alex Certify ಈ ರಾಶಿಯವರಿಗಿಂದು ಸಂಗಾತಿಯಿಂದ ಒಲಿದು ಬರಲಿದೆ ಅದೃಷ್ಟ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿಂದು ಸಂಗಾತಿಯಿಂದ ಒಲಿದು ಬರಲಿದೆ ಅದೃಷ್ಟ…..!

ಮೇಷ : ನಿರಂತರ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಕುಟುಂಬದಲ್ಲಿನ ಕಿರಿಕಿರಿಗೆ ಪರಿಹಾರ ಸಿಗಲಿದೆ. ಪೋಷಕರಿಂದ ಮಾರ್ಗದರ್ಶನ ಪಡೆದು ಉದ್ಯಮದಲ್ಲಿ ಬದಲಾವಣೆ ಮಾಡಲಿದ್ದೀರಿ.

ವೃಷಭ : ಸಹೋದರಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಹೆಗಲು ನೀಡಲಿದ್ದಾರೆ. ವಾಹನ ಸವಾರಿ ಮಾಡುವಾಗ ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.

ಮಿಥುನ : ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವೃತ್ತಿ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಪದೇ ಪದೇ ಕೆಟ್ಟ ಕನಸು ಬೀಳುವುದರಿಂದ ಬೇಸತ್ತಿದ್ದೀರಾ. ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿ. ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಪಡೆಯುವಿರಿ.

ಕಟಕ : ಕಚೇರಿಯಲ್ಲಿ ನಿಮ್ಮ ಕೆಲಸವು ಮೇಲಾಧಿಕಾರಿಗಳಿಗೆ ಮೆಚ್ಚುಗೆ ಎನಿಸಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಹೊಸ ಉದ್ಯಮಗಳಿಗೆ ಹೂಡಿಕೆ ಮಾಡಲು ಬಯಸುವವರಿಗೆ ಇದು ಶುಭ ದಿನವಾಗಿದೆ.

ಸಿಂಹ : ಆಧ್ಮಾತ್ಮಿಕ ಕ್ಷೇತ್ರದತ್ತ ಒಲವು ತೋರಲಿದ್ದೀರಿ. ಸಂಗಾತಿಯು ಇಂದು ಅದೃಷ್ಟದಿಂದ ಧನಲಾಭ ಪಡೆಯಲಿದ್ದಾರೆ. ಉದ್ಯಮದಲ್ಲಿ ಸಂಗಾತಿ ಸಾಧಿಸುತ್ತಿರುವ ಯಶಸ್ಸು ನಿಮಗೆ ಸಂತೋಷ ನೀಡಲಿದೆ. ಪೋಷಕರ ಆರೋಗ್ಯದ ಬಗ್ಗೆ ಆದಷ್ಟು ಜಾಗ್ರತೆ ಇರಲಿ.

ಕನ್ಯಾ : ನಿಮ್ಮ ವ್ಯಾಪಾರ- ವ್ಯವಹಾರಗಳ ವಿಚಾರದಲ್ಲಿ ತಂದೆಯು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆರ್ಥಿಕ ವಿಚಾರವಾಗಿ ಸ್ನೇಹಿತರೊಂದಿಗೆ ಉಂಟಾಗಿದ್ದ ಮುನಿಸು ಕ್ರಮೇಣವಾಗಿ ಸುಧಾರಿಸಲಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಅನಿವಾರ್ಯ.

ತುಲಾ : ಪೂರ್ವಜರ ಆಸ್ತಿಯಿಂದ ನಿಮಗೆ ಲಾಭ ದೊರಕಿದೆ. ನಿಮ್ಮ ಜೀವನ ಸಂಗಾತಿಯಿಂದ ಧನಲಾಭ ಹೊಂದಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಸ್ಥಿರತೆಯನ್ನು ಕಾಣಲಿದ್ದೀರಿ.

ವೃಶ್ಚಿಕ : ಕಿರಿಯ ಸೋದರನ ಆರ್ಥಿಕ ಸಂಕಷ್ಟಕ್ಕೆ ನೀವು ಹೆಗಲಾಗಲಿದ್ದೀರಿ. ಇದು ನಿಮ್ಮ ಪೋಷಕರಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಿಸಲಿದೆ. ಮನೆಗೆ ಪೀಠೋಪಕರಣಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ವೈವಾಹಿಕ ಸಂಬಂಧದ ಬಗ್ಗೆ ಪೋಷಕರು ಚರ್ಚೆ ನಡೆಸಲಿದ್ದಾರೆ.

ಧನು: ಪೂರ್ವಜರ ಆಸ್ತಿಯಿಂದ ನಿಮಗೆ ಲಾಭ ದೊರಕಿದೆ. ನಿಮ್ಮ  ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಸ್ಥಿರತೆಯನ್ನು ಕಾಣಲಿದ್ದೀರಿ. ಇಂದು ನೀವು ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಲಿದ್ದೀರಿ.

ಮಕರ : ವ್ಯಾಪಾರ- ವ್ಯವಹಾರದಲ್ಲಿ ನೀವು ಲಾಭವನ್ನು ಹೊಂದಲಿದ್ದೀರಿ. ಕಚೇರಿಯಲ್ಲಿ ಭಯಪಟ್ಟು ಕೆಲಸ ಮಾಡುವಂತಹ ಸನ್ನಿವೇಶ ಎದುರಾಗಲಿದೆ. ಹತ್ತಿರದ ಸಂಬಂಧಿಗಳ ಭೇಟಿ ಮನಸ್ಸಿಗೆ ಖುಷಿ ಎನಿಸಲಿದೆ. ವಿದ್ಯಾರ್ಥಿಗಳಿಗೆ ದೈವಾನುಗ್ರಹ ಇರಲಿದೆ.

ಕುಂಭ : ಜಾಗದ ವಿಚಾರಕ್ಕೆ ನೆರೆಮನೆಯವರ ಜೊತೆ ಗಲಾಟೆ ನಡೆಯಬಹುದು. ಯಾವುದೇ ಸಂದರ್ಭದಲ್ಲಿಯೂ ಮಾತಿನ ಮೇಲೆ ಹಿಡಿತವಿರಲಿ. ಜೀವನ ಸಂಗಾತಿಯಿಂದ ಧನಲಾಭ ಹೊಂದಲಿದ್ದೀರಿ. ಕುಲದೇವರನ್ನು ಪ್ರಾರ್ಥಿಸಿ.

ಮೀನ : ಪೂರ್ವಜರ ಆಸ್ತಿಯಿಂದ ನಿಮಗೆ ಲಾಭ ದೊರಕಿದೆ. ನಿಮ್ಮ ಜೀವನ ಸಂಗಾತಿಯಿಂದ ಧನಲಾಭ ಹೊಂದಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಸ್ಥಿರತೆಯನ್ನು ಕಾಣಲಿದ್ದೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...