alex Certify ಈ ರಾಶಿಯವರಿಗಿದೆ ಇಂದು ʼಆಭರಣʼ ಖರೀದಿ ಯೋಗ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ʼಆಭರಣʼ ಖರೀದಿ ಯೋಗ….!

ಮೇಷ : ವೃತ್ತಿ ರಂಗದಲ್ಲಿ ನಿಮಗೆ ಉತ್ತಮ ಅವಕಾಶಗಳು ದೊರಕಲಿದೆ. ಹೊಸದಾಗಿ ಶುರು ಮಾಡಿದ ಉದ್ಯಮವು ನಿಧಾನವಾಗಿ ಪ್ರಗತಿಯನ್ನು ತೋರಲಿದೆ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಗಳಿಗೆ ಬೆನ್ನೆಲುಬಾಗಲಿದ್ದಾರೆ. ಆರೋಗ್ಯ ಸ್ಥಿತಿ ಸುಧಾರಿಸಲಿದೆ.

ವೃಷಭ : ನಿಮ್ಮ ವೈವಾಹಿಕ ಜೀವನವು ಸಂತಸಮಯವಾಗಿ ಇರಲಿದೆ. ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವಾಗಲಿದೆ. ಸೋಮಾರಿತನದಿಂದ ಕೆಲಸದಲ್ಲಿ ಪ್ರಗತಿಯನ್ನು ಕಾಣಲಾರಿರಿ. ವಿದ್ಯಾರ್ಥಿಗಳು ಹೊಸ ಸಾಧನೆಯನ್ನು ಮಾಡಿ ತೋರಿಸಲಿದ್ದಾರೆ.

ಮಿಥುನ : ಸಮಾಜದಲ್ಲಿ ನೀವು ಉತ್ತಮ ಮನ್ನಣೆಯನ್ನು ಗಳಿಸಲಿದ್ದೀರಿ. ವೈವಾಹಿಕ ಜೀವನವು ಸಂತಸಮಯವಾಗಿ ಇರಲಿದೆ. ವಿದ್ಯಾರ್ಥಿಗಳ ಕನಸು ಸಾಕಾರವಾಗಲಿದೆ. ಉದ್ಯೋಗಾವಕಾಶಕ್ಕಾಗಿ ಅರಸುತ್ತಿರುವವರು ಶುಭ ಸುದ್ದಿಯನ್ನು ಕೇಳಲಿದ್ದಾರೆ.

ಕಟಕ : ವಾಹನ ಬಹಳ ಎಚ್ಚರಿಕೆಯಿಂದ ಚಲಾಯಿಸಿ. ಇಲ್ಲವಾದಲ್ಲಿ ಅನಾಹುತವೇ ನಡೆಯುವ ಸಾದ್ಯತೆ ಇದೆ. ಉದ್ಯಮದಲ್ಲಿ ನೀವೆಂದುಕೊಂಡ ಗುರಿಯನ್ನು ಖಂಡಿತವಾಗಿ ಸಾಧಿಸಲಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವೈದ್ಯಕೀಯ ವೃತ್ತಿಯವರಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ.

ಸಿಂಹ : ಮಕ್ಕಳ ಮಂದಗತಿಯ ಅಭ್ಯಾಸವು ನಿಮ್ಮ ಆತಂಕಕ್ಕೆ ಕಾರಣವಾಗಲಿದೆ. ಮನೆಯಲ್ಲಿ ಪಿಠೋಪಕರಣಗಳ ಖರೀದಿಗಾಗಿ ಹಣ ವ್ಯಯ ಮಾಡಲಿದ್ದೀರಿ. ದಾಯಾದಿಗಳ ನಡುವೆ ಕಲಹ ಏರ್ಪಡಲಿದೆ. ಪೋಷಕರೊಂದಿಗೆ ಅನಗತ್ಯ ವಾದವುಂಟಾಗುವ ಸಾಧ್ಯತೆ ಇದೆ.

ಕನ್ಯಾ : ಸಂಗಾತಿಯ ಮಾತನ್ನು ಕೇಳಿ ಪೋಷಕರೊಂದಿಗೆ ವಾದಕ್ಕೆ ಇಳಿಯಲಿದ್ದೀರಿ. ಇದರಿಂದ ಪೋಷಕರಿಗೆ ನೋವುಂಟಾಗಲಿದೆ. ಕಲಾವಿದರಿಗೆ ಇಂದು ಉತ್ತಮ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳಿಗೆ ಪ್ರಗತಿ ಇದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ವೈಷಮ್ಯ ಮೂಡಲಿದೆ.

