ನೀವು ದೊಡ್ಡವರಾದ ಮೇಲೆ ಏನು ಆಗುತ್ತೀರಿ ಎಂಬ ಪ್ರಶ್ನೆ ಮಕ್ಕಳು ಎದುರಿಸುತ್ತಾರೆ. ಬಹುತೇಕ ಮಕ್ಕಳ ಉತ್ತರ ಡಾಕ್ಟರ್, ಇಂಜಿನಿಯರ್, ಅಧಿಕಾರಿ, ಕ್ರೀಡಾಪಟು, ವಿಜ್ಞಾನಿ ಎಂಬ ಉತ್ತರ ಬರುತ್ತದೆ.
ಆದರೆ ನೀವು ಛತ್ತೀಸ್ಗಢದ ತುಳಸಿ ಗ್ರಾಮದಲ್ಲಿ ಹದಿಹರೆಯದವರಿಗೆ ಈ ಪ್ರಶ್ನೆಯನ್ನು ಕೇಳಿದರೆ, ಯೂಟ್ಯೂಬರ್ ಎಂಬ ಉತ್ತರ ಪಡೆಯುವ ಸಾಧ್ಯತೆಯಿದೆ.
ಈ ಹಳ್ಳಿಯಲ್ಲಿರುವ 3,000 ನಿವಾಸಿಗಳಲ್ಲಿ, ಸುಮಾರು ಒಂದು ಸಾವಿರ ಯಶಸ್ವಿ ಯೂಟ್ಯೂಬರ್ಗಳು ಇದ್ದಾರೆ. 85 ವರ್ಷ ವಯಸ್ಸಿನ ಅಜ್ಜಿ ಮತ್ತು 15 ವರ್ಷ ವಯಸ್ಸಿನ ಹುಡುಗನೂ ಇಲ್ಲಿ ಯೂಟ್ಯೂಬರ್. ಇವರ ನಡುವೆ ಯಾವುದೇ ಸ್ಪರ್ಧೆ ಏನೂ ಇಲ್ಲ ಎಂಬುದು ವಿಶೇಷ.
ಈ ಯೂಟ್ಯೂಬರ್ಗಳ ಗ್ರಾಮ ರಾಜ್ಯ ರಾಜಧಾನಿ ರಾಯ್ಪುರದಿಂದ 45 ಕಿಮೀ ದೂರದಲ್ಲಿದೆ, ಪ್ರತ್ಯೇಕ ಚಾನಲ್ಗಳನ್ನು ಹೊಂದಿರುವಾಗ, ವಿಷಯಕ್ಕಾಗಿ ಪರಸ್ಪರ ಸಹಕರಿಸುತ್ತಾರೆ ಮತ್ತು ಹೊಸಬರಿಗೆ ಸಹಾಯ ಮಾಡುತ್ತಾರೆ.
ಯೂಟ್ಯೂಬರ್ಗಳು ಆಗಾಗ್ಗೆ ಒಟ್ಟಿಗೆ ಸೇರುತ್ತಾರೆ ಮತ್ತು ವಿಷಯವನ್ನು ಪರಸ್ಪರ ಚರ್ಚೆ ಮಾಡಿ ನಿರ್ಧರಿಸುತ್ತಾರೆ. ನಂತರ ವಿಡಿಯೊದಲ್ಲಿ ನಟಿಸಲು ನಟರ ಆಯ್ಕೆ ನಡೆಯುತ್ತದೆ. ಗ್ರ್ರಾಮಸ್ಥರು ತಮ್ಮ ಪಾತ್ರವನ್ನು ನಿರ್ವಹಿಸಲು ತಕ್ಷಣವೇ ಒಪ್ಪುತ್ತಾರೆ.
55 ವರ್ಷದ ಪ್ಯಾರೇಲಾಲ್ ಹಳ್ಳಿಯಲ್ಲಿ ರಾಮಲೀಲಾ ನಾಟಕಗಳಲ್ಲಿ ನಟಿಸುತ್ತಿದ್ದರು, ಆದರೆ ಇಂದು ಅವರು ತಮ್ಮ ಹಳ್ಳಿಯನ್ನು ಮೀರಿ ಪ್ರಸಿದ್ಧರಾಗಿದ್ದಾರೆ. 15 ವರ್ಷದ ರಾಹುಲ್ ತನ್ನದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಲಕ್ಷ ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಮಧು ಕೋಸಲೆ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ತನ್ನ ಹಾಡುಗಳನ್ನು ಅಪ್ಲೋಡ್ ಮಾಡುತ್ತಾಳೆ ಮತ್ತು ಸಹ ಗ್ರಾಮಸ್ಥರು ನಿರ್ಮಿಸಿದ ಕಂಟೆಂಟ್ನಲ್ಲಿ ನಟಿಸುತ್ತಾಳೆ, ಇವೆಲ್ಲ ಒಂದಷ್ಟು ಉದಾಹರಣೆಗಳು.
ಅನೇಕರು ಈ ಪ್ರಯತ್ನದಿಂದ ಹಣವನ್ನು ಗಳಿಸುತ್ತಿದ್ದು, ಕ್ಯಾಮೆರಾ, ಮೈಕ್ನಂತಹ ಸಲಕರಣೆಗಳನ್ನು ಸಹ ಹಂಚಿಕೊಳ್ಳುತ್ತಾರೆ. ಇಲ್ಲಿ ಯಾರೂ ನೃತ್ಯ ಅಥವಾ ನಟನೆಯಲ್ಲಿ ಔಪಚಾರಿಕ ತರಬೇತಿ ಪಡೆದಿಲ್ಲ, ಆದರೆ ಅವರು ಪರಸ್ಪರ ಕಲಿಯುತ್ತಾರೆ ಎಂದು ಗ್ರಾಮದ ನಿವಾಸಿ ಚೇತನ್ ನಾಯಕ್ ಹೇಳುತ್ತಾರೆ.