alex Certify ಈ ರಾಶಿಯವರಿಗಿದೆ ಇಂದು ಆಕಸ್ಮಿಕ ಧನಲಾಭದ ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಆಕಸ್ಮಿಕ ಧನಲಾಭದ ಯೋಗ

ಮೇಷ ರಾಶಿ

ಇಂದು ಸಾಮಾಜಿಕ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ದೊರೆಯಲಿದೆ. ಕುಟುಂಬ ಮತ್ತು ದಾಂಪತ್ಯ ಬದುಕಿನಲ್ಲಿ ಸುಖ-ಸಂತೋಷ ತುಂಬಿರುತ್ತದೆ. ರೊಮ್ಯಾನ್ಸ್ ನ ಪರಾಕಾಷ್ಠತೆಯ ಅನುಭವವಾಗಲಿದೆ.

ವೃಷಭ ರಾಶಿ

ಇವತ್ತು ನಿಮ್ಮ ಮಾತು ಮತ್ತು ವ್ಯವಹಾರದ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ತಪ್ಪು ಗ್ರಹಿಕೆ ಉಂಟಾಗಲಿದೆ. ಮೋಜು-ಮಸ್ತಿ ಮತ್ತು ಮನರಂಜನೆಗಾಗಿ ಹಣ ಖರ್ಚಾಗಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಮಿಥುನ ರಾಶಿ

ಇವತ್ತು ನಿಮಗೆ ಅತ್ಯಂತ ಲಾಭದಾಯಕ ದಿನ. ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಪತ್ನಿಗಾಗಿ ಹಣ ಖರ್ಚಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಬಹುದು.

ಕರ್ಕ ರಾಶಿ

ಇಂದು ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಅಭಾವವಿರುತ್ತದೆ. ಎದೆನೋವು ಅಥವಾ ಇತರ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮನೆಯ ಸದಸ್ಯರ ಜೊತೆಗೆ ಉಗ್ರ ವಾದ-ವಿವಾದ ನಡೆಯಲಿದೆ.

ಸಿಂಹ ರಾಶಿ

ಇವತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ದಿನವಿಡೀ ಪ್ರಫುಲ್ಲತೆಯಿಂದ ಇರಲಿದ್ದೀರಿ. ಸಹೋದರರೊಂದಿಗೆ ಉತ್ತಮ ಬಾಂಧವ್ಯವಿರಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಮನಸ್ಸು ಗೊಂದಲಮಯವಾಗಿರುತ್ತದೆ. ನಕಾರಾತ್ಮಕ ವಿಚಾರ ನಿಮ್ಮ ಅಸ್ವಸ್ಥತೆಯನ್ನು ಹೆಚ್ಚಿಸಲಿದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ.

ತುಲಾ ರಾಶಿ

ಈ ಸಮಯ ನಿಮಗೆ ಅನುಕೂಲಕರವಾಗಿದೆ. ಆರ್ಥಿಕ ಯೋಜನೆಗಳು ಯಶಸ್ವಿಯಾಗಲಿವೆ. ನಿಮ್ಮ ಕಲಾತ್ಮಕ ಮತ್ತು ಸೃಜನಾತ್ಮಕ ಶಕ್ತಿ ವೃದ್ಧಿಸಲಿದೆ.

ವೃಶ್ಚಿಕ ರಾಶಿ

ವಿದೇಶದಲ್ಲಿರುವ ನಿಮ್ಮ ಸ್ನೇಹಿತರಿಂದ ಶುಭ ಸಮಾಚಾರ ಬರಲಿದೆ. ಅವರಿಂದ ನಿಮಗೆ ಲಾಭವೂ ಆಗಬಹುದು. ಕಚೇರಿಯಲ್ಲಿ ಸ್ತ್ರೀಯರಿಂದ ಲಾಭವಾಗುವ ಸಾಧ್ಯತೆ ಇದೆ.

ಧನು ರಾಶಿ

ಪ್ರೇಮದ ಸುಖಾನುಭವವಾಗಲಿದೆ. ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ಗೃಹಸ್ಥ ಜೀವನದಲ್ಲಿ ಸಂತೋಷ ತುಂಬಿರುತ್ತದೆ.

ಮಕರ ರಾಶಿ

ವೃತ್ತಿ ಬದುಕಿನಲ್ಲಿ ಹಣ, ಗೌರವ ಮತ್ತು ಪ್ರತಿಷ್ಠೆ ವೃದ್ಧಿಸಲಿದೆ. ಉದ್ಯೋಗದಲ್ಲಿ ನಿಮ್ಮ ಪರಿಶ್ರಮಕ್ಕೆ ಫಲ ಸಿಗುತ್ತದೆ. ಕುಟುಂಬದಲ್ಲೂ ಸುಖ- ಶಾಂತಿ ತುಂಬಿರುತ್ತದೆ.

ಕುಂಭ ರಾಶಿ

ಇಂದು ಅಸ್ವಸ್ಥರಾಗಿರುತ್ತೀರಾ. ಆದ್ರೆ ಮಾನಸಿಕವಾಗಿ ನೆಮ್ಮದಿ ಇರಲಿದೆ. ಕೆಲಸದಲ್ಲಿ ಉತ್ಸಾಹ ಕಳೆದುಕೊಳ್ಳಲಿದ್ದೀರಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ದೂರವಿರಿ.

ಮೀನ ರಾಶಿ

ಆಕಸ್ಮಿಕ ಧನಲಾಭ ಯೋಗವಿದೆ. ವ್ಯಾಪಾರಿ ವರ್ಗದಲ್ಲಿ ಹಣಕಾಸು ವಹಿವಾಟು ನಡೆಯಲಿದೆ. ದೈಹಿಕ ಮತ್ತು ಮಾನಸಿಕವಾಗಿ ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ಖರ್ಚು ಹೆಚ್ಚಾಗಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...