alex Certify ಈ ದೇವಸ್ಥಾನಕ್ಕೆ ಅರ್ಪಿಸುವ ಹಾಲು ನೀಲಿ ಬಣ್ಣಕ್ಕೆ ತಿರುಗುತ್ತದೆಯಂತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇವಸ್ಥಾನಕ್ಕೆ ಅರ್ಪಿಸುವ ಹಾಲು ನೀಲಿ ಬಣ್ಣಕ್ಕೆ ತಿರುಗುತ್ತದೆಯಂತೆ

ಭಾರತದಲ್ಲಿನ ದೇವಾಲಯಗಳ ಇತಿಹಾಸ ಬಹಳ ಹಳೆಯದು. ಇಂತಹ ಹಲವು ದೇವಾಲಯಗಳಲ್ಲಿ ಕೆಲವು ನಿಗೂಢ ಘಟನೆಗಳು ನಡೆದಿದ್ದು, ಅದು ಜನರನ್ನು ಅಚ್ಚರಿ ಮೂಡಿಸುತ್ತದೆ. ಅದೇ ರೀತಿಯಲ್ಲಿ ದಕ್ಷಿಣ ಭಾರತದ ದೇವಾಯಲವೊಂದಿದೆ. ಈ ದೇವಾಲಯವು ಕೇತು ದೇವನಿಗೆ ಸೇರಿದೆ. ವಾಸ್ತವವಾಗಿ ಈ ದೇವಾಲಯದಲ್ಲಿ ಹಾಲನ್ನು ಅರ್ಪಿಸಿದರೆ ಅದರ ಬಣ್ಣ ಬದಲಾಗುತ್ತದೆಯಂತೆ.‌

ಈ ದೇವಾಲಯ ಕೇರಳದ ಕಾವೇರಿ ನದಿಯ ದಡದಲ್ಲಿದೆ. ಕೀಜಪೆರುಂಪಲ್ಲಂ ಗ್ರಾಮದಲ್ಲಿರುವ ಈ ದೇವಾಲಯವನ್ನು ನಾಗನಾಥಸ್ವಾಮಿ ಅಥವಾ ಕೇತಿ ಸ್ಥಳ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಮುಖ್ಯ ದೇವರು ಶಿವ. ಇದರ ಜೊತೆ ರಾಹು ಕೇತು ಪ್ರತಿಮೆಗಳು ಇಲ್ಲಿವೆ. ಈ ದೇವಸ್ಥಾನದಲ್ಲಿ ರಾಹು ದೇವನಿಗೆ ಹಾಲನ್ನು ಅರ್ಪಿಸಲಾಗುತ್ತದೆ. ಕೇತು ದೋಷದಿಂದ ಬಳಲುತ್ತಿರುವವರು ರಾಹುವಿಗೆ ಹಾಲನ್ನು ಅರ್ಪಿಸಿದರೆ ಅದು ನೀಲಿ ಬಣ್ಣಕ್ಕೆ ತಿರುಗುತ್ತದೆ ಎನ್ನಲಾಗುತ್ತದೆ.

ಸೂರ್ಯಗ್ರಹಣದ ದಿನ ದೋಷ ಪರಿಹಾರಕ್ಕೆ ಮಾಡಿ ಈ ಕೆಲಸ

ದಂತಕಥೆಯ ಪ್ರಕಾರ ಕೇತುವು ಋಷಿಗಳ ಶಾಪವನ್ನು ತೊಡೆದು ಹಾಕಲು ಶಿವನನ್ನು ಮೆಚ್ಚಿಸಲು ಈ ದೇವಾಲಯದಲ್ಲಿ ಶಿವನನ್ನು ಪೂಜಿಸಿದ್ದಾನೆ. ಶಿವರಾತ್ರಿಯ ದಿನ ಶಿವನು ಕೇತುವಿಗೆ ಕಾಣಿಸಿಕೊಂಡು ಶಾಪ ಮುಕ್ತನಾದ ಎನ್ನಲಾಗಿದೆ. ಕೇತುವನ್ನು ಹಾವುಗಳ ದೇವರೆಂದು ಕರೆಯುತ್ತಾರೆ. ಏಕೆಂದರೆ ಅದರ ತಲೆಯು ಮಾನವನ ಮತ್ತು ಹಾವಿನ ಮುಂಡವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...