alex Certify ಈ ನಟಿಯ ಸಿನಿಮಾಗಳಿಗೆ ಹಾಡು ಹೇಳಲು ನನಗೆ ಖುಷಿಯಾಗುತ್ತಿತ್ತು ಎಂದಿದ್ದರು ಗಾನ ಕೋಗಿಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಟಿಯ ಸಿನಿಮಾಗಳಿಗೆ ಹಾಡು ಹೇಳಲು ನನಗೆ ಖುಷಿಯಾಗುತ್ತಿತ್ತು ಎಂದಿದ್ದರು ಗಾನ ಕೋಗಿಲೆ…!

ಹಿರಿಯ ಗಾಯಕಿ ಲತಾ ಮಂಗೇಶ್ಕರ್​​ರ ಸಾವಿನ ಸುದ್ದಿಯಿಂದ ದೇಶದ ಜನತೆ ಇನ್ನೂ ಹೊರಬಂದಿಲ್ಲ. ದೀಪಿಕಾ, ಪ್ರಿಯಾಂಕಾ ಚೋಪ್ರಾ, ಅಕ್ಷಯ್​ ಕುಮಾರ್​, ಅಭಿಷೇಕ್​ ಬಚ್ಛನ್​ ಸೇರಿದಂತೆ ಸಾಕಷ್ಟು ಮಂದಿ ತಾರೆಯರು ಸೋಶಿಯಲ್​ ಮೀಡಿಯಾದಲ್ಲಿ ನೆಚ್ಚಿನ ಗಾಯಕಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಅನೇಕ ತಾರೆಯರ ಸಿನಿಮಾಗಳಿಗೆ ಲತಾ ಮಂಗೇಶ್ಕರ್​ ತಮ್ಮ ಸುಮಧುರ ಕಂಠದ ಮೂಲಕ ಹಾಡನ್ನು ಹಾಡಿದ್ದಾರೆ. ಮಧುಬಾಲಾರಿಂದ ಹಿಡಿದು ಮಾಧುರಿ ದೀಕ್ಷಿತ್​​ರವರೆಗೆ ಈ ಲಿಸ್ಟ್​ ತುಂಬಾನೇ ದೊಡ್ಡದಿದೆ.

ತಮ್ಮ ವೃತ್ತಿ ಜೀವನದಲ್ಲಿ ಲತಾ ಮಂಗೇಶ್ಕರ್​ ಸಾಕಷ್ಟು ಬಾಲಿವುಡ್​ ನಟಿಯರ ನೃತ್ಯಗಳಿಗೆ ದನಿಯಾಗಿದ್ದಾರೆ. 2020ರ ಸೆಪ್ಟೆಂಬರ್​ 28ರಂದು ತಮ್ಮ ಜನ್ಮದಿನದ ಸಂದರ್ಶನದಲ್ಲಿ ನಟಿ ಲತಾ ಮಂಗೇಶ್ಕರ್​ ನನ್ನ ದನಿಗೆ ನಿಜವಾಗಿಯೂ ತೆರೆ ಮೇಲೆ ನ್ಯಾಯ ನೀಡಿದ ನಟಿ ಯಾರು ಎಂಬುದನ್ನು ರಿವೀಲ್​ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರ ನೀಡಲು ಸಾಕಷ್ಟು ಮುಜುಗರ ವ್ಯಕ್ತಪಡಿಸಿದ ಲತಾ ಮಂಗೇಶ್ಕರ್​ ನೂತನ್​ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.

ಈ ಪ್ರಶ್ನೆಗೆ ಉತ್ತರ ನೀಡುವುದು ನಿಜಕ್ಕೂ ಕಷ್ಟಕರವಾಗಿದೆ. ಮಧುಬಾಲಾ, ಮೀನಾ ಕುಮಾರಿಯಿಂದ ಹಿಡಿದು ಶ್ರೀದೇವಿ, ಮಾಧುರಿ ದೀಕ್ಷಿತ್​​ರವರೆಗೂ ಎಲ್ಲರೂ ನನ್ನ ಹಾಡುಗಳಿಗೆ ವಿಶೇಷ ಎನಿಸಿದ್ದಾರೆ. ಆದರೆ ನೀವು ಒಂದೇ ಹೆಸರನ್ನು ಆಯ್ಕೆ ಮಾಡಬೇಕು ಎಂದಿದ್ದಕ್ಕೆ ನಾನು ನೂತನ್​​ರ ಹೆಸರನ್ನು ಆಯ್ಕೆ ಮಾಡುತ್ತೇನೆ. ಅವರು ಕೂಡ ಒಬ್ಬ ಗಾಯಕಿ. ಅವರು ನನ್ನ ಹಾಡುಗಳನ್ನು ತೆರೆಯ ಮೇಲೆ ಗುನುಗುವಾಗ ನಿಜಕ್ಕೂ ಹಾಡುತ್ತಿದ್ದರು ಎಂದು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...