alex Certify ಈ ಡಯಟ್ ಪೇಯ ಇಳಿಸುತ್ತೆ ದೇಹ ತೂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಡಯಟ್ ಪೇಯ ಇಳಿಸುತ್ತೆ ದೇಹ ತೂಕ

ಘನ ಆಹಾರ ಮಾತ್ರವಲ್ಲದೆ ಕೆಲವು ದ್ರವ ಆಹಾರಗಳ ಮೂಲಕವೂ ದೇಹ ತೂಕ ಇಳಿಸಿಕೊಳ್ಳಲು ಸಾಧ್ಯವಿದೆ.

ಕಠಿಣ ಡಯಟ್ ಮಾಡುವಾಗ ಪೇಯಗಳ ಆಯ್ಕೆ ಸೂಕ್ತವಾಗಿರಬೇಕು. ಅಂತ ಡಯಟ್ ಪೇಯಗಳ ವಿವರ ಇಲ್ಲಿದೆ.

ನೀರು
ಎಂದಿಗೂ ಅತ್ಯುತ್ತಮ ಪಾನೀಯವಾಗಿರುವ ನೀರು ದೇಹ ತೂಕ ಇಳಿಸಲು ಅತ್ಯಂತ ಸಹಕಾರಿಯಾಗಿದೆ. ನೀರಿಗೆ ಸ್ವಲ್ಪ ನಿಂಬೆ ರಸ ಹಿಂಡಿ ಕುಡಿದರೆ ಇನ್ನೂ ಒಳ್ಳೆಯದು. ವರ್ಕೌಟ್ ಆರಂಭಿಸುವ ಮೊದಲು ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಕೊಬ್ಬು ಚೆನ್ನಾಗಿ ಕರಗುತ್ತದೆ.

ತರಕಾರಿ ಸೂಪ್
ಅತ್ಯಂತ ಪೌಷ್ಟಿಕ ದ್ರವಾಹಾರ ಆದ ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ರಾತ್ರಿಯೂಟ ಮಾಡುವ ಮೊದಲು ತರಕಾರಿ ಸೂಪ್ ಕುಡಿದರೆ ಅತ್ಯಂತ ಕಡಿಮೆ ಕ್ಯಾಲೋರಿ ದೇಹ ಸೇರುತ್ತದೆ.

ಗ್ರೀನ್ ಟೀ
ಹಸಿರು ಚಹಾ ತೂಕ ಇಳಿಸುವುದು ಮಾತ್ರವಲ್ಲದೆ, ದೇಹದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ದಿನಕ್ಕೆ ಎರಡು ಬಾರಿ ಕುಡಿದರೆ ದೇಹತೂಕ ಗಣನೀಯ ಪ್ರಮಾಣದಲ್ಲಿ ಇಳಿಯುತ್ತದೆ. ಇದರ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.

ವೆಜಿಟೇಬಲ್ ಜ್ಯೂಸ್
ವಿವಿಧ ತರಕಾರಿಗಳಿಂದ ಮಾಡಿದ ಜ್ಯೂಸ್ ತುಂಬಾ ಒಳ್ಳೆಯದು. ಇದರಿಂದ ತೂಕ ಕಡಿಮೆಯಾಗುತ್ತದೆ ಮತ್ತು ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶವೂ ಸಿಗುತ್ತದೆ.

ಸ್ಕಿಮ್ಮೆಡ್ ಮಿಲ್ಕ್
ತೆಳು ಪ್ರೋಟೀನ್, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿರುವ ಈ ಹಾಲಿನ ಸೇವನೆಯಿಂದ ಮೂಳೆಗಳು ಸದೃಢವಾಗುತ್ತವೆ. ಯಾವುದೇ ಕ್ಯಾಲೋರಿ ಇಲ್ಲದ ವಿಟಮಿನ್ ಸೇವಿಸಬೇಕಿದ್ದರೆ ಸ್ಕಿಮ್ಮೆಡ್ ಮಿಲ್ಕ್ ಬೆಸ್ಟ್.

ಬ್ಲಾಕ್ ಕಾಫಿ
ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಕಪ್ಪು ಕಾಫಿ ಕೊಬ್ಬು ಕಡಿಮೆಗೊಳಿಸಿ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಕೆಫಿನ್ ವಿಶ್ರಾಂತಿ ಪಡೆಯುತ್ತಿರುವಾಗಲೂ ಕ್ಯಾಲೋರಿ ಕರಗಿಸುತ್ತದೆ. ಹಾಗಂತ ಇದನ್ನು ಖಾಲಿ ಹೊಟ್ಟೆಯಲ್ಲಿ ಮತ್ತು ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಸೇವಿಸಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...