alex Certify ಈ ದೇಶದಲ್ಲಿದೆ ವಿಚಿತ್ರ ಶಾಪಗ್ರಸ್ತ ಗ್ರಾಮ…..! ಪ್ರೌಢಾವಸ್ಥೆಯಲ್ಲಿ ಗಂಡಾಗಿ ಬದಲಾಗುತ್ತಾರೆ ಎಲ್ಲಾ ಹೆಣ್ಣುಮಕ್ಕಳು……!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶದಲ್ಲಿದೆ ವಿಚಿತ್ರ ಶಾಪಗ್ರಸ್ತ ಗ್ರಾಮ…..! ಪ್ರೌಢಾವಸ್ಥೆಯಲ್ಲಿ ಗಂಡಾಗಿ ಬದಲಾಗುತ್ತಾರೆ ಎಲ್ಲಾ ಹೆಣ್ಣುಮಕ್ಕಳು……!!

ಇದೊಂದು ವಿಚಿತ್ರವಾದ ಹಳ್ಳಿ. ಇಲ್ಲಿನ ಹೆಣ್ಣುಮಕ್ಕಳೆಲ್ಲ ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಪುರುಷರಾಗಿ ಬದಲಾಗ್ತಾರೆ. ಡೊಮಿನಿಕನ್ ರಿಪಬ್ಲಿಕ್ ದೇಶದ ಲಾ ಸಲಿನಾಸ್ ಎಂಬ ಹಳ್ಳಿಯಲ್ಲಿ ಇಂತಹ ವಿಲಕ್ಷಣ ಘಟನೆಗಳು ನಡೆಯುತ್ತಲೇ ಇವೆ. ಈ ಲಿಂಗ ಬದಲಾವಣೆ ವಿಜ್ಞಾನಿಗಳಿಂದಲೂ ಬಿಡಿಸಲಾಗದಂತಹ ಒಗಟಾಗಿ ಉಳಿದುಕೊಂಡಿದೆ. ಇಲ್ಲಿನ ಹುಡುಗಿಯರಿಗೆ ನಿರ್ದಿಷ್ಟ ವಯಸ್ಸಿನ ನಂತರ ಲಿಂಗ ಬದಲಾವಣೆ ತಂತಾನೇ ಆಗುತ್ತಿದೆ. ಇದಕ್ಕೆ ಕಾರಣ ಪತ್ತೆ ಮಾಡಲು ವಿಜ್ಞಾನಿಗಳು ದಶಕಗಳಿಂದಲೂ ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಈ ರಹಸ್ಯ ಮಾತ್ರ ಬಯಲಾಗಿಲ್ಲ.

ಈ ರೀತಿ ಹೆಣ್ಣುಮಕ್ಕಳು ಗಂಡಾಗಿ ಬದಲಾಗುವುದಕ್ಕೆ ಕಾರಣ ಗ್ರಾಮಕ್ಕೆ ಅಂಟಿರುವ ಶಾಪ ಅನ್ನೋದು ಅಲ್ಲಿನ ಸ್ಥಳೀಯರ ನಂಬಿಕೆ. ಈ ಗ್ರಾಮದಲ್ಲಿ 12 ನೇ ವಯಸ್ಸಿಗೆ ಎಲ್ಲಾ ಹುಡುಗಿಯರು ಹುಡುಗರಾಗಿ ಬದಲಾಗುತ್ತಾರೆ. ಅಂತಹ ಮಕ್ಕಳನ್ನು ‘ಗುಡೋಚೆ’ ಎಂದು ಕರೆಯಲಾಗುತ್ತದೆ. ಸ್ಥಳೀಯ ಭಾಷೆಯಲ್ಲಿ ಈ ಪದದ ಅರ್ಥ ನಪುಂಸಕ. ಇಂತಹ ಘಟನೆಗಳಿಂದಾಗಿ ಸ್ಥಳೀಯರು ಹೆಣ್ಣುಮಗು ಹುಟ್ಟಿದರೆ ಭಯಪಡುತ್ತಿದ್ದಾರೆ. ಹೆಣ್ಣು ಮಗು ಜನಿಸಿದ್ರೆ ಹೆತ್ತವರ ರೋದನ ಮುಗಿಲು ಮುಟ್ಟುವಂತಿರುತ್ತದೆ. ಈ ವಿಚಿತ್ರ ಘಟನೆಗಳಿಂದ ಗ್ರಾಮದಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುತ್ತಿದೆ.

ವೈದ್ಯರೇನು ಹೇಳ್ತಾರೆ?

ಈ ರೀತಿ ಹೆಣ್ಣುಮಕ್ಕಳು ಗಂಡಾಗಿ ಬದಲಾಗುವುದಕ್ಕೆ ಕಾರಣ ಕೆಲವು ರೀತಿಯ ಆನುವಂಶಿಕ ಕಾಯಿಲೆ ಅನ್ನೋದು ವೈದ್ಯರ ಅಭಿಪ್ರಾಯ. ಇದನ್ನು ‘ಸ್ಯೂಡೋಹೆರ್ಮಾಫ್ರೋಡೈಟ್’ ಎಂದು ಕರೆಯಲಾಗುತ್ತದೆ. ಈ ಕಾಯಿಲೆಯಿದ್ದರೆ ಹುಡುಗಿ ಪ್ರೌಢಾವಸ್ಥೆಗೆ ಬರುವ ಸಮಯದಲ್ಲಿ ಹುಡುಗನಾಗಿ ಬದಲಾಗುತ್ತಾಳೆ. ಧ್ವನಿಯು ಬದಲಾಗಲು ಪ್ರಾರಂಭಿಸುತ್ತದೆ. ಅನೇಕ ಸಂಶೋಧಕರು ಈ ಕಾಯಿಲೆಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ, ಆದರೆ ಇಲ್ಲಿಯವರೆಗೆ ಯಾವುದೇ ಯಶಸ್ಸನ್ನು ಸಾಧಿಸಲಾಗಿಲ್ಲ. ಈ ಗ್ರಾಮವು ಸಮುದ್ರ ತೀರದಲ್ಲಿದೆ ಮತ್ತು ಗ್ರಾಮದ ಜನಸಂಖ್ಯೆ ಸುಮಾರು 6 ಸಾವಿರ. ವಿಚಿತ್ರ ನಿಗೂಢತೆಯಿಂದಾಗಿ ಸಂಶೋಧನೆಯ ಕೇಂದ್ರವಾಗಿ ಮಾರ್ಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...