ಶನಿ ಹೆಸರು ಕೇಳಿದ್ರೆ ಜನರ ಮನಸ್ಸಿನಲ್ಲಿ ಆತಂಕ ಕಾಡುತ್ತದೆ. ಜಾತಕದಲ್ಲಿ ಶನಿ ದೋಷವಿದ್ದವರು ಶನಿ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಶನಿಗೂ ಪಾದರಕ್ಷೆಗೂ ಸಂಬಂಧವಿದೆ. ಶಾಸ್ತ್ರಗಳಲ್ಲಿ ಶನಿ ಹಾಗೂ ಪಾದರಕ್ಷೆ ಬಗ್ಗೆ ಹೇಳಲಾಗಿದೆ.
ಶನಿವಾರ ಪಾದರಕ್ಷೆ ಕಳುವಾದ್ರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಶನಿವಾರ ಪಾದರಕ್ಷೆ ಕಳುವಾದ್ರೆ ಹಿಡಿದ ಶನಿ ದೂರವಾಯ್ತು ಎಂದರ್ಥವಂತೆ. ನಿಮ್ಮ ಪಾದರಕ್ಷೆ ಕೂಡ ಶನಿವಾರ ಕಳುವಾಗಿದ್ದರೆ ಖುಷಿಪಡಿ. ನಿಮ್ಮ ಎಲ್ಲ ಕಷ್ಟ ಇಂದಿಗೆ ಮುಗಿಯಿತು ಎಂದರ್ಥ. ಹೆಗಲೇರಿದ್ದ ಶನಿ ನಿಮಗೆ ಮುಕ್ತಿ ನೀಡಿದ್ದಾನೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಓಮಿಕ್ರಾನ್ ರೂಪಾಂತರದಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ: ಅಧ್ಯಯನದಲ್ಲಿ ಅಘಾತಕಾರಿ ಮಾಹಿತಿ ಬಹಿರಂಗ
ಚರ್ಮದಿಂದ ಮಾಡಿದ ವಸ್ತು ಹಾಗೂ ಪಾದದಲ್ಲಿ ಶನಿ ವಾಸವಾಗಿರುತ್ತಾನೆ. ಇದೇ ಕಾರಣಕ್ಕೆ ಚರ್ಮದಿಂದ ಮಾಡಿದ ಪಾದಕ್ಕೆ ಧರಿಸುವ ಚಪ್ಪಲಿ ಶನಿವಾರ ಕಳುವಾದ್ರೆ ಮಂಗಳಕರ. ಇದೇ ಕಾರಣಕ್ಕೆ ಕೆಲವರು ಶನಿವಾರ ದೇವಸ್ಥಾನಕ್ಕೆ ಹೋದವರು ಚಪ್ಪಲಿಯನ್ನು ಬಿಟ್ಟು ಮನೆಗೆ ಬರ್ತಾರೆ. ಶನಿಯ ಅಶುಭ ಪ್ರಭಾವ ಕಡಿಮೆಯಾಗಲಿ ಎನ್ನುವ ಕಾರಣಕ್ಕೆ ಹೀಗೆ ಮಾಡ್ತಾರೆ.