ತುಲಾ : ಹೊಸ ವಾಹನ ಖರೀದಿ ಮಾಡಬೇಕು ಎಂಬ ನಿಮ್ಮ ಕನಸು ಶೀಘ್ರದಲ್ಲೇ ಈಡೇರಲಿದೆ. ಯಾವುದೇ ಕೆಲಸ ಮಾಡುವ ಮುನ್ನ ಹಿರಿಯರ ಸಲಹೆ ತಪ್ಪದೇ ಪಡೆದುಕೊಳ್ಳಿ. ಉದ್ಯೋಗ ಬದಲಾವಣೆಗೆ ಇದು ಸೂಕ್ತವಾದ ಸಮಯವಲ್ಲ.

ವೃಶ್ಚಿಕ : ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುವವರಿಗೆ ಇದು ಶುಭ ದಿನವಾಗಿದೆ. ಹೊಸ ಕಚೇರಿ ವಾತಾವರಣ ಕ್ರಮೇಣವಾಗಿ ಹೊಂದಿಕೊಳ್ಳುತ್ತಿದ್ದೀರಿ. ಸಹೋದ್ಯೋಗಿಗಳಿಂದ ಕೆಲಸಗಳನ್ನು ಕಲಿತುಕೊಳ್ಳಲಿದ್ದೀರಿ. ಜೀವನ ಸಂಗಾತಿಯೊಂದಿಗೆ ಕಲಹ ಏರ್ಪಡಬಹುದು.

ಧನು : ಕಚೇರಿಯಲ್ಲಿ ಹೊಸ ಜವಾಬ್ದಾರಿಯು ನಿಮ್ಮ ಹೆಗಲೇರಲಿದೆ. ಇದರಿಂದ ನೀವು ಒತ್ತಡ ಅನುಭವಿಸಲಿದ್ದೀರಿ. ಸರ್ಕಾರಿ ಕೆಲಸಗಳು ಶೀಘ್ರದಲ್ಲೇ ಆಗಲಿದೆ. ಕೃಷಿಕರಿಗೆ ಉತ್ತಮ ಲಾಭವಿದೆ. ವಾಹನ ಖರೀದಿಗೆ ಇದು ಶುಭದಿನವಲ್ಲ.

ಮಕರ : ಮನೆ ನಿರ್ಮಾಣ ಮಾಡುವ ಬಗ್ಗೆ ಹಿರಿಯರ ಜೊತೆ ಚರ್ಚೆ ನಡೆಸಲಿದ್ದೀರಿ. ತಂದೆ-ತಾಯಿಯಿಂದ ನಿಮ್ಮೆಲ್ಲ ಕೆಲಸಗಳಿಗೆ ಬೆಂಬಲ ಸಿಗಲಿದೆ. ತಾಯಿಯ ಅನಾರೋಗ್ಯ ನಿಮ್ಮನ್ನು ಇನ್ನಷ್ಟು ಕಾಡಲಿದೆ. ಲಾಭವಿಲ್ಲದ ವಸ್ತುಗಳಿಗೆ ಅನಗತ್ಯ ಖರ್ಚು ಮಾಡಬೇಡಿ.

ಕುಂಭ : ಮನೆಯಲ್ಲಿ ಸ್ತ್ರೀಯರು ಆಭರಣ ಖರೀದಿ ಮಾಡಲಿದ್ದಾರೆ. ಆಸ್ತಿ ಖರೀದಿಗೆ ಯೋಗ್ಯ ದಿನವಲ್ಲ. ದೂಡ್ಡ ಹೂಡಿಕೆ ಬಗ್ಗೆ ಯೋಚನೆ ಮಾಡಲಿದ್ದೀರಿ. ದರ್ಜಿಗಳಿಗೆ, ಅಕ್ಕಸಾಲಿಗರಿಗೆ ಇದು ಶುಭ ದಿನವಾಗಿದೆ. ಅಲಂಕಾರದ ವಸ್ತುಗಳನ್ನು ಖರೀದಿ ಮಾಡುತ್ತೀರಿ.

ಮೀನ : ಒಂದು ಸಣ್ಣ ತಪ್ಪಿನಿಂದಾಗಿ ಮುಖ್ಯವಾದ ಅವಕಾಶವೊಂದು ನಿಮ್ಮ ಕೈತಪ್ಪಲಿದೆ. ಮಾನಸಿಕ ಒತ್ತಡಗಳಿಗೆ ಸ್ನೇಹಿತರು ಹೆಗಲು ನೀಡಲಿದ್ದಾರೆ. ರಾಜಕಾರಣಿಗಳಿಗೆ ಇದು ಒತ್ತಡದ ದಿನವಾಗಿದೆ. ಆರೋಗ್ಯದ ಕಡೆ ಜಾಗೃತಿ ಇರಲಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...