
ಚರ್ಮವು ಯಾವಾಗಲೂ ಹೊಳೆಯುತ್ತಿರಬೇಕೆಂಬ ಆಸೆ ಹಲವರಿಗಿದೆ. ಆದರೆ ಅವರು ಮಾಡುವಂತಹ ಕೆಲವು ತಪ್ಪು ಮುಖದ ಚರ್ಮವು ಹಾಳಾಗುತ್ತದೆ. ಹಾಗಾಗಿ ಆ ತಪ್ಪುಗಳು ಯಾವುದೆಂಬುದನ್ನು ತಿಳಿದು ಚರ್ಮದ ರಕ್ಷಣೆ ಮಾಡಿ.
*ಚರ್ಮವನ್ನು ಹೊಳೆಯುವಂತೆ ಮಾಡಲು ಆಳವಾದ ಶುದ್ಧೀಕರಣ ಅಗತ್ಯ. ಹಾಗಾಗಿ ಮುಖವನ್ನು ಬೆಳಿಗ್ಗೆ ಮೇಕಪ್ ಹಚ್ಚುವ ಮುನ್ನ ಹಾಗೂ ರಾತ್ರಿ ಮಲಗುವ ಮುನ್ನ ಮುಖವನ್ನು ವಾಶ್ ಮಾಡಬೇಕು. ಇದರಿಂದ ನಿಮ್ಮ ಮುಖ ಸುಂದರವಾಗಿ ಕಾಣುತ್ತದೆ.
* ಎಣ್ಣೆಯುಕ್ತ ಚರ್ಮದವರು ಮಾಯಿಶ್ಚರೈಸರ್ ಹಚ್ಚುವುದನ್ನು ತಪ್ಪಿಸುತ್ತಾರೆ. ಆದರೆ ಇದರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಸುಕ್ಕುಗಳು, ಗೆರೆಗಳು ಮೂಡುತ್ತದೆ. ಹಾಗಾಗಿ ಪ್ರತಿದಿನ ಮಾಯಿಶ್ಚರೈಸರ್ ಹಚ್ಚಿ.