alex Certify ಈ ಕಾರಣಕ್ಕೆ 5 ವರ್ಷ ದೂರವಾಗಿದ್ದರು ಬಾಲಿವುಡ್‌ ಸೂಪರ್‌ ಸ್ಟಾರ್ಸ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ 5 ವರ್ಷ ದೂರವಾಗಿದ್ದರು ಬಾಲಿವುಡ್‌ ಸೂಪರ್‌ ಸ್ಟಾರ್ಸ್‌…..!

ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟರು. ‘ಕರಣ್ ಅರ್ಜುನ್’ ಮತ್ತು ‘ಹಮ್ ತುಮ್ಹಾರೆ ಹೇ ಸನಮ್’ ಚಿತ್ರಗಳಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದಾರೆ. ಆದ್ರೆ 5 ವರ್ಷಗಳ ಕಾಲ ಸಲ್ಲು ಹಾಗೂ ಕಿಂಗ್‌ ಖಾನ್‌ ಮಧ್ಯೆ ಮಾತುಕತೆಯೇ ಇರಲಿಲ್ಲ.

ಇದಕ್ಕೆ ಕಾರಣ 2008ರಲ್ಲಿ ನಡೆದ ಒಂದು ಚಿಕ್ಕ ಜಗಳ. ನಟಿ ಕತ್ರಿನಾ ಕೈಫ್‌ ಬರ್ತಡೇ ಪಾರ್ಟಿಯಲ್ಲಿ ಶಾರುಖ್‌ ಹಾಗೂ ಸಲ್ಮಾನ್‌ ಕಿತ್ತಾಡಿಕೊಂಡು ದೂರವಾಗಿದ್ದರು. ಇದನ್ನು ಖುದ್ದು ಸಲ್ಮಾನ್‌ ಒಪ್ಪಿಕೊಂಡಿದ್ದೂ ಇದೆ. ಆ ಭಗವಂತನೇ ನಮ್ಮನ್ನು ಒಂದು ಮಾಡಬೇಕು ಅಂತಾ ಸಲ್ಲು ಅಸಹಾಯಕತೆ ವ್ಯಕ್ತಪಡಿಸಿದ್ದರು.

ಶಾರುಖ್‌ನನ್ನು ನಾನು ಅಣ್ಣನಂತೆ ಪ್ರೀತಿಸ್ತೇನೆ, ಆದ್ರೆ ಆತ ನನ್ನನ್ನು ನೋಯಿಸ್ತಾನೆ ಅನ್ನೋದು ಸಲ್ಮಾನ್‌ ಖಾನ್‌ರ ದೂರು. ಆದ್ರೆ ಶಾರುಖ್‌ ಮಾತ್ರ ಕ್ಷಮೆ ಕೇಳಲು ಸಿದ್ಧರಿರಲಿಲ್ಲ. ಕೊನೆಗೂ 2013ರಲ್ಲಿ ಖಾನ್‌ದ್ವಯರ ಮಧ್ಯೆ ಸಂಧಾನವಾಗಿದೆ.

ಬಾಬಾ ಸಿದ್ದಿಕಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಇಬ್ಬರೂ ಸೂಪರ್‌ ಸ್ಟಾರ್‌ಗಳು ಒಂದಾಗಿದ್ದಾರೆ. ಅದಾದ್ಮೇಲೆ ಜೊತೆಯಾಗಿ ಟ್ಯೂಬ್ಲೈಟ್‌ ಚಿತ್ರದಲ್ಲಿ ನಟಿಸಿದ್ದಾರೆ. ಆನಂದ್ ಎಲ್ ರೈ ಅವರ ‘ಝೀರೋ’ ಚಿತ್ರದಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ‘ಪಠಾಣ್’ ಚಿತ್ರದಲ್ಲಿ ಸಲ್ಲು ಹಾಗೂ ಶಾರುಖ್‌ ಒಟ್ಟಿಗೆ ನಟಿಸ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...