alex Certify ಈ ನಟನಿಗೆ ಕಪ್ಪು ಬಣ್ಣದ ಕೋಟ್​ ಧರಿಸದಂತೆ ಆದೇಶ ನೀಡಿತ್ತಾ ಕೋರ್ಟ್​..? ಇಲ್ಲಿದೆ ಹಳೆ ಸುದ್ದಿಯೊಂದರ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಟನಿಗೆ ಕಪ್ಪು ಬಣ್ಣದ ಕೋಟ್​ ಧರಿಸದಂತೆ ಆದೇಶ ನೀಡಿತ್ತಾ ಕೋರ್ಟ್​..? ಇಲ್ಲಿದೆ ಹಳೆ ಸುದ್ದಿಯೊಂದರ ಹಿಂದಿನ ಅಸಲಿ ಸತ್ಯ

ಬಾಲಿವುಡ್​ನ ಎವರ್​ಗ್ರೀನ್​ ಹೀರೋ ದೇವ್​ ಆನಂದ್​ ಬಗ್ಗೆ ನೀವು ಕೇಳಿರಬಹುದು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ದೇವ್​ ಆನಂದ್​ ಒಂದು ಕಾಲದಲ್ಲಿ ಯುವತಿಯರ ನಿದ್ದೆ ಕದ್ದಿದ್ದಂತಹ ಚೆಲುವಾಂತ ನಟ. ದೇವ್​ ಆನಂದ್​ ನಟಿಸಿರುವ ಹರೇ ಕೃಷ್ಣ ಹರೇ ನಾಮ್​, ದೇಸ್​ ಪರದೇಸ್​ನಂತಹ ಸಿನಿಮಾಗಳು ಈಗಲೂ ಕೂಡ ಸಿನಿಪ್ರಿಯರ ಮನದಲ್ಲಿ ಜೀವಂತವಾಗಿದೆ. ಅಂದಹಾಗೆ ಈ ನಟನಿಗೆ ಕೋರ್ಟ್​ ಒಂದು ಸಾರ್ವಜನಿಕವಾಗಿ ನೀವು ಎಲ್ಲಿಯೂ ಕಪ್ಪು ಬಣ್ಣದ ಕೋಟ್​ ಧರಿಸಬಾರದು ಎಂದು ತಾಕೀತು ಮಾಡಿತ್ತು ಎಂಬ ವಿಚಾರ ನಿಮಗೆ ತಿಳಿದಿದೆಯೇ..?

ಹೌದು…! ಇಂತಹದ್ದೊಂದು ಘಟನೆಯು ಬಾಲಿವುಡ್​ನಲ್ಲಿ ನಡೆದಿತ್ತು ಎನ್ನಲಾಗಿದೆ. ದೇವ್​ ಆನಂದ್​​ ಎಷ್ಟರ ಮಟ್ಟಿಗೆ ಫೇಮಸ್​ ಆಗಿದ್ದ ನಟ ಅಂದರೆ ಮಹಿಳಾ ಅಭಿಮಾನಿಗಳು ಇವರನ್ನು ಕಪ್ಪು ಬಣ್ಣದ ಕೋಟ್​ನಲ್ಲಿ ನೋಡಲು ಮುಗಿಬೀಳುತ್ತಿದ್ದರಂತೆ.

1950 ಹಾಗೂ 1960ರ ದಶಕದಲ್ಲಿ ದೇವ್​ ಆನಂದ್​ರ ಸ್ಟಾರ್​ಡಂ ಎಷ್ಟರ ಮಟ್ಟಿಗೆ ಇತ್ತು ಅಂದರೆ ಅದನ್ನು ಊಹಿಸಲೂ ನಿಮ್ಮಿಂದ ಸಾಧ್ಯವಿಲ್ಲ. ಅದರಲ್ಲೂ ಮಹಿಳಾ ಮಣಿಯರಂತೂ ದೇವ್​ ಆನಂದ್​ರನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಜೀವವನ್ನು ಪಣಕ್ಕಿಡಲೂ ಸಹ ತಯಾರಿದ್ದರಂತೆ.

1958ರಲ್ಲಿ ದೇವ್​ ಆನಂದ್​ರ ಕಾಲಾ ಪಾನಿ ಸಿನಿಮಾ ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ದೇವ್​ ಆನಂದ್​ ಜೊತೆಯಲ್ಲಿ ನಟಿ ಮಧುಬಾಲಾ ಹಾಗೂ ನಳಿನಿ ಜಯವಂತ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಕಪ್ಪು ಬಣ್ಣದ ಕೋಟ್​ ಧರಿಸಿದ್ದ ದೇವ್​ ಆನಂದ್​ ಎಷ್ಟರ ಮಟ್ಟಿಗೆ ಸುಂದರವಾಗಿ ಕಾಣುತ್ತಿದ್ದರು ಅಂದರೆ ಯುವತಿಯೊಬ್ಬಳು ಕಟ್ಟಡದಿಂದ ಜಿಗಿದು ತನ್ನ ಜೀವವನ್ನೇ ಕಳೆದುಕೊಂಡಿದ್ದಳಂತೆ..!

ದೇವ್​ ಆನಂದ್​ರನ್ನು ನೋಡಲು ಯುವತಿಯರು ಕಟ್ಟಡಗಳಿಂದ ಜಿಗಿಯುತ್ತಿದ್ದರಂತೆ. ಹೀಗಾಗಿಯೇ ಕೋರ್ಟ್​ನಲ್ಲಿ ದೇವ್​ ಆನಂದ್​ರಿಗೆ ಇನ್ಮುಂದೆ ಕಪ್ಪು ಬಣ್ಣದ ಕೋಟ್​ ಧರಿಸದಂತೆ ಸೂಚಿಸಲಾಗಿತ್ತು ಎಂದು ಹೇಳಲಾಗುತ್ತದೆ.

ಆದರೆ ಈ ಬಗ್ಗೆ ಯಾವುದೇ ಸೂಕ್ತ ಪುರಾವೆಗಳಿಲ್ಲ. ನಟ ದೇವ್​ ಆನಂದ್​ ತಮ್ಮ ಜೀವನ ಚರಿತ್ರೆ ಪುಸ್ತಕದಲ್ಲಿ ಇದೊಂದು ವದಂತಿ ಎಂದು ಹೇಳಿದ್ದಾರೆ. ಹೀಗಾಗಿ ಇದರಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಆದರೆ ನೀವು ಗೂಗಲ್​​ನಲ್ಲಿ ಈಗಲೂ ಕೂಡ ದೇವ್​ ಆನಂದ್​ ಬಗ್ಗೆ ಹುಡುಕಾಟ ನಡೆಸಿದರೆ ನಿಮಗೆ ಮೊದಲು ಕಾಣ ಸಿಗುವ ವಿಚಾರವೇ ಈ ಕಪ್ಪು ಬಣ್ಣದ ಕೋಟ್​ ಬ್ಯಾನ್​ ಆದ ಕತೆ..!

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...