alex Certify ಈ ರಾಶಿಯಲ್ಲಿ ಜನಿಸಿದವರಿಗೆ ಕಾದಿದೆ ಅನಿರೀಕ್ಷಿತ ಧನಲಾಭ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯಲ್ಲಿ ಜನಿಸಿದವರಿಗೆ ಕಾದಿದೆ ಅನಿರೀಕ್ಷಿತ ಧನಲಾಭ..!

ಮೇಷ : ಹಳೆಯ ಸಾಲಗಳು ತೀರುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ನೀಗಲಿದೆ. ನಿಮ್ಮ ಪ್ರೇಮ ಪ್ರಕರಣವನ್ನು ಎಲ್ಲರ ಎದುರು ಸಾರಬೇಡಿ. ಮುಂದೆ ಇದು ನಿಮಗೆ ಮಾರಕ ಎನಿಸಲಿದೆ. ಸಂಗಾತಿಯು ನಿಮ್ಮೆಲ್ಲ ಕೆಲಸಗಳಿಗೆ ಸಾಥ್​ ನೀಡಲಿದ್ದಾರೆ. ಉದಾರ ಮನೋಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ.

ವೃಷಭ : ಇಂದು ಸಹೋದ್ಯೋಗಿಗಳ ಜೊತೆ ಮೋಜು ಮಸ್ತಿ ಮಾಡಲಿದ್ದೀರಿ. ಇದರಿಂದ ನಿಮ್ಮ ಸಮಯ ವ್ಯರ್ಥವಾಗಲಿದೆ. ವೈವಾಹಿಕ ಜೀವನದಲ್ಲಿ ಅಡ್ಡಿ ಆತಂಕಗಳು ಎದುರಾಗಲಿವೆ. ಆರೋಗ್ಯ ಏರುಪೇರು ಆಗಲಿದೆ. ಮನೆ ಮದ್ದಿನ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು.

ಮಿಥುನ: ಇಂದು ನಿಮಗೆ ಆರೋಗ್ಯ ಕೈ ಕೊಡುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯು ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಇನ್ನಷ್ಟು ಕಾಡಲಿದೆ. ವಿದ್ಯಾರ್ಥಿಗಳಿಗೆ ಇಂದು ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ.

ಕಟಕ : ಇಂದು ನೀವು ಆಧ್ಯಾತ್ಮಿಕ ಜೀವನದತ್ತ ಹೆಚ್ಚು ವಾಲುವ ಸಾಧ್ಯತೆ ಇದೆ. ಮಕ್ಕಳು ನಿಮ್ಮ ಮುಂದೆ ಅನೇಕ ಬೇಡಿಕೆಗಳನ್ನು ಇಡುವ ಸಾಧ್ಯತೆ ಇದೆ. ಆದಷ್ಟು ಹಣವನ್ನು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ರೂಢಿಸಿಕೊಳ್ಳಿ. ಇದರಿಂದ ಮುಂದಿನ ದಿನಗಳಲ್ಲಿ ನಿಮಗೇ ಲಾಭವಿದೆ.

ಸಿಂಹ : ನಿಮ್ಮ ವೈಯಕ್ತಿಕ ವಿಚಾರಗಳನ್ನು ತೀರಾ ಇನ್ನೊಬ್ಬರ ಎದುರು ಹೇಳಿಕೊಳ್ಳಬೇಡಿ. ಪ್ರವಾಸ ಕೈಗೊಳ್ಳುವುದರಿಂದ ನಿಮಗೆ ನಿರಾಳ ಎನಿಸಲಿದೆ. ಸಣ್ಣ ಸಣ್ಣ ವಿಷಯಕ್ಕೆ ಸಂಗಾತಿಯನ್ನು ಟೀಕೆ ಮಾಡಬೇಡಿ.

ಕನ್ಯಾ : ಕಚೇರಿಯಲ್ಲಿ ಯಾರನ್ನೋ ಮೆಚ್ಚಿಸಲು ಕೆಲಸ ಮಾಡಲು ಹೋಗಬೇಡಿ. ನಿಮ್ಮ ಬುದ್ಧಿ ಶಕ್ತಿಯಿಂದ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತ ಕೆಲಸಗಳನ್ನು ಮಾಡಿ. ಸಂಗಾತಿಯು ದೂರ ಇರುವುದರಿಂದ ಒಂಟಿತನ ನಿಮ್ಮನ್ನು ಇಂದು ತುಸು ಹೆಚ್ಚೇ ಕಾಡಲಿದೆ. ಮಕ್ಕಳ ಸಾಧನೆಯು ನಿಮಗೆ ದೊಡ್ಡ ಮಟ್ಟದ ಖುಷಿಯನ್ನು ತರಲಿದೆ.

