ಬಾಯಿಂದ ವಾಸನೆ ಬರುವುದು, ಹಲ್ಲು ಹುಳುಕು, ಹಲ್ಲು ಹಳದಿ ಆಗಿರುವುದು ಇವು ತೀರಾ ಮುಜುಗರವನ್ನುಂಟು ಮಾಡುತ್ತದೆ. ದಿನಕ್ಕೆ ಎರಡು ಬಾರಿ ಹಲ್ಲು ತಿಕ್ಕಿದರೂ ಹಲ್ಲು ಬಿಳಿಯಾಗುವುದಿಲ್ಲ ಎಂಬ ಚಿಂತೆ ಕೆಲವರಿಗೆ ಇರುತ್ತದೆ.
ಇದರಿಂದ ಯಾರ ಬಳಿಯಾದರೂ ಮಾತನಾಡುವುದಕ್ಕೆ ಒಂದು ರೀತಿ ಆತ್ಮವಿಶ್ವಾಸವಿಲ್ಲದಂತೆ ಆಗುತ್ತದೆ. ಇಲ್ಲಿ ಮನೆಯಲ್ಲಿಯೇ ಸಿಗುವ ವಸ್ತು ಉಪಯೋಗಿಸಿಕೊಂಡು ಹಲ್ಲು ಬಿಳಿಯಾಗಿಸುವ ಟಿಪ್ಸ್ ಇದೆ ನೋಡಿ.
1 ಬೌಲ್ ಗೆ ½ ಚಮಚ ಉಪ್ಪು, ½ ಚಮಚ ಬೇಕಿಂಗ್ ಸೋಡಾ, 1 ಚಮಚದಷ್ಟು ತೆಂಗಿನೆಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಬ್ರಷ್ ನ ಸಹಾಯದಿಂದ ನಿಧಾನಕ್ಕೆ ನಿಮ್ಮ ಹಲ್ಲುಗಳ ಮೇಲೆ ತಿಕ್ಕಿ. ಇದನ್ನು ವಾರಕ್ಕೆ ಒಂದು ಬಾರಿ ಮಾಡಿದರೆ ಸಾಕು.
ಒಂದು ಬೌಲ್ ಗೆ 1/4 ಚಮಚದಷ್ಟು ಶುದ್ಧವಾದ ಕಹಿ ಬೇವಿನೆಣ್ಣೆಯನ್ನು ಹಾಕಿ ನಂತರ ½ ಟೀ ಸ್ಪೂನ್ ನಷ್ಟು ಉಪ್ಪು ಹಾಕಿ, ¼ ಟೀ ಸ್ಪೂನ್ ನಷ್ಟು ಸಾಸಿವೆ ಎಣ್ಣೆ ಹಾಕಿ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಇದನ್ನು ಬ್ರಷ್ ಗೆ ಹಾಕಿಕೊಂಡು ನಿಧಾನಕ್ಕೆ ತಿಕ್ಕಿ ಬಾಯಿ ತೊಳೆದುಕೊಳ್ಳಿ.