alex Certify ಈ ನೈಸರ್ಗಿಕ ಪಾನೀಯ ಸೇವನೆಯಿಂದ ಬೇಗನೆ ಕಡಿಮೆಯಾಗತ್ತೆ ತೂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನೈಸರ್ಗಿಕ ಪಾನೀಯ ಸೇವನೆಯಿಂದ ಬೇಗನೆ ಕಡಿಮೆಯಾಗತ್ತೆ ತೂಕ  

ತೂಕ ಜಗತ್ತಿನ ಬಹುತೇಕ ಜನರನ್ನು ಕಾಡುತ್ತಿರುವ ಬಹಳ ದೊಡ್ಡ ಸಮಸ್ಯೆ. ಮಧ್ಯವಯಸ್ಸಿನವರಷ್ಟೇ ಅಲ್ಲ, ಯುವಜನತೆ ಕೂಡ ಅಧಿಕ ತೂಕ, ಬೊಜ್ಜಿನ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಒಮ್ಮೆ ಹೊಟ್ಟೆ ಮತ್ತು ಸೊಂಟದ ಸುತ್ತ ಕೊಬ್ಬು ಹೆಚ್ಚಾದರೆ ಅದನ್ನು ಕಡಿಮೆ ಮಾಡುವುದು ತುಂಬಾ ಕಷ್ಟದ ಕೆಲಸ. ತೂಕವನ್ನು ಕಳೆದುಕೊಳ್ಳಲು ಕಟ್ಟುನಿಟ್ಟಾದ ಆಹಾರ ಮತ್ತು ಶಿಸ್ತುಬದ್ಧ  ಜೀವನ ಕ್ರಮವನ್ನು ಆಶ್ರಯಿಸಬೇಕು.

ಎಳನೀರು ಕೂಡ ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಎಳನೀರಿನಿಂದ ಆರೋಗ್ಯಕ್ಕೆ ಕೂಡ ಸಾಕಷ್ಟು ಪ್ರಯೋಜನಗಳಿವೆ. ಎಳನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ, ಆದರೆ ಇದು ಪೊಟ್ಯಾಸಿಯಮ್ ಮತ್ತು ನೈಸರ್ಗಿಕ ಕಿಣ್ವಗಳ ಸಮೃದ್ಧ ಮೂಲವಾಗಿದೆ. ಎಳನೀರು ಸೇವನೆಯಿಂದ ನಮ್ಮ ದೇಹ ಮತ್ತು ಮನಸ್ಸು ದಿನವಿಡೀ ಉಲ್ಲಾಸಭರಿತವಾಗಿರುತ್ತದೆ.

ಇದನ್ನು ದಿನದ ಯಾವುದೇ ಸಮಯದಲ್ಲಿ ಕುಡಿಯಬಹುದು. ಏಕೆಂದರೆ ಎಳನೀರು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಚರ್ಮಕ್ಕೂ ಇದರಿಂದ ಸಾಕಷ್ಟು ಲಾಭಗಳಿವೆ. ಚರ್ಮದ ಕಾಂತಿಯನ್ನು ಇದು ಹೆಚ್ಚಿಸಬಲ್ಲದು. ಆದರೆ ತೂಕ ಇಳಿಸಲೆಂದೇ ಎಳನೀರು ಸೇವನೆ ಮಾಡ್ತಾ ಇದ್ರೆ ಅದಕ್ಕೆ ನಿರ್ದಿಷ್ಟ ಸಮಯವಿದೆ. ಆ ಸಮಯದಲ್ಲಿ ಎಳನೀರು ಸೇವನೆ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ.

ಎಳನೀರು ನಮ್ಮ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ಈ ಪಾನೀಯದಲ್ಲಿರುವ ಜೈವಿಕ-ಸಕ್ರಿಯ ಕಿಣ್ವಗಳ ಸಹಾಯದಿಂದ ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಬಹುದು. ಎಳನೀರು ಕುಡಿದರೆ ಬೇಗನೆ ಹಸಿವಾಗುವುದಿಲ್ಲ. ಇದರಿಂದಾಗಿ ನೀವು ಆಹಾರವನ್ನು ಕಡಿಮೆ ಸೇವಿಸುತ್ತೀರ. ಪರಿಣಾಮ ನಿಧಾನವಾಗಿ ತೂಕ ಕಡಿಮೆಯಾಗುತ್ತದೆ.

ಎಳನೀರನ್ನು ದಿನಕ್ಕೆ 3 ರಿಂದ 4 ಬಾರಿ ಕುಡಿಯಬಹುದು. ಆದರೆ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೈಸರ್ಗಿಕ ಪಾನೀಯವನ್ನು ಕುಡಿಯಿರಿ. ಇದು ಬೆಳಗಿನ ಬೇನೆ, ಎದೆಯುರಿ ಮುಂತಾದ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ. ಎಳನೀರಿನಲ್ಲಿರುವ ಲಾರಿಕ್ ಆಮ್ಲವು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...