ತುಲಾ : ಅತಿಯಾದ ಕೋಪ ಸಂಗಾತಿಯ ಜೊತೆ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡಲಿದೆ. ಹಣಕಾಸಿನ ಸಂಕಷ್ಟವು ತಪ್ಪಿದ್ದಲ್ಲ. ಖರ್ಚಿನ ವಿಚಾರದಲ್ಲಿ ಉದಾರ ಬುದ್ಧಿಯನ್ನು ಬಿಟ್ಟಲ್ಲಿ ನಿಮಗೇ ಒಳ್ಳೆಯದು. ಎಣ್ಣೆ ಪದಾರ್ಥಗಳ ಸೇವನೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ವೃಶ್ಚಿಕ : ಬಹಳ ದಿನಗಳಿಂದ ನೆನೆಗುದಿಗೆ ಬಿದ್ದ ಕಾರ್ಯವು ಇಂದು ಪೂರ್ಣಗೊಳ್ಳಲಿದೆ. ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ನಿಮ್ಮನ್ನು ತಲುಪಲಿದೆ. ಕಚೇರಿ ಕೆಲಸದ ನಿಮಿತ್ತ ಪ್ರವಾಸ ಕೈಗೊಳ್ಳುವಿರಿ. ಹಣದ ಕೊರತೆಯು ನಿಮ್ಮನ್ನು ಒತ್ತಡಕ್ಕೀಡು ಮಾಡಲಿದೆ.

ಧನು : ನಿಮ್ಮ ಸಂಗಾತಿಯು ಇಂದು ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆಯನ್ನೇ ಮಾಡಲಿದ್ದಾರೆ. ಇದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಲಿದೆ. ಕುಟುಂಬದ ಏಳ್ಗೆಗಾಗಿ ಶ್ರಮಿಸಲಿದ್ದೀರಿ. ಕಂಕಣ ಭಾಗ್ಯ ಕೂಡಿ ಬರಲಿದೆ.

ಮಕರ : ಇಂದು ನೀವು ರಾಜಕೀಯ ವ್ಯಕ್ತಿಗಳನ್ನು ಮೊದಲ ಬಾರಿಗೆ ಭೇಟಿ ಮಾಡೋದ್ರಿಂದ ನಿಮ್ಮಲ್ಲಿ ಕೊಂಚ ಅಳುಕಂತೂ ಇರಲಿದೆ. ತೀರಾ ಗಾಬರಿಯಾಗುವ ಅಗತ್ಯವಿಲ್ಲ. ನೀವು ಸಾಲ ನೀಡಿದ್ದರೆ ಆ ವ್ಯಕ್ತಿಯು ಇಂದು ಹಣವನ್ನು ಮರಳಿ ನೀಡಲಿದ್ದಾರೆ.

ಕುಂಭ : ತಂದೆಯ ಸಲಹೆಯು ನಿಮ್ಮನ್ನು ಬಹುದೊಡ್ಡ ನಷ್ಟದಿಂದ ಕಾಪಾಡಲಿದೆ. ಹೊಸ ಸ್ನೇಹಿತರು ಇಂದು ನಿಮ್ಮನ್ನು ಭೇಟಿಯಾಗಲಿದ್ದಾರೆ. ಸಂಗಾತಿಯು ನಿಮ್ಮ ಮೇಲೆ ಮುನಿಸು ಮಾಡಿಕೊಳ್ಳಬಹುದು. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ.

ಮೀನ : ಮಕ್ಕಳ ಶಿಕ್ಷಣದ ದೃಷ್ಟಿಯಿಂದ ದೊಡ್ಡ ಮೊತ್ತದ ಹಣವನ್ನು ಹೊಂದಿಸಬೇಕಾಗಿ ಬರುತ್ತದೆ. ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ. ಕುಟುಂಬದಲ್ಲಿ ಎಲ್ಲಾ ರೀತಿಯಿಂದಲೂ ನೆಮ್ಮದಿ ನೆಲಸಲಿದೆ. ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...