವಲ್ಲ. ನಕಾರಾತ್ಮಕ ಯೋಚನೆಗಳಿಂದ ಹತಾಶೆ ನಿಮ್ಮನ್ನು ಆವರಿಸುತ್ತದೆ. ಜಲಾಶಯ ಭೇಟಿ ಅಪಾಯಕಾರಿ. ಕಚೇರಿಯಲ್ಲಿ ಸ್ತ್ರೀಯರಿಂದ ದೂರವಿರಿ.

ಕನ್ಯಾ ರಾಶಿ

ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ. ನಿಗೂಢ ಮತ್ತು ರಹಸ್ಯಮಯ ವಿಚಾರಗಳ ಕಡೆಗೆ ಆಕರ್ಷಿತರಾಗುತ್ತೀರಿ. ವಿರೋಧಿಗಳು ಮತ್ತು ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಲಿದ್ದೀರಿ.

ತುಲಾ ರಾಶಿ

ಅನಾವಶ್ಯಕವಾಗಿ ಹಣ ಖರ್ಚಾಗಲಿದೆ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಅನೈತಿಕ ಪ್ರವೃತ್ತಿಯ ಕಡೆಗೆ ಆಕರ್ಷಿತರಾಗಬೇಡಿ. ವಿದ್ಯಾರ್ಥಿಗಳ ಓದಿಗೆ ವಿಘ್ನ ಎದುರಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಸ್ನೇಹಿತರು ಅಥವಾ ಸಂಬಂಧಿಕರಿಂದ ಉಪಹಾರ ದೊರೆಯಲಿದೆ. ಪ್ರಿಯ ವ್ಯಕ್ತಿಗಳ ಭೇಟಿ ಸಫಲವಾಗಲಿದೆ. ಧನಲಾಭ ಮತ್ತು ಪ್ರವಾಸದ ಯೋಗವಿದೆ. ದಾಂಪತ್ಯ ಜೀವನದಲ್ಲಿ ಪ್ರಸನ್ನತೆಯ ಅನುಭವವಾಗಲಿದೆ.

ಧನು ರಾಶಿ

ನಿಮ್ಮ ಮಾತು ಮತ್ತು ವ್ಯವಹಾರ ಜಗಳಕ್ಕೆ ಕಾರಣವಾಗಬಹುದು. ದುರ್ಘಟನೆ ನಡೆಯದಂತೆ ಎಚ್ಚರ ವಹಿಸಿ. ಅನಾರೋಗ್ಯದ ಹಿನ್ನೆಲೆಯಲ್ಲಿ ಹಣ ಖರ್ಚಾಗಲಿದೆ. ಕೋರ್ಟ್ ಕೆಲಸಗಳಲ್ಲಿ ಜಾಗರೂಕರಾಗಿರಿ. ವ್ಯರ್ಥ ಕೆಲಸಕ್ಕೆ ನಿಮ್ಮ ಶಕ್ತಿ ವ್ಯಯವಾಗಲಿದೆ.

ಮಕರ ರಾಶಿ

ವಿವಾಹಿತರಿಗೆ ವೈವಾಹಿಕ ಜೀವನದಲ್ಲಿ ಎದುರಾದ ಸಮಸ್ಯೆಗಳು ಪರಿಹಾರವಾಗಲಿವೆ. ಉದ್ಯಮಿಗಳು ಮತ್ತು ಉದ್ಯೋಗಿಗಳ ಆದಾಯದಲ್ಲಿ ವೃದ್ಧಿಯಾಗಲಿದೆ. ಗೃಹಸ್ಥ ಜೀವನದಲ್ಲಿ ಆನಂದ ಸಿಗಲಿದೆ. ಹೊಸ ವಸ್ತು ಖರೀದಿ ಮಾಡಲಿದ್ದೀರಿ.

ಕುಂಭ ರಾಶಿ

ಸರ್ಕಾರಿ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತವೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮಾನಸಿಕವಾಗಿ ಸ್ಪೂರ್ತಿಯಿಂದ ಇರುತ್ತೀರಿ. ಪದೋನ್ನತಿ ಮತ್ತು ಧನ ಪ್ರಾಪ್ತಿ ಯೋಗವಿದೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.

ಮೀನ ರಾಶಿ

ದೈಹಿಕವಾಗಿ ಆಯಾಸದ ಅನುಭವವಾಗಲಿದೆ. ಕೆಲಸ ಅಪೂರ್ಣವಾಗಿದ್ದರಿಂದ ಹತಾಶೆ ಉಂಟಾಗಬಹುದು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆಗೆ ಎಚ್ಚರಿಕೆಯಿಂದ ಕೆಲಸ ಮಾಡಿ. ವ್ಯರ್ಥವಾಗಿ ಹಣ ಖರ್ಚಾಗಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...