alex Certify ಈ ಬೀಜಗಳಲ್ಲಿದೆ ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬೀಜಗಳಲ್ಲಿದೆ ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶ

ಉತ್ತಮವಾದ ಆಹಾರವನ್ನು ಸೇವಿಸಿದರೆ ದೇಹವು ಆರೋಗ್ಯವಾಗಿರುತ್ತದೆ. ಆದರೆ ಕೆಲವರಿಗೆ ಆರೋಗ್ಯಕರವಾದ ಆಹಾರವನ್ನು ಸೇವಿಸಲು ಆಗುವುದಿಲ್ಲ.ಅಂತವರು ಈ ಬೀಜಗಳನ್ನು ಸೇವಿಸಿದರೆ ದೇಹಕ್ಕೆ ಉತ್ತಮ ಪೋಷಕಾಂಶ ದೊರೆಯುತ್ತದೆ.

*ಸೂರ್ಯಕಾಂತಿ ಬೀಜ : ಸೂರ್ಯಕಾಂತಿ ಬೀಜಗಳಲ್ಲಿ ಸಾಕಷ್ಟು ವಿಟಮಿನ್, ಖನಿಜಗಳು, ಕಂಡು ಬರುತ್ತದೆ. ಇದನ್ನು ಪ್ರತಿ ದಿನ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತದೆ. ಚರ್ಮದ ಸಮಸ್ಯೆಗಳು ದೂರವಾಗುತ್ತದೆ.

*ಹುರುಳಿ ಬೀಜಗಳು : ಹುರುಳಿ ಬೀಜಗಳಲ್ಲಿ ಅಧಿಕ ಪೋಷಕಾಂಶಗಳಿದ್ದು, ಇದು ಹಸಿವನ್ನು ತಣ್ಣಗಾಗಿಸುತ್ತದೆ. ಇದನ್ನು ಬೆಳಿಗ್ಗಿನ ತಿಂಡಿಗಳಿಗೆ ಬಳಸಿದರೆ ನಿಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ.

*ಎಳ್ಳು : ಪ್ರೋಟೀನ್, ಕ್ಯಾಲ್ಸಿಯಂ ನ್ನು ಒಳಗೊಂಡಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

*ಕುಂಬಳಕಾಯಿ ಬೀಜ : ಮೆಗ್ನಿಶಿಯಂ, ಫೈಬರ್, ವಿಟಮಿನ್ ಕೆ ಅಧಿಕವಾಗಿರುತ್ತದೆ. ಇದು ಮಧುಮೇಹ ಸಮಸ್ಯೆಯಿಂದ ನಿಮ್ಮನ್ನ ರಕ್ಷಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಸುತ್ತದೆ.

*ಕಲ್ಲಂಗಡಿ ಬೀಜ : ಒಮೆಗಾ 3 ಯನ್ನು ಹೊಂದಿರುತ್ತದೆ. ಹಾಗೇ ವಿಟಮಿನ್ ಎ, ಇ ಸಾಕಷ್ಟಿದೆ. ಇದನ್ನು ಸೇವಿಸಿದರೆ ಪ್ರೋಟೀನ್ ಕೊರತೆ ನಿವಾರಣೆಯಾಗುತ್ತದೆ.

*ಅಗಸೆ ಬೀಜ : ವಿಟಮಿನ್ ಬಿ, ಮೆಗ್ನೀಶಿಯಂ, ಕ್ಯಾಲ್ಸಿಯಂ, ತಾಮ್ರ, ಕಬ್ಬಿಣ, ಸತು, ಪೊಟ್ಯಾಶಿಯಂ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಈ ಬೀಜಗಳನ್ನು ಸೇವಿಸುವುದರಿಂದ ಕ್ಯಾನ್ಸರ್, ಸಂಧಿವಾತ, ಮಧುಮೇಹ, ಆಮ್ಲೀಯತೆ, ಮಲಬದ್ಧತೆ, ಹೃದಯದ ತೊಂದರೆಗಳನ್ನು ನಿವಾರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...